I Love You ಎಂದ ಅಮೀರ್ ಖಾನ್ ಪುತ್ರಿ ಇರಾ:

ಮುಂಬೈ: ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಲು ಎಂದಿಗೂ ಹಿಂಜರಿಯುವುದಿಲ್ಲ. ಇದಕ್ಕೆ ಅವರ ಇನ್ಸ್ಟಾಗ್ರಾಂ ಖಾತೆ ಪುರಾವೆಯಾಗಿ ನಿಂತಿದೆ.

ಮಂಗಳವಾರ ಅವರು ತಮ್ಮ ಬಾಯ್ ಫ್ರೆಂಡ್ ನೂಪುರ್ ಶಿಖರೆ ಅವರೊಂದಿಗಿನ ಕೆಲವು ಸ್ವಿಮ್ಮಿಂಗ್ ಪೂಲ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಇದು ಅವರು ಇತ್ತೀಚಿಗೆ ಆಚರಿಸಿಕೊಂಡ ಬರ್ತಿಡೇ ಆಲ್ಬಂ ಫೋಟೋಗಳಾಗಿವೆ.

ಫೋಟೋಗಳಿಗೆ ಶೀರ್ಷಿಕೆ ನೀಡಿದ್ದು, ‘ನಿಜವಾಗಿ ಎರಡು ವರ್ಷಗಳು ಕಳೆದಿವೆ ಆದರೆ ಇದು ಯಾವಾಗಲೂ ಹೀಗೆಯೇ ಇದ್ದಂತೆ ಅನಿಸುತ್ತದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿಜವಾಗಿ ಮತ್ತು ಪ್ರಾಮಾಣಿಕವಾಗಿ’ ಎಂದು ಬರೆದಿದ್ದಾರೆ. ಈ ಮೂಲಕ ತಮ್ಮ 2 ವರ್ಷದ ಪ್ರೀತಿಯನ್ನ ಹಂಚಿಕೊಂಡಿದ್ದಾರೆ.

25 ವರ್ಷದ ಇರಾ ಖಾನ್ ತನ್ನ ಗೆಳೆಯನೊಂದಿಗೆ ಬಿಕಿನಿ ತೊಟ್ಟ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇರಾ ಖಾನ್ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ ನೂಪುರ್ ಶಿಖರೆ ಯಾವಾಲೂ ಒಟ್ಟಿಗೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಇರಾಖಾನ್ ಳನ್ನ ತಬ್ಬಿಕೊಂಡಿರುವ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ.

ಇರಾ ಖಾನ್ 2020ರಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನೂಪುರ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅಂದಿನಿಂದ ಅವರು ತಮ್ಮಿಬ್ಬರ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇರಾ ಖಾನ್ ಇತ್ತೀಚೆಗಷ್ಟೇ ತನ್ನ 25ನೇ ಹುಟ್ಟುಹಬ್ಬದ ಪಾರ್ಟಿಯಿಂದ ತನ್ನ ಕುಟುಂಬದೊಂದಿಗೆ ಬಿಕಿನಿ ಧರಿಸಿದ ಚಿತ್ರಗಳನ್ನು ಅದಾಗ್ಯೂ ಆಕೆ ಮತ್ತಷ್ಟು ಬಿಕಿನಿ ಫೋಟೋಗಳನ್ನ ಹಂಚಿಕೊಂಡು ಟಾಂಗ್ ಕೊಟ್ಟಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಮ್ಮು ಕಾಶ್ಮೀರದಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಗುಂಡಿಕ್ಕಿ ಹತ್ಯೆ

Thu Jun 2 , 2022
    ರಾಜಸ್ಥಾನ ಮೂಲದ ಬ್ಯಾಂಕ್‌ ಮ್ಯಾನೇಜರ್‌ ನನ್ನು ಜಮ್ಮು ಕಾಶ್ಮೀರದಲ್ಲಿ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಉಗ್ರರು ನಾಗರಿಕರನ್ನು ಗುರಿಯಾಗಿಸಿ ಹತ್ಯೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಟಿಕ್‌ ಟಾಕ್‌ ಕಲಾವಿದೆಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಎಲಕಾಯಿ ದೆಹತಿ ಬ್ಯಾಂಕ್‌ ಮ್ಯಾನೇಜರ್‌ ವಿಜಯ್‌ ಕುಮಾರ್‌ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ […]

Advertisement

Wordpress Social Share Plugin powered by Ultimatelysocial