‘ಜೇಮ್ಸ್’ ಸಿನಿಮಾ ಈಗಾಗಲೇ ರಿಲೀಸ್ ಆಗಿ 50ನೇ ದಿನದತ್ತ ಮುನ್ನುಗ್ಗುತ್ತಿದೆ.

 

‘ಜೇಮ್ಸ್’ ಸಿನಿಮಾ ಈಗಾಗಲೇ ರಿಲೀಸ್ ಆಗಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಅಪ್ಪು ಅಭಿಮಾನಿಗಳು ಬಾರದ ಹೃದಯದಲ್ಲಿಯೇ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್’ ಅನ್ನು ವೀಕ್ಷಿಸಿದ್ದರು. ಕೇವಲ ನಾಲ್ಕು ದಿನಗಳಿಗೆ ‘ಜೇಮ್ಸ್’ ಸಿನಿಮಾ ದಾಖಲೆ ಗಳಿಕೆ ಮಾಡಿತ್ತು

ಪುನೀತ್ ರಾಜ್‌ಕುಮಾರ್ ಅಗಲಿ ಹೆಚ್ಚು ಕಡಿಮೆ 6 ತಿಂಗಳುಗಳು ಕಳೆದಿವೆ. ಅಪ್ಪು ಅಭಿಮಾನಿಗಳು ದು:ಖದಲ್ಲಿ ಪುನೀತ್ ರಾಜ್‌ಕುಮಾರ್ ಧ್ಯಾನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ಅಭಿಮಾನಿಗಳಿಗೆ ‘ಜೇಮ್ಸ್’ ಚಿತ್ರತಂಡ ಬಿಗ್ ಪರ್ಪ್ರೈಸ್ ಕೊಟ್ಟಿದೆ.

‘ಜೇಮ್ಸ್’ ಸಿನಿಮಾ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾಗೆ ಸ್ವತ: ಅಪ್ಪು ಧ್ವನಿಯನ್ನು ಅಳವಡಿಸಲಾಗಿದೆ. ಈ ಮೂಲಕ ‘ಜೇಮ್ಸ್’ ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದೆ.

‘ಜೇಮ್ಸ್’ ಚಿತ್ರದಲ್ಲಿ ಅಪ್ಪು ಧ್ವನಿ
‘ಜೇಮ್ಸ್’ ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಬೇಕು ಅಂತ ಇಡೀ ತಂಡ ಪಣ ತೊಟ್ಟಿತ್ತು. ಈ ಮಧ್ಯೆ ಅಪ್ಪು ಧ್ವನಿಯನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಿತ್ತು. ಆದರೆ, ಆ ಸಮಯದಲ್ಲಿ ಸಾಧ್ಯವಾಗಿರಲಿಲ್ಲ. ಈಗ ‘ಜೇಮ್ಸ್’ ಸಿನಿಮಾ ಬಿಡುಗಡೆಯ ಬಳಿಕ ಅಪ್ಪು ಧ್ವನಿಯನ್ನು ಅಳವಡಿಸುವ ಮೂಲಕ ಹೊಸ ರೂಪ ಕೊಟ್ಟಿದೆ. ತಂತ್ರಜ್ಞಾನ ಬಳಸಿ ಇಂತಹದ್ದೊಂದು ಪ್ರಯತ್ನಕ್ಕೆ ಚಿತ್ರತಂಡ ಕೈ ಹಾಕಿದೆ.

ಆದಿ ಪುರುಷ್ ನಿಲ್ಲಿಸಿ ‘ಜೇಮ್ಸ್’ ಡಬ್ಬಿಂಗ್

‘ಜೇಮ್ಸ್’ ಚಿತ್ರಕ್ಕೆ ತಂತ್ರಜ್ಞ ಪಪ್ಪು ಹಾಗೂ ಅವರ ತಂಡ ಅಪ್ಪು ಧ್ವನಿಯನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಈ ತಂಡವನ್ನು ತೆಲುಗು ನಟ ಶ್ರೀಕಾಂತ್ ಪರಿಚಯಿಸಿದ್ದರು. ಆದರೆ ಆ ವೇಳೆ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾಗಾಗಿ ಈ ತಂಡ ಕೆಲಸ ಮಾಡುತ್ತಿತ್ತು. ” ಶ್ರೀಕಾಂತ್ ಅವರು ‘ಜೇಮ್ಸ್‌’ ಸಿನಿಮಾದ ಪರಿಸ್ಥಿತಿಯ ಬಗ್ಗೆ ಹೇಳಿದ್ರು. ಆಗ ನಾವು ಈ ಪ್ರಯತ್ನಕ್ಕೆ ಕೈ ಹಾಕಿದ್ವಿ. ಸಿನಿಮಾ ರಿಲೀಸ್‌ಗೂ ಮೊದಲೇ ಕೇಳಿದ್ರು. ಆದರೆ, ಆ ಸಮಯದಲ್ಲಿ ಸಾಧ್ಯವಾಗಿರಲಿಲ್ಲ. ನಟ ಪ್ರಭಾಸ್ ಜೊತೆ ಆದಿಪುರುಷ್ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದೆವು. ಪ್ರಭಾಸ್ ಅವರ ಅನುಮತಿ ಪಡೆದು, ಆ ಸಿನಿಮಾ ನಿಲ್ಲಿಸಿ ‘ಜೇಮ್ಸ್’ ಸಿನಿಮಾದ ಕೆಲಸ ಶುರುಮಾಡಿದ್ದೆವು. 25 ಜನರು ನಾಲ್ಕೈದು ತಿಂಗಳು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇವೆ.” ಎಂದು ಪಪ್ಪು ಹೇಳಿದ್ದಾರೆ.

