IPLನಿಂದ ವಿದೇಶಿ ಆಟಗಾರರಿಗೆ ಬಿಗ್ ಶಾಕ್: ಈ ನಿಯಮದ ಪ್ರಕಾರ ತಂಡಕ್ಕೆ ಸೇರ್ಪಡೆಯಿಲ್ಲ!

Indian Premier League: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಸೀಸನ್‌ಗಾಗಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಜಾರಿಗೆ ತಂದಿದೆ. ಕ್ರಿಕೆಟ್ ಹೊರತುಪಡಿಸಿ ಈ ನಿಯಮವು ಈಗಾಗಲೇ ಫುಟ್‌ಬಾಲ್, ರಗ್ಬಿ, ಬಾಸ್ಕೆಟ್‌ಬಾಲ್ ಮತ್ತು ಬೇಸ್‌ಬಾಲ್‌ನಂತಹ ಕ್ರೀಡೆಗಳಲ್ಲಿ ಇದೆ.ಆದರೆ ಇದನ್ನು ಮೊದಲ ಬಾರಿಗೆ ಐಪಿಎಲ್‌ನಲ್ಲಿ ಬಳಸಲಾಗುತ್ತಿದೆ. ಆದರೆ ಈ ನಿಯಮಕ್ಕೆ ಸಂಬಂಧಿಸಿದ ಮಹತ್ವದ ಅಪ್‌ಡೇಟ್‌ ಹೊರಬಿದ್ದಿದ್ದು, ವಿದೇಶಿ ಆಟಗಾರರಿಗೆ ಸಖತ್ ನಿರಾಸೆ ಮೂಡಿಸುತ್ತದೆ ಎಂಬುದು ಮಾತ್ರ ಖಚಿತ.ನಿಯಮದ ಅಡಿಯಲ್ಲಿ, ನಾಯಕನು ಪಂದ್ಯದ ಸಮಯದಲ್ಲಿ ಪ್ಲೇಯಿಂಗ್ 11 ರಲ್ಲಿ ಆಟಗಾರನ ಬದಲಿಗೆ ಇನ್ನೊಬ್ಬ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು. ಅಕ್ಟೋಬರ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಬಿಸಿಸಿಐ ಈ ನಿಯಮವನ್ನು ಪರೀಕ್ಷಿಸಿತ್ತು. ರಾಜ್ಯ ತಂಡಗಳು ಈ ಕ್ರಮವನ್ನು ಸ್ವಾಗತಿಸಿದ್ದವು. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಭಾರತೀಯ ಆಟಗಾರರ ಮೇಲೆ ಮಾತ್ರ ಜಾರಿಗೆ ತರಲಾಗುತ್ತಿದೆ. ವಿದೇಶಿ ಆಟಗಾರರನ್ನು ಪ್ಲೇಯಿಂಗ್ XI ಗೆ ತರಲು ಈ ನಿಯಮವನ್ನು ಬಳಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.ಎಲ್ಲಾ IPL ತಂಡಗಳಿಗೆ ಅಪ್‌ಡೇಟ್:Cricbuzz ನಲ್ಲಿನ ವರದಿಯ ಪ್ರಕಾರ, ವಿದೇಶಿ ಆಟಗಾರನು ಇನ್ನೊಬ್ಬ ವಿದೇಶಿ ಆಟಗಾರನನ್ನು ಬದಲಿಯಾಗಿ ಆಟವಾಡಲು ಸಾಧ್ಯವಿಲ್ಲ ಎಂದು ಎಲ್ಲಾ ಫ್ರಾಂಚೈಸಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಯಾವುದೇ ವಿದೇಶಿ ಆಟಗಾರ ಭಾರತೀಯ ಆಟಗಾರನಿಗೆ ಬದಲಿಯಾಗಿ ಬರಲು ಸಾಧ್ಯವಿಲ್ಲ. ಇತ್ತೀಚೆಗೆ, ಈ ನಿಯಮದ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ, ಐಪಿಎಲ್ 2023 ರಿಂದ ಹೊಸ ಆಯಾಮವನ್ನು ಸೇರಿಸುವ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು. ಇದರಲ್ಲಿ ಪ್ರತಿ ತಂಡಕ್ಕೆ ಒಬ್ಬ ಬದಲಿ ಆಟಗಾರ ಐಪಿಎಲ್ ಪಂದ್ಯದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿತ್ತು.ಇಂಪ್ಯಾಕ್ಟ್ ಪ್ಲೇಯರ್ ಗಳಿಗೆ ಪ್ರಯೋಜನ:ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಡಿಯಲ್ಲಿ ತಂಡವು ನಾಲ್ಕು ಆಟಗಾರರ ಬದಲಾವಣೆಯನ್ನು ಮಾಡಬಹುದು. ಆದರೆ ಇನ್ನಿಂಗ್ಸ್‌ನ 14 ನೇ ಓವರ್‌ನ ಮೊದಲು ಈ ಬದಲಾವಣೆ ಮಾಡಬಹುದು. ಈ ಬಳಿಕ ಅವಕಾಶ ಇರುವುದಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸೇರ್ಪಡೆಗೊಳ್ಳುವ ಆಟಗಾರನು ಸಂಪೂರ್ಣ ಕೋಟಾದಲ್ಲಿ ಬೌಲ್ ಮಾಡಲು ಅಥವಾ ಹೊಸನಂತೆ ಬ್ಯಾಟ್ ಮಾಡಲು ಸಾಧ್ಯವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆಧಾರ್‌ನೊಂದಿಗೆ ನಿಮ್ಮ Voter ID ಹೀಗೆ ಲಿಂಕ್ ಮಾಡಿಕೊಳ್ಳಿ! ಇಲ್ಲವಾದ್ರೆ ನಿಮ್ಮ ಮತ ವ್ಯರ್ಥವಾಗುವ ಸಾಧ್ಯತೆ!

Fri Dec 9 , 2022
ಭಾರತೀಯ ಚುನಾವಣಾ ಆಯೋಗ (ECI-Election Commission of India) ಮತದಾರರ ಗುರುತಿನ ಚೀಟಿಯೊಂದಿಗೆ (Voter ID) ಆಧಾರ್ (Aadhaar) ಲಿಂಕ್ ಮಾಡಲು ಆದೇಶಿಸಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಬೇಕು.ಇಲ್ಲದಿದ್ದರೆ ನಿಮ್ಮ ನಕಲಿ ಮತದಾರರ ಗುರುತಿನ ಚೀಟಿಯಲ್ಲಿ ಯಾರಾದರೂ ಮತ ಹಾಕುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಮತ ವ್ಯರ್ಥವಾಗುತ್ತದೆ. ವಾಸ್ತವವಾಗಿ ನಕಲಿ ಮತದಾರರ ಗುರುತಿನ ಚೀಟಿಗಳನ್ನು ತಡೆಗಟ್ಟುವ ಉದ್ದೇಶದಿಂದ […]

Advertisement

Wordpress Social Share Plugin powered by Ultimatelysocial