ಜಮ್ಮು ಮತ್ತು ಕಾಶ್ಮೀರದಲ್ಲಿ ಮಧ್ಯಮ ತೀವ್ರತೆಯ ಭೂಕಂಪನ

 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ 5.7 ತೀವ್ರತೆಯ ಭೂಕಂಪನ ಸಂಭವಿಸಿದೆ. ಆದರೆ ಯಾವುದೇ ಪ್ರದೇಶದಲ್ಲಿಯೂ ಸಾವು ನೋವು, ಆಸ್ತಿ ಹಾನಿ ಆದ ವರದಿಗಳಿಲ್ಲ.’ಶನಿವಾರ ಬೆಳಗ್ಗೆ 9.45 ಗಂಟೆಗೆ ಮಧ್ಯಮ ತೀವ್ರತೆಯ ಕಂಪನ ಸಂಭವಿಸಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಅಫ್ಗಾನಿಸ್ತಾನ-ತಜಕಿಸ್ತಾನ್ ಗಡಿಯ, 181 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರತಿಸಲಾಗಿದೆ.ಕಾಶ್ಮೀರವು ಭೂಕಂಪನ ಪೀಡಿತ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಹಿಂದೆಯೂ ಅಲ್ಲಿ ದೊಡ್ಡ ಮಟ್ಟದ ಕಂಪನಗಳು ಸಂಭವಿಸಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಸಾದುದ್ದೀನ್ ಓವೈಸಿ ಅವರು ಗೃಹ ಸಚಿವಾಲಯ ನೀಡಿದ ಝಡ್ ಕೆಟಗರಿ ಭದ್ರತೆಯನ್ನು ತಿರಸ್ಕರಿಸಿದ್ದಾರೆ.

Sat Feb 5 , 2022
ಲಕ್ನೋ ಫೆಬ್ರವರಿ 04: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್  ಎಐಎಂಐಎಂ  ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಗೃಹ ಸಚಿವಾಲಯ ನೀಡಿದ ಝಡ್ ಕೆಟಗರಿ ಭದ್ರತೆಯನ್ನು ತಿರಸ್ಕರಿಸಿದ್ದಾರೆ.ಉತ್ತರಪ್ರದೇಶದ ಮೀರತ್ ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಓವೈಸಿ ವಾಹನದ ಮೇಲೆ 3-4 ಸುತ್ತು ಗುಂಡು ಹಾರಿಸಲಾಗಿತ್ತು.ರಾಷ್ಟ್ರೀಯ ಹೆದ್ದಾರಿ 24ರಲ್ಲಿನ ಹಪೂರ್- ಗಾಜಿಯಾಬಾದ್ ಮಾರ್ಗದ ಛಿಜರ್ಸಿ ಟೋಲ್ ಪ್ಲಾಜಾ ಬಳಿ ನಿನ್ನೆ ಸಂಜೆ 6 ಗಂಟೆ ಸುಮಾರಿನಲ್ಲಿ ಈ ಘಟನೆ […]

Advertisement

Wordpress Social Share Plugin powered by Ultimatelysocial