2 ಬಾರಿ ಆಸ್ಕರ್ ವಿಜೇತ ಹಾಲಿವುಡ್‌ ನಟನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!

 

ವರದಿಗಳ ಪ್ರಕಾರ ಹಾಲಿವುಡ್​ನ ಖ್ಯಾತ ನಟ ಕೆವಿನ್ ಸ್ಪೇಸಿ ವಿರುದ್ಧ ಬ್ರಿಟನ್​ನ ಕ್ರೌನ್ ಪ್ರೊಟೆಕ್ಷನ್ ಸರ್ವಿಸಸ್ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದೆ. ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೆವಿನ್ ಮೇಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ವಿರುದ್ಧ ತನಿಖೆ ನಡೆಸಿ ಆರೋಪಗಳನ್ನು ಅಧಿಕೃತಗೊಳಿಸಲಾಗಿದೆ.

ರಾಯಿಟರ್ಸ್ ತನ್ನ ವರದಿಯಲ್ಲಿ ತಿಳಿಸಿರುವಂತೆ, ಬುಧವಾರ ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸೇವೆಯು ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ಕು ಕ್ರಿಮಿನಲ್ ಆರೋಪಗಳನ್ನು ಅಧಿಕೃತಗೊಳಿಸಿದೆ. ಹಾಲಿವುಡ್​ನಲ್ಲಿ ಕೆವಿನ್ ದೊಡ್ಡ ಹೆಸರಾಗಿದ್ದು 2 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

62 ವರ್ಷ ವಯಸ್ಸಿನ ನಟ 2017 ರಿಂದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮ ಅವರ ವೃತ್ತಿ ಬದುಕಿನಲ್ಲೂ ಆಗಿದ್ದು, ಅವರು ಕಾಣಿಸಿಕೊಳ್ಳಬೇಕಿದ್ದ ಚಿತ್ರದಲ್ಲಿ ಬೇರೆ ನಟ ಕಾಣಿಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ 2018ರಿಂದ ಕೆವಿನ್ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕೆಜಿಎಫ್​' ಏನೂ ಹೊಸದಲ್ಲ, 1960ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಬಂದಿತ್ತು:

Fri May 27 , 2022
  ಹಲವು ದೊಡ್ಡ ಬಜೆಟ್ ಚಿತ್ರಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ನಿರ್ಮಾಪಕರಿಗೆ ಲಾಭದಾಯಕವಾಗಿದೆ. ಬೇರೆ ಭಾಷೆಯವರಿಗೆ ನಮ್ಮ ಚಿತ್ರರಂಗದ ಪರಿಚಯವಾಗುತ್ತದೆ. ‘ಬಾಹುಬಲಿ’ ತೆರೆಕಂಡ ನಂತರದಲ್ಲಿ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ, ಆ ಮೊದಲೇ ಈ ರೀತಿಯ ಪ್ರಯತ್ನಗಳು ನಡೆದಿದ್ದವು. ಈ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ. ‘ಕೆಜಿಎಫ್​’ ಹಾಗೂ ‘ಆರ್​ಆರ್​ಆರ್​’ ತಂಡದ್ದು ಪ್ಯಾನ್ ಇಂಡಿಯಾ ವಿಚಾರದಲ್ಲಿ ಹೊಸ ಪ್ರಯತ್ನವಲ್ಲ ಎಂದಿದ್ದಾರೆ . ಕಮಲ್ […]

Related posts

Advertisement

Wordpress Social Share Plugin powered by Ultimatelysocial