INSTAGRAM:ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್‌ ಕೌಂಟ್ಸ್‌ ಹೈಡ್‌ ಮಾಡುವುದು ಹೇಗೆ?

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೆನಿಸಿಕೊಂಡಿದೆ. ತನ್ನ ವಿಶೇಷ ಫೀಚರ್ಸ್‌ಗಳ ಕಾರಣದಿಂದಾಗಿ ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ.

ಬಳಕೆದಾರರು ಕೂಡ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ತಮ್ಮ ಪೋಟೋಸ್‌, ಸ್ಟೋರೀಸ್‌, ರೀಲ್ಸ್‌ಗಳನ್ನು ಶೇರ್‌ ಮಾಡುವುದನ್ನು ರೂಡಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌:ಹೌದು, ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಮೂಲಕ ಬಳಕೆದದಾರರು ಇಮೇಜ್‌ ಮಾತ್ರವಲ್ಲ, ರೀಲ್‌ಗಳು, ಸ್ಟೋರೀಸ್‌ಗಳನ್ನು ಸಹ ಪೋಸ್ಟ್‌ ಮಾಡಬಹುದಾಗಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಹಂಚಿಕೊಳ್ಳುವ ಪ್ರತಿಯೊಂದು ಪೋಸ್ಟ್ ಅನ್ನು ನಿಮ್ಮ ಅನುಯಾಯಿಗಳು ನೋಡಬಹುದು, ಲೈಕ್ಸ್‌ ಕೂಡ ಮಾಡಬಹುದು. ಅಂತೆಯೇ, ನಿಮ್ಮ ಫೀಡ್‌ನಲ್ಲಿ ನೀವು ಫಾಲೋ ಮಾಡುವವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗಳನ್ನು ನೋಡಬಹುದು. ಒಂದು ವೇಳೆ ನಿಮ್ಮ ಪೋಸ್ಟ್‌ಗೆ ಬಂದಿರುವ ಲೈಕ್ಸ್‌ ಕೌಂಟ್‌ಗಳನ್ನು ಹೈಡ್‌ ಮಾಡುವುದಕ್ಕೆ ಕೂಡ ಅವಕಾಶವಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಲೈಕ್ಸ್‌ ಕೌಂಟ್‌ ಅನ್ನು ಹೈಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಮಾಡುವ ಪೋಸ್ಟ್‌ಗಳಿಗೆ ನಿಮ್ಮ ಫಾಲೋವರ್‌ಗಳು ಲೈಕ್ಸ್‌ ನೀಡಬಹುದು. ಇಂದಿನ ದಿನಗಳಲ್ಲಿ ಯಾವ ಪೋಸ್ಟ್‌ಗೆ ಎಷ್ಟು ಲೈಕ್ಸ್‌ ಬಂದಿದೆ ಅನ್ನೊದು ಕೂಡ ಕೆಲವರಿಗೆ ಪ್ರಮುಖ ವಿಷಯವಾಗಿರುತ್ತದೆ. ಇದೇ ಕಾರಣಕ್ಕೆ ಕಡಿಮೆ ಲೈಕ್ಸ್‌ ಬಂದಾಗ ಬೇಸರ ಮಾಡಿಕೊಳ್ಳುತ್ತಾರೆ. ಇಂತಹ ಸನ್ನಿವೇಶವನ್ನು ತಪ್ಪಿಸುವುದಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮಗಿರುವ ಅತ್ಯುತ್ತಮ ಅವಕಾಶ ಎಂದರೆ ಲೈಕ್ಸ್‌ ಕೌಂಟ್‌ಗಳನ್ನು ಹೈಡ್‌ ಮಾಡುವುದಾಗಿದೆ. ಬಳಕೆದಾರರಿಗೆ ತಮ್ಮ ಫೀಡ್‌ನಲ್ಲಿ ಗೋಚರಿಸುವ ಪೋಸ್ಟ್‌ಗಳ ಮೇಲೆ ಲೈಕ್ ಮತ್ತು ವೀಕ್ಷಣೆ ಎಣಿಕೆಗಳನ್ನು ಮರೆಮಾಡುವ ಆಯ್ಕೆಯನ್ನು ಒದಗಿಸಿದೆ. ಆದಾಗ್ಯೂ, ಈ ಸೆಟ್ಟಿಂಗ್ ಪ್ರಸ್ತುತ ಎಲ್ಲರಿಗೂ ಲಭ್ಯವಿಲ್ಲ ಅನ್ನೊದನ್ನ ಕೂಡ ನಾವು ಗಮನಿಸಬಹುದು.

