‘ನಾನು ಯಾರ ಬೆಡ್ರೂಂನಲ್ಲೂ ಇರಲಿಲ್ಲ.

‘ನಾನು ಯಾರ ಬೆಡ್ರೂಂನಲ್ಲೂ ಇರಲಿಲ್ಲ. ಯಾರಿದ್ದರೋ ಅವರನ್ನೇ ಕೇಳಿಕೊಳ್ಳಲಿ’ ಎಂದು ಹೇಳಿದರು. ಬೇರೆ ಯಾರಾದರೂ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದರೆ ಉತ್ತರ ಕೊಡಬಹುದು. ಬೆಂಗಳೂರು: ಕಾಂಗ್ರೆಸ್ನಲ್ಲಿ, ತಮ್ಮ ಬೆಡ್ರೂಂನಲ್ಲೇ ಇದ್ದವರು ಈಗ ಬಿಜೆಪಿಗೆ ಹೋಗಿ ಆರೋಪ ಮಾಡುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಟೀಕೆಗೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.
ಗುರುವಾರ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಯಾರ ಬೆಡ್ರೂಂನಲ್ಲೂ ಇರಲಿಲ್ಲ. ಯಾರಿದ್ದರೋ ಅವರನ್ನೇ ಕೇಳಿಕೊಳ್ಳಲಿ’ ಎಂದು ಹೇಳಿದರು. ಬೇರೆ ಯಾರಾದರೂ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದರೆ ಉತ್ತರ ಕೊಡಬಹುದು. ಭ್ರಷ್ಟಾಚಾರದ ಕುರಿತು ಡಿ.ಕೆ.ಶಿವಕುಮಾರ್ ಮಾತನಾಡಿದರೆ ಏನೆಂದು ಹೇಳುವುದು.

ನನಗಂತೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಶೇ 40 ಕಮಿಷನ್ ಎಂದು ವೇದಿಕೆಗಳಲ್ಲಿ ಮಾತನಾಡುವುದಲ್ಲ, ನ್ಯಾಯಾಲಯಕ್ಕೆ ಹೋಗಲಿ, ದಾಖಲೆ ಸಲ್ಲಿಸಲಿ. ಆರೋಪ ಮಾಡಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಪ್ರಾಯಶ್ಚಿತ ಅನುಭವಿಸಬೇಕಾಗುತ್ತದೆ’ ಎಂದರು.

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಪರ್ಧೆ ಯಾರು ಎಲ್ಲಿ ಬೇಕಾದರೂ ಹೇಳಬಹುದು, ಆದರೆ ಸ್ಪರ್ಧೆ ಮಾಡಿದಾಗ ಮಾತ್ರ ಗೊತ್ತಾಗುತ್ತೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ಕೊಡುತ್ತಿವೆ, ರೈತರಿಗಾಗಿ ನಾವು ಸಾಕಷ್ಟು ಯೋಜನೆಗಳನ್ನ ಕೊಟ್ಟಿದ್ದೇವೆ. ಬೇಡಿಕೆ ಇದ್ದಷ್ಟುಅನುದಾನವನ್ನ ರೈತರಿಗೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾಸನ ಕ್ಷೇತ್ರದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ.

Fri Jan 27 , 2023
ಹಾಸನ ಕ್ಷೇತ್ರದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಅಲ್ಲಿ ಈಗ ಅನಿವಾರ್ಯತೆ ಇಲ್ಲ. ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ ರಾಯಚೂರು: ನಮ್ಮ ಕುಟುಂಬದಲ್ಲಿ ಸಂಘರ್ಷ ನಡೆಯುತ್ತಿದೆ ಅನ್ನೋದೇನಿಲ್ಲ, ನನಗೆ ಕಾರ್ಯಕರ್ತರೇ ಕುಟುಂಬಸ್ಥರು. ಅಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಇಲ್ಲದಿದ್ದರೇ ಅವರನ್ನು ನಾನೇ ನಿಲ್ಲಿಸುತ್ತಿದ್ದೆ. ಇಲ್ಲಿ ಕುಟುಂಬ ರಾಜಕಾರಣ ಇಲ್ಲ. ಗೊಂದಲವಿದ್ದರೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಅವಶ್ಯಕತೆಯಿದ್ದರೇ ಕಾರ್ಯಕರ್ತರಿಗಾಗಿ ತಲೆಕೊಡುತ್ತೇವೆ. ಇಲ್ಲಿನ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು. ಪಂಚರತ್ನಯಾತ್ರೆ ಹಿನ್ನೆಲೆಯಲ್ಲಿ […]

Advertisement

Wordpress Social Share Plugin powered by Ultimatelysocial