ಹೊಸದಿಲ್ಲಿ: ನಿವೃ ತ್ತ ಸೇನಾಧಿಕಾರಿಗೆ ಟ್ವಿಟರ್‌ ಭಾವುಕ ನಮನ!

ಹೊಸದಿಲ್ಲಿ: ತಮ್ಮ ಕಡೆಯ ಸೇವಾದಿನದಂದು ಕಟ್ಟಕಡೆಯ ಬಾರಿ ಸೇನಾ ಸಮವಸ್ತ್ರ ಧರಿಸಿದ್ದ ಸೇನಾಧಿಕಾರಿ ಯೊಬ್ಬರ ಬಗ್ಗೆ ಟ್ವಿಟರ್‌ನಲ್ಲಿ ದೊಡ್ಡಮಟ್ಟದ ಅನುಕಂಪ ವ್ಯಕ್ತವಾಗಿದೆ.ರಕ್ಷಣ ಇಲಾಖೆಯ ಗುಪ್ತಚರ ಇಲಾಖೆಯ ಮಹಾ ನಿರ್ದೇಶಕರು ಹಾಗೂ ಇಂಟಿಗ್ರೇಟೆಡ್‌ ಡಿಫೆನ್ಸ್‌ ಸ್ಟಾಫ್ (ಗುಪ್ತಚರ) ವಿಭಾಗದ ಉಪ ಮುಖ್ಯಸ್ಥ ಲೆ| ಜನರಲ್‌ ಕೆಜೆಎಸ್‌ ಧಿಲ್ಲೋನ್‌ ಅವರು ಜ.31ರಂದು ನಿವೃತ್ತರಾಗಿದ್ದಾರೆ.ತಮ್ಮ ಕಡೆಯ ಸೇವಾದಿನ ದಂದು ಅವರು ತಮ್ಮ ಸೇನಾ ಸಮವಸ್ತ್ರ ಧರಿಸಿ ತಮ್ಮ ನಿವೃತ್ತಿಯ ವಿವರಗಳನ್ನು ಫೋಟೋ ಸಹಿತ ಹಂಚಿಕೊಂಡಿದ್ದರು. ಇದಕ್ಕೆ ಟ್ವೀಟರಿಗರು ಭಾವನಾತ್ಮಕವಾಗಿ ಸ್ವಾಗತಿಸಿದರಲ್ಲದೆ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿದರು.ರಾಬಿನ್‌ ಚಾವ್ಲಾ ಎಂಬು ವರು ಹಾಲಿವುಡ್‌ನ‌ ಸ್ಪೈಡರ್‌ ಮ್ಯಾನ್‌, ಹಲ್ಕ್ , ಸೂಪರ್‌ ಮ್ಯಾನ್‌ನ ಪಾತ್ರಗಳು ಸಾಲಾಗಿ ನಿಂತು ಧಿಲ್ಲೋನ್‌ ಅವರಿಗೆ ತಲೆಬಾಗಿ ನಮಿಸುತ್ತಿರುವ ಗ್ರಾಫಿಕ್‌ ಫೋಟೋ ಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಡಿಯಾ ಟೀಂ ವೇಗಿಗಳಿಗೆ ಧಮ್ಮಿಲ್ಲ: ಅಖ್ತರ್

Tue Feb 1 , 2022
ಟೀಂ ಇಂಡಿಯಾ ವೇಗಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ವೇಗದ ಬೌಲಿಂಗ್‌ನಲ್ಲಿ ಪಾಕಿಸ್ತಾನದ ವೇಗಿಗಳ ಪ್ರಾಬಲ್ಯದ ಬಗ್ಗೆ ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಜೊತೆ ಮಾತನಾಡುತ್ತಾ, ಭಾರತೀಯ ಆಹಾರ ಪದ್ಧತಿಗೆ ಬಗ್ಗೆ ಮಾತನಾಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಭಾರತದ ವೇಗಿಗಳು ಉತ್ತಮ ಪ್ರಗತಿ ಸಾಧಿಸಿದ್ದರೂ ಕೆಲವು ವಿಚಾರಗಳಲ್ಲಿ ಪಾಕ್ ವೇಗಿಗಳಿಗಿಂತ ತೀರಾ ಹಿಂದುಳಿದಿದ್ದಾರೆ ಎಂದರು.ಆದರೆ, ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ವೇಗಿಗಳ […]

Advertisement

Wordpress Social Share Plugin powered by Ultimatelysocial