ಇನ್ನು 2 ತಿಂಗಳು ಕಳೆದಿದ್ರೆ ಡಾಕ್ಟರ್ ಆಗಿ ತಾಯ್ನಾಡಿಗೆ ಬರ್ತಿದ್ದೆ.. ಭಾರತೀಯ ರಾಯಭಾರ ಕಚೇರಿಯವರೇ ಓಡಿ ಹೋಗಿದ್ದಾರೆ.

ನಾನು ಆರು ವರ್ಷಗಳ ಹಿಂದೆ ಯೂಕ್ರೇನ್‌ಗೆ ಹೋಗಿದ್ದೆ. ಇನ್ನು ಎರಡು ತಿಂಗಳಲ್ಲಿ ಅಂತಿಮ ಪರೀಕ್ಷೆ ಇತ್ತು. ಅದನ್ನು ಮುಗಿಸಿದ್ದರೆ ಡಾಕ್ಟರ್ ಆಗುತ್ತಿದೆ… ಕಳೆದ ಒಂದು ವಾರದಿಂದ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬಂಕರ್‌ಗಳಲ್ಲಿ ಬದುಕು ನಡೆಸುತ್ತಿದ್ದವು.ಕ್ಯೂಸ್ ನಗರದಲ್ಲಿ ನಮ್ಮ ವಿಶ್ವವಿದ್ಯಾಲಯ ಇದೆ. ಅಲ್ಲೇ ಭಾರಿ ನಷ್ಟ ಉಂಟಾಗಿದ್ದು ಬಾಂಬ್ ದಾಳಿ ಕೂಡ ನಡೆದಿದೆ. ಇನ್ನು 2 ತಿಂಗಳಿನಲ್ಲಿ ನನಗೆ ಅಂತಿಮ ಪರೀಕ್ಷೆ ಇತ್ತು. ಮುಂದೆ ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ಇಲ್ಲಿಯವರೆಗೂ ವಿಶ್ವವಿದ್ಯಾಲಯದಿಂದ ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ. ಎಲ್ಲಿದ್ದೀರಿ? ಎಂದು ಕೇಳಿಲ್ಲ… ರಾಯಭಾರ ಕಚೇರಿ ಇರುವುದು ಜನರ ಸಂಕಷ್ಟಕ್ಕಾಗಿ. ಅದರಲ್ಲಿಯೂ ಯುದ್ಧದ ವೇಳೆ ದಾರಿ ತೋರಿಸಬೇಕು. ಯೂಕ್ರೇನ್‌ನಲ್ಲಿ ರಾಯಭಾರ ಕಚೇರಿ ಆ ಕೆಲಸ ಮಾಡಲಿಲ್ಲ. ಅವರೇ ಭಾರತಕ್ಕೆ ಓಡಿ ಹೋಗಿದ್ದಾರೆ ಎಂದು ಕೇಳಲ್ಪಟ್ಟೆ… ಎಂದು ಕಣ್ಣೀರಿಡುತ್ತಲೇ ಯೂಕ್ರೇನ್​ನಲ್ಲಿನ ಕರಾಳ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ ಶಿವಮೊಗ್ಗ ಜಿಲ್ಲೆ ಸಾಗರದ ಮನಿಷಾ ಲೋಬೋ.ಯೂಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಮನಿಷಾ ಲೋಬೋ ಅನೇಕ ಸಂಕಷ್ಟಗಳನ್ನು ಎದುರಿಸಿ ಗುರುವಾರ ಬೆಳಗ್ಗೆ ಸಾಗರಕ್ಕೆ ಆಗಮಿಸಿದರು. ಬಸ್ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಪಾಲಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಮನಿಷಾಳನ್ನು ಬಸ್ ಇಳಿಯುತ್ತಿದ್ದಂತೆ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಆ ವೇಳೆ ಪ್ರಥಮವಾಗಿ ‘ವಿಜಯವಾಣಿ’ ಜತೆ ಮಾತನಾಡಿದ ಮನಿಷಾ, ಅಲ್ಲಿಯ ಕರಾಳ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.