ಜಗತ್ತನ್ನು ಸಂಕಷ್ಟಕ್ಕೆ ದೂಡಿರುವ ‘ಸೂಪರ್ ಬಗ್ಸ್’

ಜಗತ್ತನ್ನು ಸಂಕಷ್ಟಕ್ಕೆ ದೂಡಿರುವ 'ಸೂಪರ್ ಬಗ್ಸ್'

ಹಲವು ವರ್ಷಗಳಿಂದ ಪ್ರಪಂಚವನ್ನು ಆವರಿಸಿರುವ ಕಾಯಿಲೆಗಳಿಗೆ ಮುಖ್ಯ ಕಾರಣವೆಂದರೆ ಸೂಕ್ಷ್ಮಜೀವಿಗಳು. ಹಿಂದೆಂದೂ ಕೇಳದ ಅರಿಯದ ಈ ಜೀವಿಗಳು ಜನಜೀವನವನ್ನು ಅಸ್ಥಿರಗೊಳಿಸಿದೆ. ಆಧುನಿಕ ವೈದ್ಯಕೀಯ ವಿಜ್ಞಾನವು ಮುಂದುವರಿದಂತೆ ಈ ರೋಗಾಣುಗಳ ವಿರುದ್ಧ ಔಷಧಿಗಳನ್ನು ಆವಿಷ್ಕರಿಸಿ ಅನೇಕ ಜನರ ಪ್ರಾಣವನ್ನು ಉಳಿಸಿವೆ.

ಆದರೆ ಈ ಸೂಕ್ಷ್ಮಜೀವಿಗಳು ಸಹ ತಾವೇನು ಕಡಿಮೆಯಿಲ್ಲವೆಂಬಂತೆ ತಮ್ಮ ಯುದ್ಧವನ್ನು ಮುನುಷ್ಯರ ಮೇಲೆ ಸಾಧಿಸುತ್ತಿವೆ. ಆಧುನಿಕ ವಿಜ್ಞಾನವು ಆವಿಷ್ಕರಿಸಿದ ಔಷಧಿಗಳಿಗೆ ತಾವುಗಳು ಸೋಲುವುದಿಲ್ಲ ಎಂಬ ಪ್ರತ್ಯುತ್ತರ ನೀಡುತ್ತಿವೆ. ಇಂತಹ ಸೂಕ್ಷ್ಮಜೀವಿಗಳನ್ನು ‘ಸೂಪರ್ ಬಗ್ಸ್’ ಎನ್ನಬಹುದಾಗಿದೆ.

*ಮನುಷ್ಯನಲ್ಲಿನ ಅನೇಕ ಸೋಂಕುಗಳಿಂದಾಗುವ ಸಾವಿಗೆ ಮುಖ್ಯ ಕಾರಣವೆಂದರೆ ಅದು ಬ್ಯಾಕ್ಟೀರಿಯಗಳಿರಬಹುದು, ವೈರಾಣುಗಳಿರಬಹುದು ಪರಾವಲಂಬಿ ಜೀವಿಗಳಿರಬಹುದು ಅಥವಾ ಶಿಲೀಂಧ್ರಗಳಿರಬಹುದು. ಆದರೆ, ಮನುಷ್ಯನ ಆವಿಷ್ಕಾರಗಳಲ್ಲಿ ಒಂದಾದ ಆಯಂಟಿಬಯಾಟಿಕ್‌ಗಳು ಈ ಸೂಕ್ಷ್ಮಜೀವಿಗಳ ವಿರುದ್ಧ ಇರುವ ರಾಮಬಾಣ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸೂಕ್ಷ್ಮಜೀವಿಗಳು ಆಯಂಟಿಬಯಾಟಿಕ್‌ಗಳ ವಿರುದ್ಧ ಸಮರ ಸಾರಿ ಜಯಗಳಿಸಲಾರಂಭಿಸಿವೆ. ಇದನ್ನು ‘ಆಯಂಟಿಬಯಾಟಿಕ್ ರೆಸಿಸ್ಟೆನ್ಸ್’ ಅಥವಾ ಆಯಂಟಿಬಯಾಟಿಕ್ ಪ್ರತಿರೋಧ ಎನ್ನಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಫ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

Thu Jan 6 , 2022
ಚಳಿಗಾಲದಲ್ಲಿ ಕಫದ ಸಮಸ್ಯೆ ಸಾಮಾನ್ಯ. ಸ್ವಲ್ಪ ಕಫವಾದ್ರೂ ಕೆಲವರು ವೈದ್ಯರ ಬಳಿ ಓಡ್ತಾರೆ. ಅದ್ರ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮನೆ ಮದ್ದು ಸೇವನೆ ಮಾಡುವುದು ಬಹಳ ಒಳ್ಳೆಯದು. ಕಫದಿಂದ ಬಳಲುತ್ತಿರುವವರು ಈ ಕೆಲ ಔಷಧಿಯನ್ನು ಮನೆಯಲ್ಲಿಯೇ ಮಾಡಿ ಸೇವನೆ ಮಾಡಿ. ಕೆಲವೇ ದಿನಗಳಲ್ಲಿ ಕಫ ಮಾಯವಾಗಿ ಆರಾಮ ಸಿಗುತ್ತದೆ. ಒಂದು ಚಮಚ ಜೇನುತುಪ್ಪ ಹಾಗೂ ಅರ್ಧ ಚಮಚ ಶುಂಠಿ ಪುಡಿಯನ್ನು ಒಂದು ಕಪ್ ಬಿಸಿಬಿಸಿ ನಿಂಬೆ ನೀರಿನೊಂದಿಗೆ ಬೆರೆಸಿ […]

Advertisement

Wordpress Social Share Plugin powered by Ultimatelysocial