ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮುರಳಿ ವಿಜಯ್ ಗುಡ್ ಬೈ.

ಭಾರತೀಯ ಕ್ರಿಕೆಟ್ ತಂಡದ ಬ್ಯಾಟರ್ ಮುರಳಿ ವಿಜಯ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಇಂದು ವಿದಾಯ ಹೇಳಿದ್ದಾರೆ.
ಟೀಂ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರನಾಗಿದ್ದ ವಿಜಯ್ 2002 ರಿಂದ 2018ರ ವರೆಗೆ ಭಾರತ ತಂಡದಲ್ಲಿದ್ದರು. ಆ ಬಳಿಕ ಫಾರ್ಮ್ ಸಮಸ್ಯೆಯಿಂದ ತಂಡಕ್ಕೆ ಆಯ್ಕೆಯಾಗಲು ವಿಫಲರಾಗಿದ್ದರು.ನನ್ನ ಕನಸು ನನಸಾಗಲು ಸಹಕರಿಸಿದ ಕೋಚ್, ಮೆಂಟರ್, ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ. ಕ್ರೀಡಾ ಬದುಕಿನ ಉತ್ತುಂಗದ ಮಟ್ಟವಾಗಿ ದೇಶಕ್ಕಾಗಿ ಆಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯ್, ನನ್ನ 2002 ರಿಂದ 2018ರ ವರೆಗಿನ ಕ್ರಿಕೆಟ್ ಪಯಣಕ್ಕೆ ಅಂತ್ಯವಾಡುತ್ತಿದ್ದೇನೆ. ಈವರೆಗೆ ಕ್ರಿಕೆಟ್ ಆಡಲು ಅವಕಾಶ ನೀಡಿದ್ದ ಬಿಸಿಸಿಐ , ತಮಿಳುನಾಡು ಕ್ರಿಕೆಟ್ ಬೋರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್, ಚೆಂಪ್ಲಾಸ್ಟ್ ಸನ್ಮಾರ್‌ಗೆ ಧನ್ಯವಾದ ಹೇಳಿದ್ದಾರೆ.ನಂತರ ತಂಡಕ್ಕೆ ಕಂಬ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.ಟೀಂ ಇಂಡಿಯಾ ಪರ ಒಟ್ಟು 61 ಟೆಸ್ಟ್, 17 ಏಕದಿನ, 9 ಟಿ20 ಸೇರಿ ಒಟ್ಟು 87 ಪಂದ್ಯದಿಂದ 4,490 ರನ್ ಬಾರಿಸಿದ್ದಾರೆ.61 ಟೆಸ್ಟ್ ಪಂದ್ಯದಿಂದ 3,982 ರನ್ ಹೊಡೆದು ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದರು. ಇದಲ್ಲದೆ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ , ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಪಂಜಾಬ್ ಕಿಂಗ್ಸ್‌ ಪರ ಆಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖಾದ್ರಿ ದರ್ಗಾಕ್ಕೆ ಚಾದರ್ ಸಮರ್ಪಿಸಿದ ಗರುಡಾಚಾರ್.

Tue Jan 31 , 2023
ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಅಜ್ಮಿರ್ ದರ್ಗಾದಲ್ಲಿ ೮೧೧ನೆ ಉರುಸ್ ಹಿನ್ನೆಲೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಚಾದರ್ ಸಮರ್ಪಿಸಿದ್ದಾರೆ.ನಗರದ ಚಾಮರಾಜಪೇಟೆಯ ಐತಿಹಾಸಿಕ ದರ್ಗಾ ಹಜರತ್ ಸೆಯ್ಯದ್ ಸಫ್ದಾರ್ ಅಲಿ ಶಾ ಖಾದ್ರಿ ಹಾಗೂ ಹಜರತ್ ಶಂಶೀರ್ ಅಲಿ ಶಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ ಅವರು, ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ ನೇತೃತ್ವದಲ್ಲಿ ಅಜ್ಮಿರ್ ದರ್ಗಾಕ್ಕೆ ಚಾದರ್ ಸಮರ್ಪಿಸಿದರು.ಬಳಿಕ […]

Advertisement

Wordpress Social Share Plugin powered by Ultimatelysocial