ವಿಡಿಯೋ ಝಲಕ್ ವೀಕ್ಷಿಸಿರೋ ಅಪ್ಪು ಪತ್ನಿ

ಒಂದು ವಾರದ ಹಿಂದಷ್ಟೇ ಪುನೀತ್ ರಾಜ್‌ಕುಮಾರ್ ಧ್ವನಿಯನ್ನು ‘ಜೇಮ್ಸ್’ ಸಿನಿಮಾಗೆ ಅಳವಡಿಸಲಾಗಿತ್ತು. ಆಗ ಸಣ್ಣ ಝಲಕ್ ಅನ್ನು ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಪತ್ನಿ ಪುನೀತ್ ರಾಜ್‌ಕುಮಾರ್ ಅವರಿಗೆತೋರಿಸಲಾಗಿದೆ. ಇದನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರಂತೆ. ಸದ್ಯ ಪುನೀತ್ ರಾಜ್‌ಕುಮಾರ್‌ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಲಾಗಿದೆ. ” ಸುಮಾರು 60 ಸ್ಕ್ರೀನ್‌ಗಳಲ್ಲಿ ‘ಜೇಮ್ಸ್’ ಸಿನಿಮಾ ಪ್ರದರ್ಶನ ಆಗುತ್ತಿದೆ. ಅಪ್ಪು ಧ್ವನಿಯನ್ನು ಸೇರಿಸಿದ ಬಳಿಕ ಮತ್ತಷ್ಟು ಸ್ಕ್ರೀನ್ ಅನ್ನು ಹೆಚ್ಚಿಸಲಿದ್ದೇವೆ. ಇದೇ ಶುಕ್ರವಾರ ಇಡೀ ಸಿನಿಮಾವನ್ನು ಶಿವಣ್ಣ, ರಾಘಣ್ಣ, ಅಶ್ವಿನಿ ಮೇಡಂ ನೋಡುತ್ತಾರೆ.” ಎಂದಿದ್ದಾರೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ.

ಈ ವಾರದಿಂದಲೇ ‘ಜೇಮ್ಸ್’ ದರ್ಬಾರ್

ಇದೇ ಶುಕ್ರವಾರದಿಂದ ಅಪ್ಪು ಧ್ವನಿಯನ್ನು ಸೇರಿಸಿದ ‘ಜೇಮ್ಸ್’ ಚಿತ್ರವನ್ನು ಬಿಡುಗಡೆ ಪ್ರದರ್ಶನ ಮಾಡಲಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲೇ ‘ಜೇಮ್ಸ್’ ಸಿನಿಮಾವನ್ನು ತೋರಿಸುವ ಪ್ರಯತ್ನಕ್ಕೆ ಮಾಡುತ್ತಿದೆ. ಹೀಗಾಗಿ ಈ ವಾರ ಅಪ್ಪು ಫ್ಯಾನ್ಸ್ ಮತ್ತೊಂದು ಥಿಯೇಟರ್‌ನಲ್ಲಿ ಹಬ್ಬ ಮಾಡಲಿದ್ದಾರೆ. ಅಪ್ಪು ಧ್ವನಿಯಲ್ಲಿ ‘ಜೇಮ್ಸ್ ಮತ್ತೆ ಸದ್ದು ಮಾಡಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಟ್ಟು ಹಬ್ಬದ ಆಚರಣೆ ಬೇಡ ಅಂತಾ ನಟ ಪ್ರೇಮ್‌ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.!

Mon Apr 18 , 2022
  ಏಪ್ರಿಲ್ 18ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಪ್ರೇಮ್‌ ಅಭಿಮಾನಿಗಳಲ್ಲಿ ಮನವಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಪ್ಪು ನಿಧನದಿಂದ ಇಡೀ ಚಿತ್ರರಂಗವೇ ತತ್ತರಿಸಿದೆ ಅವರ ಅಗಲಿಕೆಯ ಹಿನ್ನಲೆ ಹುಟ್ಟು ಹಬ್ಬದ ಆಚರಣೆ ಬೇಡ ಅಂತಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಆದರೆ ನಿಮ್ಮ ಕರೆಗಳಿಗೆ ಕಾಯುತ್ತಿರುತ್ತೇನೆ ಎಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇಡೀ ಚಿತ್ರರಂಗವೇ ಅಪ್ಪು ನಿಧನದ ನೋವಿನಲ್ಲಿದ್ದಾರೆ ಆದ್ದರಿಂದ ಹುಟ್ಟುಹಬ್ಬದ ಸಂಭ್ರಮ ಬೇಡ ನೀವು ಎಲ್ಲಿದ್ದಿರೋ […]

Advertisement

Wordpress Social Share Plugin powered by Ultimatelysocial