ರಾಯಭಾರ ಕಚೇರಿ ಇರುವುದು ಜನರ ಸಂಕಷ್ಟಕ್ಕಾಗಿ. ಅದರಲ್ಲಿಯೂ ಯುದ್ಧದ ವೇಳೆ ದಾರಿ ತೋರಿಸಬೇಕು. ಯೂಕ್ರೇನ್‌ನಲ್ಲಿ ರಾಯಭಾರ ಕಚೇರಿ ಆ ಕೆಲಸ ಮಾಡಲಿಲ್ಲ. ಅವರೇ ಭಾರತಕ್ಕೆ ಓಡಿ ಹೋಗಿದ್ದಾರೆ ಎಂದು ಕೇಳಲ್ಪಟ್ಟೆ. ಈಗ ಯುದ್ಧ ಶುರುವಾಗಿ ಹಲವಾರು ದಿನಗಳ ಮೇಲೆ, ಸಾವು ಸಂಭವಿಸಿದ ಮೇಲೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿ ಭಾರತೀಯರನ್ನು ದೇಶಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದೆ. ಈ ಕೆಲಸವನ್ನು ಮುಂಚೆಯೇ ಮಾಡಬೇಕಿತ್ತು. ನಾವು ಪೋಲೆಂಡ್ ಗಡಿ ತಲುಪುವುದಕ್ಕೆ ಪಟ್ಟ ಪಾಡು ಹೇಳತೀರದು. ಬಂಕರ್‌ಗಳಲ್ಲಿ ಕುಳಿತು ಬ್ರೆಡ್, ಬನ್, ನೀರಿನಿಂದ ಹೊಟ್ಟೆ ತುಂಬಿಸಿಕೊಂಡೆವು. ಆಹಾರಕ್ಕಾಗಿ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಇನ್ನು ಎಷ್ಟೋ ಕಡೆ ನಡೆದೇ ಸಾಗಿದೆವು. ಮೈನಸ್ 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ನಾವು, ನಮ್ಮ ಜತೆಗಾರರು ಜೀವ ಕೈಯಲ್ಲಿ ಹಿಡಿದು ಮುನ್ನಡೆಯುತ್ತಿದ್ದರೆ, ಒಂದೇ ಸಲಕ್ಕೆ 5,000 ಜನ ಗಡಿಗಳಲ್ಲಿ ದಿಕ್ಕಪಾಲಾಗಿ ಓಡುತ್ತಿದ್ದರು. ಇಂತಹ ಭಯಾನಕ ಸ್ಥಿತಿಯಲ್ಲಿ ನಮ್ಮ ವಿಮಾನ ವ್ಯವಸ್ಥೆಗೆ ಮಾರ್ಗ ತೋರಿಸುವವರಾರು? ಮೊಬೈಲ್‌ನಲ್ಲಿ ಕರೆನ್ಸಿ ಬೇರೆ ಇಲ್ಲ, ಆ ದೇಶದ ಭಾಷೆ ಬರುವುದಿಲ್ಲ. ಅಂತೂ ಗಡಿ ತಲುಪಿದ ಬೇರೆ ಸ್ನೇಹಿತರನ್ನು ಸಂಪರ್ಕಿಸಿ ಹೇಗೋ ಖಾಸಗಿ ವಾಹನಗಳಲ್ಲಿ ಸಾಗಿ ಪೋಲೆಂಡ್ ತಲುಪಿ ವಿಮಾನದ ಸಂಪರ್ಕ ತಲುಪಿದೆವು. ಆಗ ಕೇಂದ್ರ ಸರ್ಕಾರ ಸಹಕರಿಸಿತು ಎಂದು ಮನಿಷಾ ಹೇಳಿದರು.ನಾವೂ ವೈದ್ಯರಾಗಬೇಕೆನ್ನುವುದು ತಪ್ಪೇ? ಯೂಕ್ರೇನ್‌ನಂತಹ ದೇಶ ನಮಗೆ ಯಾವುದೇ ಡೊನೇಷನ್ ಕೇಳದೆ ವಿದ್ಯಾಭ್ಯಾಸಕ್ಕೆ ಮಾತ್ರ ಹಣ ಕಟ್ಟಿಸಿಕೊಂಡಿದೆ. ನನ್ನ ತಂದೆ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ತಾಯಿ ಬ್ಯೂಟಿ ಪಾರ್ಲರ್ ನಡೆಸುತ್ತಾರೆ. ನಮ್ಮಂತಹ ಸಣ್ಣ ಕುಟುಂಬಗಳಿಗೆ ಸಾಗರದ ಜನತೆ ಮತ್ತು ನಮ್ಮ ಸಮುದಾಯದ ಸಂಘಟನೆ ಸಹಕರಿಸಿದೆ ಎನ್ನುತ್ತಲೇ ಮನಿಷಾ ಲೋಬೋ ಭಾವುಕರಾದರು.