 

ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್‌ ಮತ್ತು ವ್ಯೂ ಕೌಂಟ್ಸ್‌ ಹೈಡ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್‌ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:2 ನಂತರ ಮೇಲಿನ ಬಲಭಾಗದಲ್ಲಿರುವ ಮೋರ್‌ ಆಯ್ಕೆಗಳನ್ನು ಟ್ಯಾಪ್ ಮಾಡಿ, ಸೆಟ್ಟಿಂಗ್ಸ್‌ ಟ್ಯಾಪ್ ಮಾಡಿ.
ಹಂತ:3 ಇದಾದ ಮೇಲೆ ಪ್ರೈವೆಸಿ ಮೇಲೆ ಕ್ಲಿಕ್ ಮಾಡಿ ನಂತರ ಪೋಸ್ಟ್‌ಗಳ ಮೇಲೆ ಟ್ಯಾಪ್ ಮಾಡಿ.
ಹಂತ:4 ಸ್ವಿಚ್ ಆಫ್ ಅಥವಾ ಸ್ವಿಚ್ ಆನ್ ಟ್ಯಾಪ್ ಮಾಡಿ, ಇದನ್ನು ಆನ್‌ ಅಥವಾ ಆಫ್ ಮಾಡಿದ ನಂತರ ಲೈಕ್ಸ್‌ ಮತ್ತು ವ್ಯೂ ಕೌಂಟ್‌ಗಳನ್ನು ಹೈಡ್‌ ಮಾಡುವ ಆಯ್ಕೆ ಕಾಣಲಿದೆ. ಇದರ ಮೂಲಕ ಲೈಕ್ಸ್‌ ಕೌಂಟ್‌ ಹೈಡ್‌ ಮಾಡಬಹುದು.

 

ಇನ್‌ಸ್ಟಾಗ್ರಾಮ್‌ ಫೀಡ್‌ನಲ್ಲಿ ನಿಮ್ಮ ಪೋಸ್ಟ್‌ಗಳ ಲೈಕ್ಸ್‌ ಮತ್ತು ವ್ಯೂ ಕೌಂಟ್‌ ಹೈಡ್‌ ಮಾಡುವುದು ಹೇಗೆ?

ಇದಲ್ಲದೆ ನೀವು ಇನ್‌ಸ್ಟಾಗ್ರಾಮ್‌ ಫೀಡ್‌ ನಲ್ಲಿ ಶೇರ್‌ಮಾಡುವ ಪೋಸ್ಟ್‌ಗಳ ಲೈಕ್ಸ್‌ ಮತ್ತು ವ್ಯೂ ಕೌಂಟ್‌ ಸೆಟ್ಟಿಂಗ್‌ಗಳನ್ನು ಸಹ ನೀವು ಬದಲಾಯಿಸಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೊದಲು, ಕೆಳಭಾಗದಲ್ಲಿರುವ ಸುಧಾರಿತ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.

ಹಂತ:2 ಸೆಟ್ಟಿಂಗ್ಸ್‌ನಲ್ಲಿ ಲೈಕ್ಸ್‌ ಕೌಂಟ್‌ ಆನ್ ಅಥವಾ ಆಫ್ ಅನ್ನು ಆಯ್ಕೆ ಮಾಡಿ.

 

ಈಗಾಗಲೇ ಶೇರ್‌ ಮಾಡಿರುವ ಪೋಸ್ಟ್‌ಗಳ ಲೈಕ್ಸ್‌ ಕೌಂಟ್‌ ಹೈಡ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಪೋಸ್ಟ್‌ನ ಮೇಲಿನ ಬಲಭಾಗದಲ್ಲಿ ಲಭ್ಯವಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:2 ಇದರಲ್ಲಿ ಲೈಕ್ ಮತ್ತು ವ್ಯೂ ಕೌಂಟ್‌ಗಳನ್ನು ಹೈಡ್‌ಮಾಡಿ ಟ್ಯಾಪ್ ಮಾಡಿ.
ಹಂತ:3 ಈ ಸೆಟ್ಟಿಂಗ್ ಅನ್ನು ಆಫ್ ಮಾಡಲು ಅನ್‌ಹೈಡ್ ಲೈಕ್ ಕೌಂಟ್ಸ್ ಅಥವಾ ಅನ್‌ಹೈಡ್ ಲೈಕ್ ಮೇಲೆ ಟ್ಯಾಪ್ ಮಾಡಿ.

ಆದರೆ, ಈ ಸೆಟ್ಟಿಂಗ್ಸ್‌ ನಿಮ್ಮ ಇನ್‌ಸ್ಟಾಗ್ರಾಮ್‌ ಫೀಡ್‌ನಲ್ಲಿನ ಪೋಸ್ಟ್‌ಗಳಲ್ಲಿ ಲೈಕ್ಸ್‌ ಮತ್ತು ವ್ಯೂ ಕೌಂಟ್‌ಗಳನ್ನು ಮಾತ್ರ ಮರೆಮಾಡುತ್ತದೆ. ಇದರಿಂದ ನೀವು ಮತ್ತು ಇನ್‌ಸ್ಟಾಗ್ರಾಮ್‌ ನಲ್ಲಿರುವ ಇತರರು ಈಗಲೂ ರೀಲ್ಸ್ ಟ್ಯಾಬ್‌ಗಳಲ್ಲಿ ಲೈಕ್ಸ್‌ಗಳು ಮತ್ತು ವ್ಯೂ ಕೌಂಟ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇವ್ರು ದೊಡ್ಡ ನಟರಾಗುವುದರಲ್ಲಿ ಸಂಶಯವಿಲ್ಲ | Huttu Habbada Shubhashayagalu | Speed News Kannada

Fri Dec 31 , 2021
Please follow and like us:

Advertisement

Wordpress Social Share Plugin powered by Ultimatelysocial