ಪ್ರತಿ ಬಾರಿಯಂತೆ ಈ ವರ್ಷವೂ ಆಸ್ಕರ್​ ಅಖಾಡದಲ್ಲಿ ನೂರಾರು ಸಿನಿಮಾಗಳು ಹಣಾಹಣಿ ನಡೆಸುತ್ತಿವೆ

 

 

ಪ್ರತಿ ಬಾರಿಯಂತೆ ಈ ವರ್ಷವೂ ಆಸ್ಕರ್​ ಅಖಾಡದಲ್ಲಿ ನೂರಾರು ಸಿನಿಮಾಗಳು ಹಣಾಹಣಿ ನಡೆಸುತ್ತಿವೆ. ಭಾರತದಿಂದ ನಾಮನಿ ರ್ದೇಶನಗೊಂಡಿದ್ದ ‘ಜೈ ಭೀಮ್​’ ಸಿನಿಮಾ ಬಗ್ಗೆ ಸಿನಿಪ್ರಿಯರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದರು. ಸೂರ್ಯ ಅಭಿನಯದ ಈ ಸಿನಿಮಾ ಸಾಮಾಜಿಕ ಕಳಕಳಿಯ ಹಥಾಹಂದರ ಹೊಂದಿದೆ.ಒಟಿಟಿಯಲ್ಲಿ ರಿಲೀಸ್​ ಆಗಿ ಜನಮೆಚ್ಚುಗೆ ಗಳಿಸಿದ ಈ ಸಿನಿಮಾ ಈಗ ಆಸ್ಕರ್​ ರೇಸ್​ನಿಂದ ಹೊರಬಿದ್ದಿದೆ. ಅಂತಿಮ ಸುತ್ತಿಗೆ ಆಯ್ಕೆ ಆಗಲು ‘ಜೈ ಭೀಮ್​’ ವಿಫಲವಾಗಿದೆ. ಈ ಬಾರಿಯಾದರೂ ಭಾರತಕ್ಕೆ ಒಂದು ಆಸ್ಕರ್​ ಪ್ರಶಸ್ತಿ ಸಿಗಲಿದೆ ಎಂದು ಕನಸು ಕಾಣುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ.’ಜೈ ಭೀಮ್​’ ಚಿತ್ರಕ್ಕೆ ಆಸ್ಕರ್​ ಗೆಲ್ಲುವ ಎಲ್ಲ ಸಾಮರ್ಥ್ಯ ಇದೆ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಂತ ಈ ಸಿನಿಮಾ ಮಾಡಿದ ಸಾಧನೆ ಸಣ್ಣದೇನಲ್ಲ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಕೆಲವು ಸೆಲೆಬ್ರಿಟಿಗಳು ಈ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ‘ಆಸ್ಕರ್​ ಯೂಟ್ಯೂಬ್​ ಲೈಬ್ರರಿ’ಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಿನಿಮಾ ಎಂಬ ಖ್ಯಾತಿಗೆ ‘ಜೈ ಭೀಮ್​’ ಪಾತ್ರವಾಗಿದೆ!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಬೆಡಗಿ ಕೃತಿ ಸನೋನ್ ಇದೀಗ ಬಹುಭಾಷಾ ನಟಿ!

Thu Feb 10 , 2022
  ಬಾಲಿವುಡ್ ಬೆಡಗಿ ಕೃತಿ ಸನೋನ್ ಇದೀಗ ಬಹುಭಾಷಾ ನಟಿ. ಸುಮಾರು 5 ಬಿಗ್​ಬಜೆಟ್ ಚಿತ್ರಗಳಲ್ಲಿ ಕೃತಿ ಬಣ್ಣಹಚ್ಚುತ್ತಿದ್ದಾರೆ. ಇದರಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’, ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರಗಳು ಸೇರಿವೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial