ಚಳಿಗಾಲದ ಹನಿಮೂನ್‌ ಗೆ ಬೆಸ್ಟ್‌ ಇದು..?

ಚಳಿಗಾಲ ಶುರುವಾಗ್ತಿದೆ. ಮದುವೆಯಾದ ಜೋಡಿ ಹನಿಮೂನ್ ಗೆ ಪ್ಲಾನ್ ಮಾಡ್ತಿರುತ್ತಾರೆ. ನೀವೂ ಹನಿಮೂನ್ ಗೆ ಪ್ಲಾನ್ ಮಾಡ್ತಿದ್ದರೆ ಈ ಪ್ರದೇಶಕ್ಕೊಮ್ಮೆ ಹೋಗಿ ಬನ್ನಿ.ಅಕ್ಟೋಬರ್ ನಲ್ಲಿ ಹನಿಮೂನ್ ಗೆ ಹೋಗಲು ಯೋಜಿಸುತ್ತಿದ್ದರೆ, ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಮಾರಿಷಸ್ ಗೆ ಹೋಗಬಹುದು. ಮಾರಿಷಸ್ ನ ಸೌಂದರ್ಯ ಮತ್ತು ಅದರ ಭವ್ಯ ವಾತಾವರಣ, ಬಹುತೇಕ ಪ್ರವಾಸಿಗರನ್ನು ಸೆಳೆಯುತ್ತದೆ. ಸುತ್ತಲು ಸಮುದ್ರದಿಂದ ಆವೃತವಾಗಿರುವ ಈ ಪ್ರದೇಶ ಸಂಗಾತಿಯೊಂದಿಗೆ ಇರಲು ತುಂಬಾ ವಿಶೇಷವಾಗಿರುತ್ತದೆ.ಮಾರಿಷಸ್ ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಜಾಗ. ಅಲ್ಲಿ ಸ್ಕೈಡೈವಿಂಗ್ ಸಹ ಆನಂದಿಸಬಹುದು. ಇದು ಅದ್ಭುತ ಅನುಭವವನ್ನು ನೀಡುತ್ತದೆ. ಈ ಸ್ಥಳವು ನೀರೊಳಗಿನ ಚಟುವಟಿಕೆಗಳಿಗೂ ವಿಶೇಷವಾಗಿದೆ. ಮಾರಿಷಸ್ ನ ರಾಜಧಾನಿ ಪೋರ್ಟ್ ಲೂಯಿಸ್ ನಲ್ಲಿ ಅತ್ಯಂತ ಆಕರ್ಷಕ ದೇವಾಲಯಗಳು, ಆಸಕ್ತಿದಾಯಕ ಮಾರುಕಟ್ಟೆಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ನೋಡಬಹುದು. ಇಲ್ಲಿರುವ ಸುಂದರ ಜಲಪಾತಗಳು ಆಕರ್ಷಿಸುತ್ತವೆ.

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಶುರುವಾಯ್ತು ವೀಕೆಂಡ್ ವಿತ್ ರಮೇಶ್

Mon Oct 11 , 2021
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಮೂಡಿಬರಲಿದೆ. ಹಲವು ಕ್ಷೇತ್ರಗಳ ಸಾಧಕರನ್ನು ವೇದಕೆ ಕರೆತಂದು ಅವರ ಜೀವನಗಾಥೆಯನ್ನು ತೆರೆದಿಡುವ ಈ ಜನಪ್ರಿಯ ಕಾರ್ಯಕ್ರಮ ಎಲ್ಲರ ಅಚ್ಚುಮೆಚ್ಚಿದ್ದಾಗಿದೆ. ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಈ ಕಾರ್ಯಕ್ರಮ ಮತ್ತೆ ಬರಲಿದೆ. ಆದರೆ ಈ ಬಾರಿ ಟಿವಿಯಲ್ಲಿ ಬರಲ್ಲ. ಬದಲಾಗಿ ಜೀ5 ಆಪ್‍ ನಲ್ಲಿ ಕೊಂಚ ಬದಲಾವಣೆಗೊಳೊಂದಿಗೆ ಮೂಡಿಬರಲಿದೆ. ಸದ್ಯದಲ್ಲೇ ಈ ಬಗ್ಗೆ ಪ್ರಕಟಣೆ […]

Advertisement

Wordpress Social Share Plugin powered by Ultimatelysocial