ಹಾರೋಬೆಳವಡಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಇಬ್ಬರು ಸ್ಥಳದಲ್ಲಿ ಸಾವು!

ಖಾಸಗಿ ಸಂಸ್ಥೆಯ ಲಾರಿ ಹಾಗೂ ಅಶೋಕ ಲೈಲ್ಯಾಂಡ್ ಲಾರಿಯ ನಡುವೆ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ…ಹಾರೋಬೆಳವಡಿ ಗ್ರಾಮದ ಬಳಿ ಇರುವ ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸವದತ್ತಿ ಕಡೆಗೆ ಹೋಗುತ್ತಿದ್ದ ಲಾರಿಗೆ ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರೂ ಚಾಲಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಎರಡೂ ಲಾರಿಗಳ ಮುಂದಿನ ಭಾಗ ಸಂಪೂರ್ಣ ಜಖ್ಖಂಗೊಂಡಿದ್ದು, ಚಾಲಕರ ಶವಗಳು ಲಾರಿಯಲ್ಲಿ ಸಿಲುಕಿವೆ. ಮೃತಪಟ್ಟವರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಘಟನೆಯಿಂದ ಧಾರವಾಡ ಸವದತ್ತಿ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗಾಳಿ ಮಳೆ ಹೊಡೆತಕ್ಕೆ ಕಂಗಾಲಾದ ಕೊಪ್ಪಳ ಜನತೆ....!

Fri Apr 29 , 2022
ಕೊಪ್ಪಳದ ವಿವಿಧೆಡೆ ಗುರುವಾರ ರಾತ್ರಿ ಧಾರಾಕಾರ ಮಳೆ.ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿ. ಗುಡುಗು, ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಜನ ಜೀವನ ತತ್ತರ.ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು. ಕಾರಟಗ ತಾ. ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಕಾರಿನ ಮೇಲೆ ಉರುಳಿದ ಬೃಹತಕಾರದ ಮರ… ಮರದಡಿ ಸಿಲುಕಿ ಕಾರು, ಬೈಕ್ ಅಪ್ಪಚ್ಚಿ.ಆಣೆಕಲ್ಲು ಮಳೆಯ ಹೊಡೆತಕ್ಕೆ ಭತ್ತದ ಬೆಳೆ ಕಾಳುಗಳು ನೆಲಸಮ. ಸಂಕಷ್ಟದಲ್ಲಿ ಅನ್ನದಾತರ ಬದುಕು.ಮಾಧ್ಯಮದ ಎದುರು ಅನ್ನದಾತರ ಆಕ್ರಂಧನ. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial