ನೌಕರರ ಆದಾಯ ಮಿತಿ 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಳ

ಬೆಂಗಳೂರು: ವೃತ್ತಿ ತೆರಿಗೆ ಅಧಿನಿಯಮವನ್ನು ತಿದ್ದುಪಡಿಗೊಳಿಸಿ, ಸರಳೀಕರಿಸಲು ಉದ್ದಿಶಿಸಿದೆ. ಕಡಿಮೆ ವರಮಾನದ ವರ್ಗಕ್ಕೆ ಪರಿಹಾರ ನೀಡಲು ಸಂಬಂಧ ಅಥವಾ ಮಜೂರಿಯನ್ನು ಪಡೆವ ನೌಕರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ಮಾಸಿಕ 15,000 ರೂಗಳಿಂದ 25,000 ರೂಗಳಿಗೆ ಏರಿಕೆ ಮಾಡಲು ಪ್ರಸ್ತಾಪಿಸಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಇಂದು 2023-24ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದಂತ ಅವರು, ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು 100 ಕೋಟಿ ರೂ ಕಾರ್ಪಸ್ ಫಂಡ್ ರಚಿಸಲು ರಾಜ್ಯ ಸರ್ಕಾರದಿಂದ ಶೇ.50ರಷ್ಟು ಮೊತ್ತ ನೀಡಲು ಅನುಮೋದನೆ ನೀಡಲಾಗಿದೆ ಎಂದರು.

ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಒಂದು ಕೋಟಿ ರೂ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೆ ತರಲಾಗಿದೆ ಎಂದರು.

ಮಠಮಾನ್ಯಗಳ ಜೀರ್ಣೋದ್ಧಾರಕ್ಕೆ 1 ಸಾವಿರ ಕೋಟಿ ಮೀಸಲಿರಿಸಲಾಗಿದೆ. ಗ್ರಾಮ ಸಹಾಯಕರ ಹೆಸರನ್ನು ಮರುನಾಮಕರಣ ಗೊಳಿಸಿ, ಜನಸೇವಕ ಎಂದು ಬದಲಾಯಿಸಲಾಗಿದೆ. ವಿವಿಧ ಸೌಲಭ್ಯಗಳನ್ನು ಸರಿಯಾಗಿ ಜನರಿಗೆ ತಲುಪುತ್ತಿದೆಯೇ ಎಂದು ಖಾತರಿ ಪಡಿಸುವ ಜವಾಬ್ದಾರಿಯನ್ನು ನೀಡಲಾಗುವುದು. ಇವರಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು 13,000 ರೂ ಗಳಿಂದ 14,000 ರೂಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊನೆಯ ವೇತನದ ಶೇ. 50 ರಷ್ಟು ಪೆನ್ಷನ್ ನೀಡಲು ಚಿಂತನೆ.

Fri Feb 17 , 2023
ನವದೆಹಲಿ: NPS ಅಡಿಯಲ್ಲಿ ಸರ್ಕಾರಿ ಉದ್ಯೋಗಿಗಳಿಗೆ 50% ಖಾತರಿಯ ಪಿಂಚಣಿ ನೀಡುವ ಆಯ್ಕೆಯನ್ನು ಸರ್ಕಾರ ಪರಿಗಣಿಸುತ್ತಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS) ಅಡಿಯಲ್ಲಿ ಸರ್ಕಾರಿ ನೌಕರರಿಗೆ ಪಡೆದ ಕೊನೆಯ ವೇತನದ ಸುಮಾರು 50 ಪ್ರತಿಶತದಷ್ಟು ಖಾತರಿಯ ಪಿಂಚಣಿಯನ್ನು ನೀಡುವ ಆಯ್ಕೆಯನ್ನು ಕೇಂದ್ರವು ಪರಿಗಣಿಸುತ್ತಿದೆ. ಕಳೆದ ವರ್ಷದಿಂದ ಹಳೆಯ ಪಿಂಚಣಿ ಯೋಜನೆ(OPS) ಜಾರಿಗೆ ಹಲವಾರು ರಾಜ್ಯಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೇಂದ್ರವು NPS ನ ಹೆಚ್ಚಿನ ಅಳವಡಿಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡು […]

Advertisement

Wordpress Social Share Plugin powered by Ultimatelysocial