ಜಮ್ಮು-ಕಾಶ್ಮೀರ: ಜೆಇಎಂ ಉಗ್ರರ ಅಡಗುತಾಣಗಳ ಮೇಲೆ ದಾಳಿ, 11 ಭಯೋತ್ಪಾದಕ ಸಹಚರರ ಬಂಧನ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಅನಂತನಾಗ್ ಜಿಲ್ಲೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ (ಜೆಇಎಂ) ನ ಎರಡು ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದು, ಮೂವರು ಸಕ್ರಿಯ ಭಯೋತ್ಪಾದಕರು ಸೇರಿದಂತೆ 11 ಮಂದಿ ಉಗ್ರರ ಸಹಚರರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.ದಾಳಿ ವೇಳೆ ಉಗ್ರರ ಸಹಚರರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.ಶ್ರೀಗುಫ್ವಾರಾ ಗ್ರಾಮದ ಸಖ್ರಾಸ್ ಕ್ರಾಸಿಂಗ್‌ನಲ್ಲಿ ಅಂತಹ ಚೆಕ್‌ಪೋಸ್ಟ್‌ಗಳಲ್ಲಿ ಒಂದನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಪರಾರಿಯಾಗಲು ಪ್ರಯತ್ನಿಸಿದಾಗ ಅವರನ್ನು ತಡೆದು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಅವರ ಬಳಿ ಎರಡು ಪಿಸ್ತೂಲ್ (ಚೈನೀಸ್) ಜೊತೆಗೆ ಮ್ಯಾಗಜೀನ್ ಮತ್ತು ಮದ್ದುಗುಂಡುಗಳು ಪತ್ತೆಯಾಗಿತ್ತು.ಬಳಿಕ ಮೂವರನ್ನೂ ಬಂಧಿಸಿ ವಿಚಾರಣೆ ನಡೆಸಿದಾಗ ಇವರು ನೀಡದ ಮಾಹಿತಿ ಮೇರೆದೆ ಎರಡು ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HAIR FALL TIPS:ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಈ 5 ವಿಷಯಗಳನ್ನು ಸೇರಿಸಿ;

Wed Feb 9 , 2022
ದೀರ್ಘಕಾಲದವರೆಗೆ, ಕೂದಲು ಉದುರುವಿಕೆ ವಯಸ್ಸಾದಿಕೆಯೊಂದಿಗೆ ಸಂಬಂಧಿಸಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಯುವಜನರು ಕೂಡ ಬೋಳಾಗುತ್ತಿದ್ದಾರೆ. ನೀವು ಸಹ ಹೆಚ್ಚಿನ ಪ್ರಮಾಣದ ಕೂದಲು ಉದುರುವಿಕೆಯನ್ನು ವೀಕ್ಷಿಸುತ್ತಿದ್ದರೆ, ನೀವು ತಕ್ಷಣ ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಈ ಸಮಸ್ಯೆಯನ್ನು ನಿಭಾಯಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಆಹಾರವನ್ನು ಬದಲಾಯಿಸುವುದು. ನೀವು ಸೇವಿಸುವ ಯಾವುದೇ ಆಹಾರವು ನಿಮ್ಮ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಕೂದಲನ್ನು ಆರೋಗ್ಯಕರ, ಬಲವಾದ ಮತ್ತು ಸುಂದರವಾಗಿಸಲು ನಿಮ್ಮ ಆಹಾರದಲ್ಲಿ […]

Advertisement

Wordpress Social Share Plugin powered by Ultimatelysocial