IPO ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾದ ‘ಜೋಯಾಲುಕ್ಕಾಸ್’

 

ದೇಶ – ವಿದೇಶಗಳಲ್ಲಿ ಚಿನ್ನಾಭರಣ ಮಳಿಗೆ ಹೊಂದಿರುವ ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ ದಾಖಲೆ ಪತ್ರಗಳನ್ನು ಸಲ್ಲಿಸಿದೆ.2,300 ಕೋಟಿ ರೂಪಾಯಿಗಳನ್ನು ಐಪಿಒ ಮೂಲಕ ಸಂಗ್ರಹಿಸಲು ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್ ಉದ್ದೇಶಿಸಿದ್ದು, ಈ ಪೈಕಿ 1400 ಕೋಟಿ ರೂಪಾಯಿಗಳನ್ನು ಸಾಲ ಮರುಪಾವತಿಗೆ ಹಾಗೂ 463.90 ಕೋಟಿ ರೂಪಾಯಿಗಳನ್ನು ದೇಶದ ವಿವಿಧೆಡೆ ಮಳಿಗೆಗಳನ್ನು ತೆರೆಯಲು ಬಳಸಿಕೊಳ್ಳಲಿದೆ. ಇನ್ನುಳಿದ ಮೊತ್ತವನ್ನು ಕಾರ್ಪೊರೇಟ್ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್ ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಟ್ಟು ಎಂಟು ಮಳಿಗೆಗಳನ್ನು ತೆರೆಯಲಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಲರ್ಜಿಯಿಂದ ಪಾರಾಗಲು ಅನುಸರಿಸಿ ಈ ʼಉಪಾಯʼ

Tue Mar 29 , 2022
ಮಕ್ಕಳ ತ್ವಚೆ ಬಹಳ ಕೋಮಲವಾಗಿರುವುದರಿಂದ ಧೂಳು, ಇನ್ನಿತರ ಕಾರಣಗಳಿಂದ ಬಹಳ ಬೇಗ ಅರ್ಲಜಿಯಾಗುತ್ತದೆ. ಈ ಸಮಸ್ಯೆಯನ್ನು ದೂರವಾಗಿಸಲು ಈ ಟಿಪ್ ಫಾಲೋ ಮಾಡಿ.   ಮಗುವಿಗೆ ಪ್ರತಿದಿನ ಸ್ನಾನ ಮಾಡಿಸುವ ಮೊದಲು ದೇಹವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತಾರೆ. ಆ ವೇಳೆ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಶುದ್ಧ ಅರಿಶಿನ ಪುಡಿಯನ್ನು ಮಿಕ್ಸ್ ಮಾಡಿ ಅದರಿಂದ ಮಸಾಜ್ ಮಾಡಿ ಸ್ನಾನ ಮಾಡಿಸಿದರೆ ಮಗುವಿನ ತ್ವಚೆ ಸದಾ ಆರೋಗ್ಯವಾಗಿರುತ್ತದೆ. […]

Advertisement

Wordpress Social Share Plugin powered by Ultimatelysocial