ಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್ ನ ಎಂಟು ಉಗ್ರ ಸಹಚರರ ಬಂಧನ

ಶ್ರೀನಗರ: ದಕ್ಷಿಣ ಕಾಶ್ಮೀರದ ಅವಂತಿಪೋರಾ ಪ್ರದೇಶದಲ್ಲಿ ಮಂಗಳವಾರ (ಮೇ 24) ಜೈಶ್-ಎ-ಮೊಹಮ್ಮದ್ ನ ಎಂಟು ಉಗ್ರ ಸಹಚರರನ್ನು ಬಂಧಿಸಿದ್ದಾರೆ.

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಹಲವಾರು ಶಂಕಿತರನ್ನು ಬಂಧಿಸಲಾಗಿ, ಹೆಚ್ಚಿನ ಸುಳಿವುಗಳನ್ನು ಗಮನಿಸಿದ ಬಳಿಕ ಆವಂತಿಪೋರಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಘಟಕವನ್ನು ಭೇದಿಸಲು ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಸಾಧ್ಯವಾಯಿತು.

ಪೊಲೀಸ್ ವಕ್ತಾರರ ಮಾಹಿತಿ ಪ್ರಕಾರ ಬಂಧಿತರು ಮುಷ್ತಾಕ್ ಅಹ್ಮದ್ ದಾರ್, ಇಶ್ಫಾಕ್ ಅಹ್ಮದ್ ದಾರ್, ಮಂಜೂರ್ ಅಹ್ಮದ್ ದಾರ್ ಫಯಾಜ್ ಅಹ್ಮದ್ ರಾಥರ್, ಶಬೀರ್ ಅಹ್ಮದ್ ರಾಥರ್ ಸೈದಾಬಾದ್ , ಮೊಹಮ್ಮದ್ ಲತೀಫ್ ಶೀರಾಜ್ ಅಹ್ಮದ್ ಅರಿಪಾಲ್ ಮತ್ತು ವಸೀಮ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

ಬಂಧಿತ ಉಗ್ರ ಸಹಚರರು ಇಬ್ಬರು ಸಕ್ರಿಯ ಭಯೋತ್ಪಾದಕರಿಗೆ ಆಶ್ರಯ, ಲಾಜಿಸ್ಟಿಕ್ಸ್ ಮತ್ತು ಶಸ್ತ್ರಾಸ್ತ್ರ, ಮದ್ದುಗುಂಡುಗಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟೆಕ್ಸಾಸ್‌ ದಾಳಿ: ಅಮೆರಿಕ ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಾಟ

Wed May 25 , 2022
  ವಾಷಿಂಗ್ಟನ್, ಮೇ 25: ಅಮೆರಿಕದ ಟೆಕ್ಸಾಸ್‌ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥಕವಾಗಿ ವೈಟ್ ಹೌಸ್‌ ಸೇರಿದಂತೆ ಸಾರ್ವಜನಿಕ ಕಚೇರಿಗಳು ಮತ್ತು ಸ್ಥಳಗಳಲ್ಲಿ ಶನಿವಾರದವರೆಗೆ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದಾರೆ. “ವೈಟ್ ಹೌಸ್‌, ಮಿಲಿಟರಿ ತಾಣಗಳು, ನೌಕಾ ಕೇಂದ್ರಗಳು, ಯುದ್ಧ ನೌಕೆಗಳು ಸೇರಿದಂತೆ ದೇಶಾದ್ಯಂತ ಇರುವ ಸಾರ್ವಜನಿಕ ಕಚೇರಿಗಳು ಮತ್ತು ಸ್ಥಳಗಳಲ್ಲಿ 2022ರ ಮೇ 28ರವರೆಗೆ ಅಮೆರಿಕದ ರಾಷ್ಟ್ರ […]

Advertisement

Wordpress Social Share Plugin powered by Ultimatelysocial