ಆ ಮನೆಯ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರು.!

ಶಿವಮೊಗ್ಗ: ಆ ಮನೆಯ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರು. ನೋವಿನಲ್ಲೇ ಕುಟುಂಬಸ್ಥರು ಮೃತನ ಅಂತ್ಯಕ್ರಿಯೆ ನೆರವೇರಿಸಿದ್ದರು. ಸಾವಿನ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇತಂಹ ಸಂಕಷ್ಟ ಸನ್ನಿವೇಶದಲ್ಲಿ ಜ್ಯೋತಿಷಿ ಹೇಳಿದ ಆ ಮಾತನ್ನು ಪಾಲಿಸಿದ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಾವಿನ ಮನೆಯಲ್ಲಿ ಒಂದು ದಿನ ಯಾರೂ ಇರಬಾರದು. ಇಲ್ಲವಾದರೆ ಒಳ್ಳೆಯದಾಗಲ್ಲ…’ ಎಂಬ ಜ್ಯೋತಿಷಿ ಮಾತು ನಂಬಿದ ಕುಟುಂಬ ಅವರ ಸಲಹೆ ಪಾಲಿಸಲು ಆ ರಾತ್ರಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಬೆಳಾಗುವಷ್ಟರಲ್ಲಿ ಕಾದಿತ್ತು ಭಾರೀ ಆಘಾತ. ಅಷ್ಟಕ್ಕೂ ಏನಾಯ್ತು ಗೊತ್ತಾ?

ನವುಲೆ ಜ್ಯೋತಿ ನಗರದ ರುದ್ರೇಶ್ ಎಂಬುವರ ಹಿರಿಯ ಸಹೋದರ ವೇದಾಂತ ನಿಧನರಾಗಿದ್ದರು. ಸಾವಿನ ಮನೆಯಲ್ಲಿ ಒಂದು ದಿನ ಯಾರೂ ಇರಬಾರದು ಎಂದು ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದರಿಂದ ಅವರ ಸಲಹೆಯಂತೆ ರುದ್ರೇಶ್ ಏ.9ರಂದು ರಾತ್ರಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದರು. ರುದ್ರೇಶ್ ತಾಯಿ ಪರಿಚಿತರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಅವರ ಅಜ್ಜಿ ಕಲ್ಲಗಂಗೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಅಂದು ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ 3.46 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನದ ಆಭರಣ, ಹಾಗೂ ಬೆಳ್ಳಿ ಸಾಮಗ್ರಿ, 10 ಸಾವಿರ ರೂ. ನಗದು ಕದ್ದೊಯ್ದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ!ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ

Wed Apr 13 , 2022
  ಮಂಗಳೂರು, ಎ.13: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯು ಕಾನೂನು ಪ್ರಕಾರ ನಡೆಯುತ್ತದೆ. ಎಲ್ಲೂ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳೂರಿನಲ್ಲಿಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ವಿರುದ್ಧ ಎಫ್ ಐಆರ್ ಆಗಿದ್ದು, ಆ ಬಗ್ಗೆ ಎಲ್ಲ ವಿವರ ಪಡೆದುಕೊಂಡಿದ್ದೇನೆ. ಈ ಬಗ್ಗೆ ಈಶ್ವರಪ್ಪರಲ್ಲೂ ಮಾತನಾಡುತ್ತೇನೆ, ಫೋನಲ್ಲೂ ಕೆಲವು ವಿಚಾರ […]

Advertisement

Wordpress Social Share Plugin powered by Ultimatelysocial