ಯಾವ ಯಾವ ವಾಹನಗಳಿಗೆ ಎಷ್ಟೇಷ್ಟು ಟೋಲ್ ಶುಲ್ಕ ಕಟ್ಟಬೇಕು,

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಅಧಿಕೃತ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಯಾವ ವಾಹನಗಳಿಂದ ಎಷ್ಟೇಷ್ಟು? ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.ಒಟ್ಟು 8,172 ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ 117ಕಿಲೋ ಮೀಟರ್ ನಿರ್ಮಾಣವಾಗಿದೆ.

ಈ ಎರಡು ನಗರದ ಜನತೆಗೆ ಇದರಿಂದ ಭಾರೀ ಅನುಕೂಲವಾಗಲಿದೆ. ಸಮಯ ಉಳಿತಾಯವಾಗಲಿದ್ದು, ಕೆಲವೇ ಗಂಟೆಗಳಲ್ಲಿ ಪರಸ್ಪರ ನಗರವನ್ನು ಸಂಪರ್ಕಿಸಬಹುದಾಗಿದೆ. ಈ ಮಾರ್ಗದಲ್ಲಿ ಟೋಲ್ ಶುಲ್ಕದ ಸಂಗ್ರಹದ ಆರಂಭ ದಿನಾಂಕ ಫೆಬ್ರವರಿ 28 ಎಂದು ಹೇಳಲಾಗಿತ್ತು. ಆದರೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ದಿನಾಂಕ ಮುಂದೂಡಲಾಗಿದೆ.ಈ ಎಕ್ಸಪ್ರೇಸ್ ವೇ ಇದೇ ಮಾರ್ಚ್ 11ರಂದು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ. ಎರಡು ಟೋಲ್ ಹೊಂದಿರುವ ಈ ಎಕ್ಸಪ್ರೆಸ್‌ ವೇಯಲ್ಲಿ ವಿವಿಧ ಮಾದರಿಯ ವಾಹನಗಳಿಗೆ ರೂಪಾಯಿ 135 ರಿಂದ 880 ರೂ.ವರೆಗೆ ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಯಾವ ವಾಹನಗಳಿಗೆ ಎಷ್ಟು ಶುಲ್ಕ, ನಿಯಮಗಳು ಏನು? ಎಂಬ ಮಾಹಿತಿ ಇಲ್ಲಿದೆ.

* ನೂತನ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಓಡಾಡುವ ಕಾರು/ಜೀಪ್/ವ್ಯಾನ್ ಮಾದರಿಯ ವಾಹನಗಳಿಗೆ 135 ರೂ. (ಏಕಮುಖ) ನಿಗದಿ ಮಾಡಲಾಗಿದೆ. 24 ಗಂಟೆಯಲ್ಲಿ ಮರಳಿ ಬರುವವರು (ದ್ವಿಮುಖ/ರಿಟರ್ನ್‌) 205 ರೂ. ಶುಲ್ಕ ಕಟ್ಟಬೇಕು. ಇಡೀ ತಿಂಗಳು ಸಂಚರಿಸಲು 4,525 ರೂಪಾಯಿ ಪಾವತಿಸಿಸಿ ‘ಮಾಸಿಕ ಪಾಸ್’ ಪಡೆಯಬಹುದು. ಇನ್ನೂ ಸ್ಥಳೀಯ ಕಾರು ಮಾಲೀಕರು 70 ರೂ. ರೋಲ್ ಶುಲ್ಕ ಕಟ್ಟಬೇಕಿದೆ.

* ಮಿನಿ ಬಸ್/ ಸಣ್ಣ ವಾಣಿಜ್ಯ ವಾಹನಗಳಿಗೆ 200 ರೂ. (ಏಕಮುಖ) ಪಾವತಿಸಬೇಕು. ಒಂದೇ ವೇಳೆ 24 ಗಂಟೆಯಲ್ಲಿ ಮರಳಿ ಬರುವುದಾದರೆ 330 ರೂ. (ದ್ವಿಮುಖ ಚಾಲನೆ) ಶುಲ್ಕ ಕಟ್ಟಬೇಕು. ಮಾಸಿಕ ಪಾಸ್ ಬೇಕಿದ್ದರೆ 7,315 ರೂಪಾಯಿ ಪಾವತಿಸಬೇಕು. ಸ್ಥಳೀಯ ವಾಹನಗಳಿಗೆ 110 ರೂ. ಶುಲ್ಕ ನಿಗದಿಯಾಗಿದೆ.

* ಟ್ರಕ್ ಅಥವಾ ಬಸ್‌ಗಳ ಏಕಮುಖ ಚಾಲನೆಗೆ ಟೋಲ್‌ನಲ್ಲಿ 460 ರೂ. ಕಟ್ಟಬೇಕಿದೆ. ದ್ವಿಮುಖ ಸಂಚರಿಸುವುದಿದ್ದರೆ ಅವರು 690 ರೂ. ಹಣ ಪಾವತಿಸಬೇಕು. ತಿಂಗಳುಪೂರ್ತಿ ಓಡಾಡುವವರಿಗೆ ಅಗತ್ಯವಿದ್ದರೆ 15,325 ರೂ. ಪಾವತಿಸಿದರೆ ತಿಂಗಳ ಪಾಸ್ ಸಿಗುತ್ತದೆ. ಇನ್ನೂ ಸ್ಥಳೀಯ ಇದೇ ಮಾದರಿಯ ವಾಹನಗಳಿಗೆ 230 ರೂ. ನಿಗದಿಯಾಗಿದೆ.

* ಆಕ್ಸೆಲ್ ಹೊಂದಿದ ಮಧ್ಯಮ ವಾಣಿಜ್ಯ ವಾಹನಗಳಿಗೆ 500 ರೂ. (ಏಕಮುಖ ಸಂಚಾರಕ್ಕೆ), 750 ರೂ. ಶುಲ್ಕ (ದ್ವಿಮುಖ ಚಾಲನೆಗೆ) ಪಾವತಿಸಬೇಕು. ಮಾಸಿಕ ಪಾಸ್‌ಗೆ 16,715 ರೂಪಾಯಿಯನ್ನು ಟೋಲ್‌ಗೆ ಕಟ್ಟಬೇಕಿದೆ. ಸ್ಥಳೀಯ ವಾಹನಗಳಿಗೆ 250 ರೂಪಾಯಿ ನಿಗದಿ ಮಾಡಲಾಗಿದೆ.

* ಇನ್ನು ನಾಲ್ಕರಿಂದ 6 ಆಕ್ಸೆಲ್ ಹೊಂದಿದ ಭಾರೀ ವಾಣಿಜ್ಯ ವಾಹನಗಳಿಗೆ 720 ರೂ. (ಏಕಮುಖ ಸಂಚಾರಕ್ಕೆ) ಮತ್ತು 1,080 ರೂ. (ದ್ವಿಮುಖ ಸಂಚಾರಕ್ಕೆ) ಪಾವತಿಸಬೇಕು. ಅಗತ್ಯವಿದ್ದರೆ 24,030 ರೂ.ಹಣ ಪಾವತಿ ಮಾಡಿ ತಿಂಗಳ ಪಾಸ್‌ ಖರೀದಿಸಬಹುದು. ಇಲ್ಲಿನ ಸ್ಥಳೀಯ ಇದೇ ಮಾದರಿಯ ವಾಹನಗಳ ಮಾಲೀಕರು 360 ರೂ. ಪಾವತಿಗೆ ಅವಕಾಶ ಇದೆ.

* ಏಳಕ್ಕಿಂತ ಅಧಿಕ ಆಕ್ಸೆಲ್ ಉಳ್ಳ ಬೃಹತ್ ಗಾತ್ರದ ವಾಣಿಜ್ಯ ವಾಹನಗಳು ಇಲ್ಲವೇ ಯಂತ್ರ ಸಾಗಾಣಿಕೆಯಂತ ವಾಹನಗಳು ಒಂದುಕಡೆಗೆ (ಏಕಮುಖ) ಸಂಚರಿಸಲು 880 ರೂಪಾಯಿ, ಎರಡು ಕಡೆಗೆ (ದ್ವಿಮುಖ ಸಂಚಾರಕ್ಕೆ)1,315 ರೂ. ಶುಲ್ಕ ಪಾವತಿಸಬೇಕು. ಈ ವಾಹನಗಳಿಗೂ ಮಾಸಿಕ ಪಾಸ್‌ ಪಡೆಯಲು ಅವಕಾಶ ಇದ್ದು, ವಾಹನಗಳ ಚಾಲಕ/ಮಾಲೀಕರು 29,255 ರೂಪಾಯಿ ಪಾವತಿ ಮಾಡಿ ಮಾಸಿಕ ಪಾಸ್ ಪಡೆಯಬಹುದು. ಸ್ಥಳೀಯ ವಾಹನಗಳಿಗೆ 440 ರೂ. ನಿಗದಿಪಡಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರೆರಿ ಪ್ರಾಧಿಕಾರ (NHAI)ದ ಮೂಲಗಳು ತಿಳಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಪಾತಕಿ ಅತೀಕ್ ಆಪ್ತನ ಮನೆ ನೆಲಸಮ ಆಗಿದೆ!

Thu Mar 2 , 2023
    ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಯೂ ಆಗಿರುವ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಂಸದ ಮತ್ತು ಪಾತಕಿ ಅತೀಕ್ ಅಹ್ಮದ್‌ನ ಸಹಚರರ ವಿರುದ್ಧ ಕ್ರಮ ಕೈಗೊಂಡಿರುವ ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರ ಬುಧವಾರ ಅತೀಕ್‌ ನಿಕಟವರ್ತಿ ಜಾಫರ್‌ ಅಹ್ಮದ್‌ ಎಂಬುವರ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ. ಅತೀಕ್ ಅವರ ಪತ್ನಿ ಶೈಸ್ತಾ ಪರ್ವೀನ್ ಈ ಹಿಂದೆ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಪ್ರಯಾಗ್‌ರಾಜ್ ಅಭಿವೃದ್ಧಿ […]

Advertisement

Wordpress Social Share Plugin powered by Ultimatelysocial