ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಹೃತಿಕ್ ರೋಷನ್: ಹೊಸ ಗರ್ಲ್‌ಫ್ರೆಂಡ್

 

ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದಕ್ಕೆ ಹೃತಿಕ್ ಶುಕ್ರವಾರ( ಜನವರಿ 28) ರಾತ್ರಿ ಬಾಲಿವುಡ್ ನಟಿ ಜೊತೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ಬರುವಾಗ, ಇಬ್ಬರೂ ಕೈ ಕೈ ಹಿಡಿದುಕೊಂಡು ಹೊರಬಂದಿದ್ದರು.ಇದು ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ಇಬ್ಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ ಹೌದು.. ಹೃತಿಕ್ ರೋಷನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವ ಮಾತು ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ವಿಚ್ಛೇದನದ ಬಳಿಕ ಹೃತಿಕ್ ರೋಷನ್ ಹೆಸರು ಯಾರೊಂದಿಗೂ ತಳುಕು ಹಾಕಿಕೊಂಡಿರಲಿಲ್ಲ. ತನ್ನ ಇಬ್ಬರು ಮಕ್ಕಳೊಂದಿಗೆ ಸಮಯ ಕಳೆಯುವ ಫೋಟೊಗಳಯ ಹರಿದಾಡಿದ್ದು ಬಿಟ್ಟರೆ, ಹೃತಿಕ್ ರೋಷನ್ ರೂಮರ್‌ಗಳ ಸುಳಿಗೆ ಸಿಕ್ಕಿಕೊಂಡಿರಲಿಲ್ಲ. ಈಗ ಬಾಲಿವುಡ್ ನಟಿ ಹಾಗೂ ಮ್ಯೂಸಿಷಿಯಲ್ ಜೊತೆ ಹೆಸರು ತಳುಕು ಹಾಕಿಕೊಂಡಿದೆ.ಕೈ ಕೈ ಹಿಡಿದು ಹೊರಬಂದ ಹೃತಿಕ್-ಸಬಾ ಆಜಾದ್ಶುಕ್ರವಾರ(ಜನವರಿ 28) ದಂದು ಹೃತಿಕ್ ರೋಷನ್ ಮುಂಬೈನ ಬಾಂದ್ರಾದ ಜಪಾನೀಸ್ ರೆಸ್ಟೋರೆಂಟ್‌ನಿಂದ ಹೊರಬಂದ ದೃಶ್ಯ ನೆಟ್ಟಿಗರ ನಿದ್ದೆ ಕೆಡಿಸಿದೆ. ಯಾಕಂದ್ರೆ, ಹೃತಿಕ್ ರೋಷನ್ ಸಿನಿಮಾ ಹಾಗೂ ರಂಗಭೂಮಿ ನಟಿ ಸಬಾ ಆಜಾದ್ ಅವರೊಂದಿಗೆ ಹೊಟೇಲ್‌ನಿಂದ ಹೊರಬಂದಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವ ಗುಸುಗುಸು ಹಬ್ಬಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೃತಿಕ್ ಪ್ರೀತಿಯಲ್ಲಿ ಬಿದ್ದಿರೋ ಆ ನಟಿ ಯಾರು ಅನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

ಸಬಾ ಆಜಾದ್ ಯಾರು?‌

ಸಫ್ದರ್ ಹಾಶ್ಮಿಯವರ ನಾಟಕ ತಂಡ ‘ಜನ ನಾಟ್ಯ ಮಂಚ್’ನಿಂದ ಸಬ ಆಜಾದ್‌ ಮೊದಲು ನಟನೆ ಆರಂಭಿಸಿದ್ದರು. ಹಬೀಬ್ ತನ್ವೀರ್ ಅನ್ನು ಸುಪ್ರಸಿದ್ಧ ಉರ್ದು ರಂಗಕರ್ಮಿ ಜೊತೆನೂ ಕೆಲಸ ಮಾಡಿದ್ದಾರೆ. ಒಡಿಸ್ಸಿ ನೃತ್ಯವನ್ನೂ ಕಲಿತು, ಇಂಗ್ಲೆಂಡ್, ಕೆನಾಡಗಳಲ್ಲಿ ಶೋಗಳನ್ನು ಕೊಟ್ಟಿದ್ದಾರೆ. 2008ರಲ್ಲಿ ಸಬಾ ಆಜಾದ್ ‘ದಿಲ್ ಕಬಡ್ಡಿ’ ಅನ್ನುವ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಬಳಿಕ 2011ರಲ್ಲಿ ತೆರೆಕಂಡ ‘ಮುಜ್ಸೆ ಫ್ರೆಂಡ್‌ಶಿಪ್ ಕರೋಗೆ’ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಶಾರ್ಟ್ ಫಿಲ್ಮ್, ವೆಬ್ ಸಿರೀಸ್‌ಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಗೀತದ ಕಡೆ ಸಬಾ ಆಜಾದ್ ವಾಲಿದ್ದರು.ಲಿವ್ ಇನ್‌ನಲ್ಲಿ ಇದ್ದರು ಸಬಾ ಆಜಾದ್?

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೈಲಹೊಂಗಲ ಪೊಲೀಸ್ ಸಿಬ್ಬಂದಿಗಳಿಗೆ ಮೊಬ್ ಆಪರೇಷನ್ ತರಬೇತಿ

Sun Jan 30 , 2022
ಬೈಲಹೊಂಗಲ: ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಮೊಬ್ ಆಪರೇಷನ್ ತರಬೇತಿ . ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಗುವ ಗುಂಪು ಘರ್ಷನೆ, ಗಲಾಟೆ, ದಾಂದಲೇ ಅಂತಹ ಪರಿಸ್ಥಿತಿಗಳಲ್ಲಿ ಹೇಗೆ ನಿರ್ವಹಣೆ ಮಾಡಬೇಕು, ಪರಿಸ್ಥಿತಿ ಹೇಗೆ ಹತೋಟಿಗೆ ತರಬೇಕೆನ್ನುವ ಪ್ರಾತ್ತಕ್ಷತೆ ತರಬೇತಿಯನ್ನು ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಇಂದು ಭಾನುವಾರ ನೀಡಲಾಯಿತು.ಬೈಲಹೊಂಗಲ ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಈ ತರಬೇತಿ ನಡೆಯಿತು. […]

Advertisement

Wordpress Social Share Plugin powered by Ultimatelysocial