2016ರಲ್ಲಿಯೂ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಇದೀಗ ಬಯಲಾಗಿದ್ದು,

ಬೆಂಗಳೂರು: 2016ರಲ್ಲಿಯೂ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಇದೀಗ ಬಯಲಾಗಿದ್ದು, ನೊಂದ ಅಭ್ಯರ್ಥಿ ಗೃಹ ಸಚಿವರಿಗೆ ಪತ್ರ ಬರೆದಿದ್ದು, ಅಕ್ರಮವೆಸಗಿದವರ ಬಗ್ಗೆ ದೂರು ನೀಡಿದ್ದಾರೆ.

2016ರಲ್ಲಿ 59 ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ನೊಂದ ಅಭ್ಯರ್ಥಿ ಶ್ರೀನಿವಾಸ್ ಕಟ್ಟಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿದ್ದಾರೆ. 

59 ಹುದ್ದೆ ನೇಮಕಾತಿ ಅಕ್ರಮದಲ್ಲಿ ಕಲಬುರ್ಗಿ ಹಾಗೂ ಅಫಜಲಪುರದವರು ಆಯ್ಕೆಯಾಗಿದ್ದಾರೆ. 16 ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದಾರೆ. ಅಲ್ಲದೇ ನೇಮಕಾತಿಗಾಗಿ 40 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

16 ಜನರ ಮೊಬೈಲ್ ನಂಬರ್, ಫೋಟೋ ಸಮೇತವಾಗಿ ಶ್ರೀನಿವಾಸ್ ಕಟ್ಟಿ ದೂರು ನೀಡಿದ್ದಾರೆ. ಗೀತಾಂಜಲಿ, ಇಂದುಮತಿ, ಗಂಗಮ್ಮ, ಹನುಮಂತ ಬಿ, ಲಿಂಗರಾಜ ಮಣ್ಣೂರ, ಸಿದ್ರಾಮ್ಮ ಬಿದ್ರಾಣಿ, ನಂದಕುಮಾರ್, ಸಿದ್ದಲಿಂಗ, ರೇಖಾ, ದಿವ್ಯಶ್ರೀ, ಪುಷ್ಪ, ಸುವರ್ಣ, ಕಿರಣ, ಶಿವರಾಜ್ ಪಾಟೀಲ್, ಶೀಲದೇವಿ, ಗಜನಂದ ಬಿರಾದಾರ್ ಸೇರಿದಂತೆ 16 ಜನರು ಅಕ್ರಮವೆಸಗಿದ್ದು, ಫೋಟೋ ಸಹಿತ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

12 ದಿನವೂ KGF 2 ದಾಖಲೆ ಕಲೆಕ್ಷನ್:

Wed Apr 27 , 2022
  ನವದೆಹಲಿ: ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ನಿರೀಕ್ಷೆಗೂ ಮೀರಿ ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನದ ಓಟವನ್ನು ಮುಂದುವರಿಸಿದೆ. ಮಾಸ್ ಎಂಟರ್ ಟೈನರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುತ್ತಿದ್ದು, ಇದೀಗ ಅಮೀರ್ ಖಾನ್ ಅಭಿನಯದ ದಂಗಲ್ ಹಾಗೂ ಬಾಹುಬಲಿ 2 ಸಿನಿಮಾದ ದಾಖಲೆಯನ್ನು ಮುರಿಯಲು ಸಜ್ಜಾಗುತ್ತಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial