HP Chromebook x360 14 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬೆಂಗಳೂರು: ಜಾಗತಿಕ ಬ್ರಾಂಡ್‍ ಎಚ್‍.ಪಿ. ಹೊಸ ಕ್ರೋಮ್‍ ಬುಕ್‍  x360 14 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಇದು Intel Celeron ಪ್ರೊಸೆಸರ್‌ ಒಳಗೊಂಡಿದ್ದು, 4ರಿಂದ 15 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.

ಅವರು ಮನೆಯಲ್ಲಿ, ತರಗತಿಯಲ್ಲಿ ಎಲ್ಲೇ ಇರಲಿ, ಕಲಿಕೆಗೆ ಅನುಕೂಲವಾಗಲು ಇದನ್ನು ರೂಪಿಸಲಾಗಿದೆ.

ಎಚ್‌ ಪಿ ಕ್ರೋಮ್ ಬುಕ್ x360 14a ಇಂದಿನ ಪೀಳಿಗೆಗೆ ಸೂಕ್ತವಾದ ಸುದೀರ್ಘ 14 ಗಂಟೆಗಳ (HD) ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಅಲ್ಲದೆ, ಸುಂದರವಾದ ಮತ್ತು ಹೊಂದಿಕೊಳ್ಳಬಲ್ಲ x360 ಹಿಂಜ್, 14 ಇಂಚಿನ HD ಟಚ್ ಡಿಸ್‌ಪ್ಲೇ ಮತ್ತು 81% ಸ್ಕ್ರೀನ್-ಟು-ಬಾಡಿ ಅನುಪಾತವು ಬ್ರೌಸಿಂಗ್ ಕಾರ್ಯಕ್ಷಮತೆ ಹೊಂದಿದೆ. ಪರಿವರ್ತಿಸಬಹುದಾದ x360 ತಿರುಗಣೆಯು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ರೂಪದಲ್ಲಿ ಸಾಧನವನ್ನು ಬಳಸಲು ಅನುಕೂಲ ಮಾಡಿಕೊಡುತ್ತದೆ.

HP ಇಂಡಿಯಾ ಮಾರುಕಟ್ಟೆಯ ಪರ್ಸನಲ್ ಸಿಸ್ಟಮ್ಸ್‌ನ ಹಿರಿಯ ನಿರ್ದೇಶಕ ವಿಕ್ರಂ ಬೇಡಿ ಮಾತನಾಡಿ, ಇಂದಿನ ಹೈಬ್ರಿಡ್ ಕಲಿಕೆಯ ಪರಿಸರದಲ್ಲಿ ಪಿಸಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇದಕ್ಕಾಗಿ ನಾವು ಹೊಸ  ಎಚ್‌ ಪಿ ಕ್ರೋಮ್ ಬುಕ್ x360 14a ಅನ್ನು ಪರಿಚಯಿಸುತ್ತಿದ್ದೇವೆ. ಡಿಜಿಟಲ್ ವಿದ್ಯಾರ್ಥಿಗಳ ದೈನಂದಿನ ಅಗತ್ಯಗಳನ್ನು ಪೂರೈಸುವ ಕಾರ್ಯಕ್ಷಮತೆ ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಪೋರ್ಟಬಲ್ ಪವರ್‌ ಹೌಸ್ ಆಗಿದ್ದು, ಹಗುರವಾಗಿದೆ, ತೆಳುವಾಗಿದೆ ಮತ್ತು ನಮ್ಮ ಯುವ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯವನ್ನು ನೀಡುತ್ತದೆ ಎಂದರು.

ಇದರ ಫ್ಯಾನ್-ರಹಿತ ವಿನ್ಯಾಸವು ನಿಶ್ಯಬ್ದವಾದ, ಹೆಚ್ಚು ಆರಾಮದಾಯಕ ಕಂಪ್ಯೂಟಿಂಗ್ ಅನುಭವ ಒದಗಿಸುತ್ತದೆ. ವೀಡಿಯೊ ಕರೆಗಳಿಗಾಗಿ, ಇದು ವೈಡ್ ವಿಷನ್ HD ಕ್ಯಾಮೆರಾ (88°) ಮತ್ತು Wi-Fi5 ಅನ್ನು ಸಂಪರ್ಕ ಆಯ್ಕೆಗಳಾಗಿ ಬೆಂಬಲಿಸುತ್ತದೆ.

