ಬಹು ನಿರೀಕ್ಷಿತ “ಹೆಡ್ ಬುಷ್” ಚಿತ್ರದ ಚಿತ್ರೀಕರಣ ಪೂರ್ಣ!

ಭೂಗತ ದೊರೆ ಎಂ.ಪಿ.ಜಯರಾಜ್ ಜೀವನಾಧಾರಿತ “ಹೆಡ್ ಬುಷ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರದ ಚಿತ್ರೀಕರಣ
ನಡೆದಿದೆ.

ಡಾಲಿ ಧನಂಜಯ ಜಯರಾಜ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ. 1970 ರ ಬೆಂಗಳೂರಿನ ಭೂಗತ ಜಗತ್ತನ್ನು ಶೂನ್ಯ ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ. ಆ ಕಾಲಕ್ಕೆ ಸರಿಹೊಂದುವ ಅನೇಕ ಸೆಟ್ ಗಳನ್ನು ಹಾಕಲಾಗಿದೆ.

ಫಿಲಂ ಮೇಕಿಂಗ್ ನಲ್ಲಿ ಎಂ ಎಸ್ ಸಿ ಪದವಿ ಪಡೆದಿರುವ ಶೂನ್ಯ, ರಕ್ಷಿತ್ ಶೆಟ್ಟಿ ಅವರ ಬಳಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸಿ ಅನುಭವ ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಶೂನ್ಯ ಫಿಲಂ ಮೇಕಿಂಗ್ ಕುರಿತು ಸಂಶೋಧನೆ ಕೂಡ ನಡೆಸಿದ್ದಾರೆ.

ಡಾಲಿ ಧನಂಜಯ, ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಎನ್ ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಅದ್ಭುತ ಹಾಡುಗಳಿಗೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸುನೊಜ್ ವೇಲಾಯಧನ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಕಲಾ ನಿರ್ದೇಶಕರು ಬಾಡಲ್ ನಂಜುಂಡಸ್ವಾಮಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತನ್ನ ತಾಯಿ ಶ್ರೀದೇವಿ ತನ್ನ ಹೆಸರಿನ ಅರ್ಥದ ಬಗ್ಗೆ ಗೀಳನ್ನು ಬಹಿರಂಗಪಡಿಸಿದ,ಜಾನ್ವಿ ಕಪೂರ್!

Mon Apr 25 , 2022
ಜಾನ್ವಿ ಕಪೂರ್ ತನ್ನ ದಿವಂಗತ ತಾಯಿ ಮತ್ತು ನಟಿ ಶ್ರೀದೇವಿಯೊಂದಿಗೆ ನಿಕಟ ಸಮೀಕರಣವನ್ನು ಹಂಚಿಕೊಂಡಿದ್ದಾರೆ. ನಟಿ ತಮ್ಮ ಸಂದರ್ಶನಗಳಲ್ಲಿ ತಮ್ಮ ಬಾಂಧವ್ಯದ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಪ್ರಮುಖ ನಿಯತಕಾಲಿಕದೊಂದಿಗಿನ ತನ್ನ ಇತ್ತೀಚಿನ ಚಾಟ್‌ನಲ್ಲಿ, ರೂಹಿ ತಾರೆ ಅನಿಲ್ ಕಪೂರ್ ಮತ್ತು ಶ್ರೀದೇವಿ ನಟಿಸಿದ ಜುದಾಯಿಯಲ್ಲಿ ನಟಿ ಊರ್ಮಿಳಾ ಮಾತೋಂಡ್ಕರ್ ನಿರ್ವಹಿಸಿದ ಪಾತ್ರದ ನಂತರ ತನ್ನ ಹೆಸರನ್ನು ಇಡಲಾಗಿದೆಯೇ ಎಂದು ಬೀನ್ಸ್ ಚೆಲ್ಲಿದ. ಹೆಸರಿನ ಅರ್ಥವು ಶುದ್ಧತೆ ಎಂಬ ಕಲ್ಪನೆಯೊಂದಿಗೆ ತನ್ನ […]

Advertisement

Wordpress Social Share Plugin powered by Ultimatelysocial