ಗಂಡ ಹೆಂಡತಿ ಜಗಳದಲ್ಲಿ‌ ಬಲಿಯಾದಳು ಅತ್ತೆ

ಹೆಣ್ಣು ಕೊಟ್ಟ ಅತ್ತೆಯನ್ನು ಸುತ್ತಿಗೆಯಲ್ಲಿ ಹೊಡೆದು ಕೊಂದ ಪಾಪಿ ಅಳಿಯ

ಸೌಭಾಗ್ಯ ಅಳಿಯನಿಂದಲೇ ಕೊಲೆಯಾದ ದುರ್ದೈವಿ ಅತ್ತೆ

ಮಾರತ್ ಹಳ್ಳಿ ಬಳಿಯ ಸಂಜಯನಗರದಲ್ಲಿ ಘಟನೆ

ಜುಲೈ 13 ರ ಬುಧವಾರ ಸಂಜೆ 7.30 ಕ್ಕೆ ನಡೆದ ಘಟನೆ

ಕಳೆದ 6 ವರ್ಷದ ಹಿಂದೆ ವಿವಾಹವಾಗಿದ್ದ ನಾಗರಾಜ(35) ಮತ್ತು ಭವ್ಯಶ್ರೀ

ದಾಂಪತ್ಯಕ್ಕೆ ಸಾಕ್ಷಿಯಾಗಿ 5 ವರ್ಷದ ಮಗು ಇದೆ

ಡ್ರೈವಿಂಗ್ ಕೆಲಸ ಮಾಡ್ಕೊಂಡಿದ್ದ ನಾಗರಾಜ ಕುಡಿತ ಚಟಕ್ಕೆ ಬಿದ್ದಿದ್ದ

ಹಾಗಾಗಿ ಆಗಾಗ ಮನೆಯಲ್ಲಿ ಗಲಾಟೆ ಆಗ್ತಾ ಇತ್ತು

ಗಂಡನ ಕಾಟ ತಾಳಲಾರದೆ ಸಂಜಯನಗರ ತಾಯಿ ಮನೆಗೆ ಬಂದಿದ್ದ ಭವ್ಯಶ್ರೀ

ಮೂರು ವರ್ಷದಿಂದ ಬಂದು ತಾಯಿ ಮನೆಯಲ್ಲಿಯೇ ವಾಸವಿದ್ಳು

ಈ ಮಧ್ಯೆ ವಿಚ್ಛೇದನಕ್ಕಾಗಿಯೂ ತಯಾರಿ ನಡೆಯುತ್ತಿತ್ತು

ಕುಡಿದ ಅಮಲನಲ್ಲಿದ್ದ ನಾಗರಾಜನಿಗೆ ಪತ್ನಿ ಮತ್ತೆ ಬೇಕು ಅನಿಸಿದೆ

ಜುಲೈ 12 ರ ಮಂಗಳವಾರ ಅತ್ತೆ ಮನೆ ಬಳಿ ಬಂದು ಗಲಾಟೆ ಮಾಡಿದ್ದ
ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಹೇಳಿಕೊಂಡಿದ್ದ

ಈ ವೇಳೆ ಬುದ್ಧಿ ಹೇಳಿ ಕಳಿಸಿದ್ದ ಸೌಭಾಗ್ಯ ಕುಟುಂಬಸ್ಥರು

ಆದರೆ ಬುದ್ಧಿ ಕಲಿಯದ ಆಸಾಮಿ ಅತ್ತೆ ಮನೆಯವರಿಗೆ ಬುದ್ಧಿ ಕಲಿಸಲು ಪಣತೊಟ್ಟಿದ್ದ

ಮಂಗಳವಾರ ರಾತ್ರಿ ಹಾಗೂ ಬುಧವಾರ ಸಂಜೆವರೆಗು ಕುಡಿದಿದ್ದಾನೆ

ನಂತರ ಸುತ್ತಿಗೆ ತಗೊಂಡು ಅತ್ತೆ ಬಳಿ ಹೋಗಿದ್ದಾನೆ

ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದ ಸೌಭಾಗ್ಯ

ಸೊಪ್ಪು ವ್ಯಾಪಾರ ಮಾಡ್ತಿದ್ದ ಜಾಗಕ್ಕೆ ಬಂದು ಏಕಾಏಕಿ ಸುತ್ತಿಗೆಯಿಂದ ಐದಾರು ಏಟು ಬಾರಿಸಿಬಿಟ್ಟಿದ್ದ

ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಸೌಭಾಗ್ಯ

ನಂತರ ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ ಸೌಭಾಗ್ಯ

ಘಟನೆ ಸಂಬಂಧ ಹೆಚ್ ಎ ಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು

ದೂರು ದಾಖಲಿಸಿಕೊಂಡು ಆರೋಪಿ ನಾಗರಾಜ್ ಬಂಧಿಸಿರುವ ಹೆಚ್ಎಎಲ್ ಪೊಲೀಸರು

ಆದ್ರೆ ಪೊಲೀಸರ ಮುಂದೆ ಆರೋಪಿ ಹೇಳೋದೆ ಬೇರೆ

ನಾನು ನನ್ನ ಅತ್ತೆಯನ್ನು ಕೊಲ್ಲೊ ಉದ್ದೇಶ ಇರಲಿಲ್ಲ

ನನ್ನ ಹೆಂಡತಿ ಕೊಲ್ಲುವುದಕ್ಕೆ ಪ್ಲಾನ್ ಮಾಡ್ಕೊಂಡಿದ್ದೆ

ಆದರೆ ಕುಡಿದ ಮತ್ತಲ್ಲಿ ಯಾರು ಅನ್ನೋದೆ ಗೊತ್ತಾಗಿಲ್ಲ

ಹೆಂಡತಿ ಅಂತಾ ಅತ್ತೆಗೆ ಹೊಡೆದುಬಿಟ್ಟೆ ಎಂದು ಆರೋಪಿ ಅಳಲು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆಟೋ ಚಾಲಕ ಅಮ್ಜದ್ ಖಾನ್ ಕುಟುಂಬಕ್ಕೆ ತುಮಕೂರು ಜಿಲ್ಲಾಡಳಿತ ಐದು ಲಕ್ಷ ಪರಿಹಾರ!

Tue Jul 19 , 2022
ಮಳೆ ನೀರಿನಿಂದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ‌ಶವವಾಗಿ ಪತ್ತೆಯಾದ‌ ಆಟೋ ಚಾಲಕ ಅಮ್ಜದ್ ಖಾನ್ ಕುಟುಂಬಕ್ಕೆ ತುಮಕೂರು ಜಿಲ್ಲಾಡಳಿತ ಐದು ಲಕ್ಷ ಪರಿಹಾರದ ಚೆಕ್ ವಿತರಿಸಿದೆ. ಕಳೆದ ರಾತ್ರಿ ಮೃತನ ಮನೆಗೆ ಭೇಟಿ ‌ನೀಡಿದ ತಹಶಿಲ್ದಾರರ್ ಮೋಹನ್ ಪರಿಹಾರದ ಚೆಕ್ ವಿತರಿಸಿದರು. ಇದಕ್ಕೂ ಮುನ್ನ ತಹಶೀಲ್ದಾರ್ ಸಂತಾಪ ಸೂಚಿಸಿದರು. ಜುಲೈ 16 ರಂದು ಅಮ್ಜದ್ ಖಾನ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಎರಡು ದಿನಗಳ ನಿಂತರ ಶೋಧದ ಬಳಿಕ ಭೀಮಸಂದ್ರ ಕೆರೆ […]

Advertisement

Wordpress Social Share Plugin powered by Ultimatelysocial