ಎಚ್‌ ಪಿ ಕ್ರೋಮ್ ಬುಕ್ x360 14a ದಲ್ಲಿ 4GB RAM ಮತ್ತು 64GB eMMC ಸಂಗ್ರಹ ಸಾಮರ್ಥ್ಯ ಒದಗಿಸಲಾಗಿದೆ. ಈ ಸಾಧನವು ಮಿನರಲ್ ಸಿಲ್ವರ್, ಸೆರಾಮಿಕ್ ವೈಟ್ ಮತ್ತು ಫಾರೆಸ್ಟ್ ಟೀಲ್ ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಸುಮಾರು 1.49 ಕೆಜಿ ತೂಕವಿದೆ.

ಹುಡುಕಾಟವನ್ನು ಸುಲಭವಾಗಿಸಲು ಎಚ್‌ ಪಿ ಕ್ರೋಮ್ ಬುಕ್ x360 14a ಸಾಧನದಲ್ಲಿ Google “Everything” ಕೀ ಸಹಿತವಾದ ಪೂರ್ಣ-ಗಾತ್ರದ ಕೀಬೋರ್ಡ್ ಅಳವಡಿಸಲಾಗಿದೆ.

* HP Chromebook x360 14a ಎರಡು ಶಕ್ತಿಶಾಲಿ “Zen” ಕೋರ್‌ಗಳ ಸಹಾಯದಿಂದ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸುತ್ತದೆ ಮತ್ತು ಹೆಚ್ಚು ಪರಿಣಾಮಕಾರಿ ಕಾರ್ಯಕ್ಷಮತೆಯನ್ನು ನೀಡುತ್ತದೆ

* ಒಂದು ವರ್ಷಕ್ಕೆ 100 GB ಸಂಗ್ರಹಣೆ ಸೇರಿದಂತೆ Google One ಸದಸ್ಯತ್ವದ ಪ್ರಯೋಜನಗಳು ಲಭ್ಯ

* HP Chromebook x360 14a Intel Celeron N4120 ಈ ಮಾದರಿಯ ಬೆಲೆ 29,999/- ರೂ. ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಕಾರಣದಲ್ಲಿ ಯಾರು ಸತ್ಯವಂತರು? ಯಾರು ಸಾಚಾ? ಕಾಂಗ್ರೆಸ್​‌ನವರು ಏನೂ ಮಾಡಿಯೇ ಇಲ್ವೇ?

Sat Apr 16 , 2022
ಮೈಸೂರು: ‘ರಾಜಕಾರಣದಲ್ಲಿ ಯಾರು ಸತ್ಯವಂತರು? ಯಾರು ಸಾಚಾ? ಕಾಂಗ್ರೆಸ್​‌ನವರು ಏನೂ ಮಾಡಿಯೇ ಇಲ್ವೇ? ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ. ಜನತಾ ಜಲಧಾರೆ ಸಂಕಲ್ಪ ಯಾತ್ರೆ ಹಿನ್ನೆಲೆ ಮೈಸೂರಿಗೆ ಶನಿವಾರ ಆಗಮಿಸಿದ್ದ ದೇವೇಗೌಡರು ಎಚ್.ಡಿ.ಕೋಟೆ ತಾಲೂಕಿನ‌ ಬೀಚನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ 40% ಕಮಿಷನ್​ ವಿಚಾರ ಭಾರೀ ಕೋಲಾಹಲ ಎಬ್ಬಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ರಾಜಕಾರಣದಲ್ಲಿ ಯಾರು ಸತ್ಯವಂತರು? ಅವರ […]

Advertisement

Wordpress Social Share Plugin powered by Ultimatelysocial