ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಶೂ ಕಳ್ಳರ ಹಾವಳಿ

ಸಿಲಿಕಾನ್ ಸಿಟಿಯಲ್ಲಿ ಶೂ ಕಳ್ಳರ ಹಾವಳಿ ಹೆಚ್ಚುತ್ತಿದೆ. ಅಪಾರ್ಟ್ಮೆಂಟ್ ನಿವಾಸಿಗಳ ನಿದ್ದೆ ಕೆಡಿಸ್ತಿದ್ದಾರೆ ನಸುಕಿನ ಜಾವ ಬರೋ ಈ ಶೂ ಕಳ್ಳರು. ಮನೆ ಬಾಗಿಲ ಬಳಿ ಬಿಡೋ ಪೂಮ, ನೈಕಿ, ಅಡಿಡಾಸ್, ಟಾಮಿ ಶೂಗಳೇ ಇವರ ಟಾರ್ಗೆಟ್. ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಡರಾತ್ರಿ ಅಪಾರ್ಟ್ಮೆಂಟ್ ಗೆ ಎಂಟ್ರಿ ಕೊಡೋ ಕಳ್ಳರು ಫ್ಲಾಟ್ ಮುಂದಿನ ಕಬೋರ್ಡ್`ಗಳಲ್ಲಿನ ಶೂಗಳನ್ನ ಕ್ಷಣಾರ್ಧದಲ್ಲೆ ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಹೀಗೆ ಕುಮಾರಸ್ವಾಮಿ ಲೇಔಟ್ ನ ಪದ್ಮಾ ನಿಲಯ ರೆಸಿಡೆನ್ಸಿ ಅಪಾರ್ಟ್ಮೆಂಟ್`ಗೆ ಬೆಳಗಿನ ಜಾವ 4 ರ ಸುಮಾರಿಗೆ ಎಂಟ್ರಿಕೊಟ್ಟಿರೋ ಕಳ್ಳರು 20 ಫ್ಲಾಟ್ ಗಳ ಬಳಿ ಇಟ್ಟಿದ್ದ ಸುಮಾರು 55 ಜೊತೆ ಶೂಗಳನ್ನು ಎಗರಿಸಿದ್ದಾರೆ. ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಾರ್ಟ್ಮೆಂಟ್ ನಿವಾಸಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಡರಾತ್ರಿ ಅಪಾರ್ಟ್ಮೆಂಟ್`ಗೆ ಎಂಟ್ರಿ ಕಬೋರ್ಡ್`ಗಳಲ್ಲಿನ ಶೂಗಳು ಕ್ಷಣಾರ್ಧದಲ್ಲೇ ಮಾಯ  20 ಫ್ಲಾಟ್ ಬಳಿಯಿದ್ದ 55 ಜೊತೆ ಶೂಗಳು ನಾಪತ್ತೆ ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ.

ಇನ್ನೂ ಓದಿ :ಇಬ್ಬರು ಆರೋಪಿಗಳನ್ನು ಬಂಧಿಸಿದ ವಿವಿಪುರಂ ಪೊಲೀಸ್

Please follow and like us:

Leave a Reply

Your email address will not be published. Required fields are marked *

Next Post

ಗ್ರಾಹಕರ ಸೊಗಿನಲ್ಲಿ ಟೆಕ್ಕಿ ಕಳ್ಳತನ

Sat Nov 21 , 2020
ಮದುವೆಗೆ ಚಿನ್ನದ ಸರ ಬೇಕೆಂದು ಟೆಕ್ಕಿ ಒಬ್ಬನ್ನು ಕಳ್ಳತನ ಮಾಡಿರುವ ಘಟನೆ ಮುರುಗೇಶ್ ಪಾಳ್ಯ ಬಳಿಯ ನವರತನ್ ಜ್ಯುವೆಲ್ಲರ್ಸ್ ನಲ್ಲಿ ನಡೆದಿದೆ. ಸಾಪ್ಟ್ ವೇರ್ ಕಂಪನಿಯೊಂದ್ರಲ್ಲಿ ಕೆಲಸ ಮಾಡ್ತಿದ್ದ ಟೆಕ್ಕಿ ರಾಘವೇಂದ್ರ ಲಾಕ್ ಡೌನ್ ಹಿನ್ನಲೆ ಕೆಲಸ ಬಿಟ್ಟು ಓಡಾಡಿಕೊಂಡಿದ್ದ. ಈ ವೇಳೆ ವಿವಾಹ ನಿಶ್ಚಯವಾಗಿದ್ದು. ಯುವತಿಯನ್ನ ಕರೆದೊಯ್ದು ಚಿನ್ನದ ಸರ ಖರೀದಿಸುವ ವೇಳೆ ಟ್ರಯಲ್ ನೋಡುವ ನೆಪದಲ್ಲಿ ಕಿಲಾಡಿ ಜೋಡಿಯ ಕೈ ಚಳಕ ಮಾಡಿದ್ದಾರೆ. ಟ್ರಯಲ್ ನಂತರ 40 […]

Advertisement

Wordpress Social Share Plugin powered by Ultimatelysocial