ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಕುಸಿತಗೊಂಡಿದ್ದು,

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 34,113 ಜನರಲ್ಲಿ ಸೋಂಕು ಪತ್ತೆಯಾಗಿದೆ.ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 346 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.ಇದು ಕಳೆದ ಒಂದು ವಾರದಲ್ಲಿಯೇ ದಾಖಲಾದ ಅತಿ ಕಡಿಮೆ ಪ್ರಮಾಣದ ಸಾವಿನ ಸಂಖ್ಯೆಯಾಗಿದೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 5,09,011 ಕ್ಕೆ ಏರಿಕೆಯಾಗಿದೆ.ಇನ್ನು ದೇಶದಲ್ಲಿ 4,78,882 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 91,930 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,16,77,641 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.ನಿನ್ನೆ 11,66,993 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 1,72,95,87,490 ಜನರಿಗೆ ಲಸಿಕೆ ಹಾಕಲಾಗಿದೆ. ನಿನ್ನೆ 10,67,908 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2022 ರಲ್ಲಿ ಇಸ್ರೋದ ಮೊದಲ ಉಡಾವಣೆ: ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ PSLV-C52;

Mon Feb 14 , 2022
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬೆಳಿಗ್ಗೆ 5.59 ಕ್ಕೆ ಸ್ಫೋಟಿಸಿದ ನಂತರ ಬಾಹ್ಯಾಕಾಶ ಸಂಸ್ಥೆಯ ಉಡಾವಣಾ ವಾಹನ ಪಿಎಸ್‌ಎಲ್‌ವಿ ಮೂರು ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸಿತು. 2022 ರ ಮೊದಲ ಉಡಾವಣಾ ಕಾರ್ಯಾಚರಣೆಯನ್ನು ಗುರುತಿಸಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಭೂ ವೀಕ್ಷಣಾ ಉಪಗ್ರಹ EOS-04 ಮತ್ತು ಎರಡು ಸಣ್ಣ ಉಪಗ್ರಹಗಳನ್ನು PSLV-C52 ರಾಕೆಟ್ ಸೋಮವಾರ, ಫೆಬ್ರವರಿ 14 ರಂದು ಯಶಸ್ವಿಯಾಗಿ ಉದ್ದೇಶಿತ ಕಕ್ಷೆಗೆ ಸೇರಿಸಲಾಯಿತು, ಇದನ್ನು ಇಸ್ರೋ ವಿವರಿಸಿದೆ. ಒಂದು “ಅದ್ಭುತ […]

Advertisement

Wordpress Social Share Plugin powered by Ultimatelysocial