ಇಂಟರ್ಲಾಕ್ ಕಿತ್ತೆಸೆದು ಆಕ್ರೋಶ

ಕಾರವಾರ, ಫೆಬ್ರವರಿ 10: ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹಳಿಯಾಳ ಪುರಸಭೆಯಿಂದ ಅಭಿವೃದ್ಧಿ ಕಾಮಗಾರಿ ನಡೆಸಿರುವುದನ್ನು ವಿರೋಧಿ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳು ದೇವಸ್ಥಾನ ಜಾಗದಲ್ಲಿನ ಇಂಟರ್ ಲಾಕ್ ಕಿತ್ತು ಪ್ರತಿಭಟಿಸಿದ ಘಟನೆ ನಡೆದಿದೆ.

ಹಳಿಯಾಳದ ಪುರಸಭೆ ವ್ಯಾಪ್ತಿಯ ಮರಡಿ ಗುಡ್ಡದ ಬಳಿ ಇರುವ ಮಸೀದಿಯ ಎದುರು ಬನ್ನಿ ಮಂಟಪವಿದ್ದು, ಇಲ್ಲಿ ಪುರಸಭೆಯಿಂದ ಹಾಸು ಹುಲ್ಲು ಹಾಗೂ ಇಂಟರ್ ಲಾಕ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಈ ಅಭಿವೃದ್ಧಿ ಕಾಮಗಾರಿಗಳನ್ನು ಪುರಸಭೆಯು ಒಂದು ಕೋಮಿಗೆ ಅನುಕೂಲವಾಗುವಂತೆ ಮಾಡುತ್ತಿದ್ದು, ಇದರಿಂದ ಹಿಂದೂಗಳ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಲಿದೆ ಎಂದು ಹಿಂದೂ ಪರ ಕಾರ್ಯಕರ್ತರು ಆರೋಪಿಸಿದ್ದರು. ಆದರೂ ಹಳಿಯಾಳ ಪುರಸಭೆಯಿಂದ ಇಂಟರಲಾಕ್ ಅಳವಡಿಸಿ ಅಭಿವೃದ್ಧಿ ಪಡಿಸಲು ಮುಂದಾಗಿತ್ತು.

ಎದುರು ಮಸೀದಿ ಇದ್ದು ಮುಂದಿನ ದಿನಗಳಲ್ಲಿ ಈ ಪ್ರದೇಶವನ್ನು ಬಳಕೆ ಮಾಡಿಕೊಳ್ಳುವ ಆತಂಕದಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿ ಕಳೆದ 15 ದಿನಗಳ ಮೊದಲೆ ಮನವಿಗಳನ್ನು ಸಲ್ಲಿಸಿದ್ದರು. ಪುರಸಭೆಯ ಸಭೆಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ಅಭಿವೃದ್ಧಿ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಗ್ರಾಮದೇವಿ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿತ್ತು.

ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ ನೇತೃತ್ವದಲ್ಲಿ ಶುಕ್ರವಾರ ಮುಂಜಾನೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಮಂದಿ ಬಳಿಕ ಪ್ರತಿಭಟನಾ ರ್ಯಾಲಿ ಮೂಲಕ ದೇವಸ್ಥಾನ ಜಾಗಕ್ಕೆ ತೆರಳಲು ಮುಂದಾಗಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದರು ನೂರಾರು ಪ್ರತಿಭಟನಾಕಾರರ ಮುಂದೆ ಕೆಲವೇ ಮಂದಿ ಇದ್ದ ಪೊಲೀಸರನ್ನು ಬೇದಿಸಿ ದೇವಸ್ಥಾನದ ಜಾಗಕ್ಕೆ ಪ್ರತಿಭಟನಾಕಾರರು ನುಗ್ಗಿದ್ದರು.

ಬಳಿಕ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಮಾತುಕತೆ ನಡೆಸುವಂತೆ ಸೂಚಿಸಿದರೂ ಕೇಳದೆ ಜಾಗದಲ್ಲಿ ಅಳವಡಿಸಿದ್ದ ಇಂಟರ್ ಲಾಕ್ ಕಿತ್ತು ಪ್ರತಿಭಟನೆ ನಡೆಸಿದರು. ಅಲ್ಲದೇ ಸ್ಥಳದಲ್ಲಿ ಭಗವಾ ಧ್ವಜ ನೆಟ್ಟಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದರೂ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, “ಹಳಿಯಾಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಎರಡು ತುಕಡಿಗಳ ಮೂಲಕ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಂದ್ ಕರೆ ನೀಡಿದ್ದ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದಾಗಿ” ಪ್ರತಿಕ್ರಿಯಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗರ್ಭಾವಸ್ಥೆಯಲ್ಲಿ ಈ ಚಿಹ್ನೆಗಳು ಕಾಣಿಸಿದ್ರೆ ಎಚ್ಚರ..!

Fri Feb 10 , 2023
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಮಹಿಳೆ ಗರ್ಭಿಣಿಯಾದ ತಕ್ಷಣ, ಆಕೆಯ ದೇಹವು ಬದಲಾವಣೆಗಳಿಗೆ ಒಳಗಾಗಲು ಪ್ರಾರಂಭಿಸುತ್ತದೆ. ಈ ಬದಲಾವಣೆಗಳು ಗರ್ಭಿಣಿ ಮಹಿಳೆಗೆ ಹಲವಾರು ವಿಧಗಳಾಗಿವೆ. ಗರ್ಭಾವಸ್ಥೆಯಲ್ಲಿ ತಾಯಿ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ರಕ್ಷಣೆ ನೀಡಲಾಗುತ್ತದೆ. ಆದಾಗ್ಯೂ, ಮಗುವಿಗೆ ಹಾನಿಕಾರಕವಾದ ಅನೇಕ ವೈದ್ಯಕೀಯ ಪರಿಸ್ಥಿತಿಗಳಿವೆ. ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಅಂತಹ ಚಿಹ್ನೆಗಳನ್ನು ಕಾಣಿಸಿದ್ರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಹೊಟ್ಟೆಯ ಗಾತ್ರ ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಫಂಡಲ್ ಹೈಟ್ ಎಂದು ಕರೆಯಲಾಗುತ್ತದೆ. […]

Advertisement

Wordpress Social Share Plugin powered by Ultimatelysocial