ಶಿಕ್ಷಣ ವ್ಯವಸ್ಥೆ ಬದಲಾಗಲಿ: ಸಾಗರ ಜನತೆಯ ಆರ್ಶೀವಾದದಿಂದ ಬದುಕಿ ಬಂದಿದ್ದೇನೆ. ನನ್ನ ತಂದೆ, ತಾಯಿ ಪ್ರತಿ ದಿನ ಸಂಪರ್ಕ ಮಾಡುತ್ತಿದ್ದರು. ಯುದ್ದ ಆರಂಭವಾದಾಗಿನಿಂದ ನಾವು ಸಾಗರ ತಲುಪುವವರೆಗೆ ನಿದ್ದೆ ಮಾಡಿಲ್ಲ. ಯಾವಾಗ ಬಾಂಬ್ ದಾಳಿ ಆಗುತ್ತದೆಯೋ ಎಂಬ ಭಯ ಒಂದು ಕಡೆಯಾದರೆ ದೂರದ ದಾಳಿಯ ಶಬ್ಧ ಕಿವಿಯಲ್ಲಿ ಇನ್ನೂ ಧ್ವನಿಸುತ್ತಿದೆ. ಮಾಧ್ಯಮಗಳು ನೀಡಿದ ಪ್ರಚಾರ ನಾನು ವಾಪಸ್ ಬರುವುದಕ್ಕೆ ಸಹಕಾರಿಯಾಗಿದೆ. ಹೆಚ್ಚಿಗೆ ಅಂಕ ಪಡೆದದವರಿಗೆ ಮಾತ್ರ ಉನ್ನತ ಶಿಕ್ಷಣ ದೊರೆಯುತ್ತದೆ. ನಮ್ಮ ಶಿಕ್ಷಣ ನೀತಿಯೇ ಮೊದಲು ಬದಲಾಗಬೇಕು. ಅಂಕದ ಬೆನ್ನೇರಿದವರು ಮಾತ್ರ ಬುದ್ಧಿವಂತರು ಎನ್ನುವ ಮನಸ್ಥಿಗೆ ಬಂದಿದ್ದೇವೆ ಎಂದು ಮನಿಷಾ ದೂರಿದರು.ಸಿಹಿ ಹಂಚಿ ಸಂಭ್ರಮ: ಸಾಗರದ ಅಣಲೇಕೊಪ್ಪದಲ್ಲಿರುವ ಮನಿಷಾ ಮನೆಯಲ್ಲಿ ಶಾಸಕ ಹರತಾಳು ಹಾಲಪ್ಪ ಹಾಗೂ ಅನಿವಾಸಿ ಭಾರತೀಯ ರಾಯಭಾರಿಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಅರತಿ ಕೃಷ್ಣ ಅವರು ಮನಿಷಾ ಬರಮಾಡಿಕೊಂಡರು. ಶಾಸಕರ ಸ್ನೇಹಿತ ರವಿಗೌಡ ಸಹಾಯ ಪಡೆಯಲು ಯೂಕ್ರೇನ್‌ನಲ್ಲಿರುವ ಸ್ನೇಹಿತರಿಗೆ ತಿಳಿಸುವಂತೆ ಹಾಲಪ್ಪ ಸೂಚಿಸಿದರು. ಮನಿಷಾ ತಂದೆ, ತಾಯಿ ಮಗಳು ಮತ್ತೆ ಜನ್ಮ ಪಡೆದು ಬಂದಿದ್ದಾಳೆ ಎಂದು ಗದ್ಗದಿತರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್‌ನಿಂದ ರಕ್ಷಣೆ - ಮಗುವಿಗೆ 'ಗಂಗಾ' ಹೆಸರಿಡಲು ನಿರ್ಧರಿಸಿದ ಕೇರಳದ ವ್ಯಕ್ತಿ

Sat Mar 5 , 2022
ಕೈವ್: ಕೈವ್‌ನಲ್ಲಿ ಸಂಕಷ್ಟದಲ್ಲಿದ್ದು, ಪ್ರಸ್ತುತ ತುಂಬು ಗರ್ಭಿಣಿ ಪತ್ನಿಯೊಂದಿಗೆ ಪೋಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಆಶ್ರಯ ಕೊಠಡಿಯಲ್ಲಿ ತಂಗಿರುವ ಕೇರಳದ ವ್ಯಕ್ತಿಯೊಬ್ಬರು ತಮ್ಮ ಮಗುವಿಗೆ ‘ಗಂಗಾ’ ಎಂದು ಹೆಸರಿಸಲು ನಿರ್ಧರಿಸಿದ್ದಾರೆ.ಕೇರಳ ಮೂಲದ ಅಭಿಜಿತ್ ಅವರೇ ಮಗುವಿಗೆ ಈ ಹೆಸರಿಡಲು ನಿರ್ಧರಿಸಿದ ವ್ಯಕ್ತಿ. ತನ್ನ ಪತ್ನಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಪ್ರಸ್ತುತ ಪೋಲೆಂಡ್‌ನ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನನ್ನ ಮಗು ಬರುವ ನಿರೀಕ್ಷಿತ ಸಮಯ ಮಾರ್ಚ್ 26. ರಕ್ಷಣಾ ಕಾರ್ಯಾಚರಣೆಯ ‘ಗಂಗಾ’ […]

Advertisement

Wordpress Social Share Plugin powered by Ultimatelysocial