JCB ಪಕ್ಷ ನಂಬಿ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ

ಕಲಬುರಗಿ ತಾಲ್ಲೂಕಿನ ಕರಕಿಹಳ್ಳಿ ಗ್ರಾಮದ ಮುಖಂಡರಾದ ಶ್ರೀ ಬಸವರಾಜ ತಂದೆ ಸೆಂಕ್ರೆಪ್ಪ ಹೊಸಗೇರಿ ರವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಆಮ್ ಆದ್ಮಿ ಪಕ್ಷ ಸೇರ್ಪಡೆ ಯಾದರು.ಇದೆ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಸಂಚಾಲಕ ಈರಣ್ಣಗೌಡ ಪಾಟೀಲ ಗುಳ್ಯಾಳ ಕ್ಷೇತ್ರದಲ್ಲಿ ಯಾವುದೇ ಚುನಾವಣೆ ನಡೆಯಲಿ ನಮ್ಮ ಕಣ್ಣಿಗೆ ಕಾಣುವುದು ಬಿಜೆಪಿ ಕಾಂಗ್ರೆಸ್ ಹಾಗು ಜೆಡಿಎಸ್ ಮಾತ್ರ.ಈ ಮೂರು ಪಕ್ಷಗಳಿಂದ ಯಾವುದೇ ಅಭ್ಯರ್ಥಿ ಗೆದ್ದರು ಅಧಿಕಾರ ನಡೆಸುವುದು ಮಾತ್ರ JCB ಪಕ್ಷ ಎಂದು ಈ ಮೂರು ಪಕ್ಷಗಳ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಂಬಿದ ಮತದಾರರಿಗೆ ಮತ್ತು ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ದ್ರೋಹ ಬಗೆದು ಗೆದ್ದ ಅಭ್ಯರ್ಥಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಖರ್ಚು ಮಾಡಿದ ನೂರು ಪಟ್ಟು ಆಸ್ತಿ ಮಾಡುತ್ತಿದ್ದಾರೆಂದು ಆರೋಪಿಸಿದರು ಈ ಮೂರು ಪಕ್ಷದ ನಾಯಕರು ಕ್ಷೇತ್ರದ ಜನರನ್ನು ಮುರ್ಖರೆಂದು ತಿಳಿದಿದ್ದಾರೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ ಎಂದು ತಿಳಿದಿರುವುದು ಇವರ ಭ್ರಮೆ ಅಷ್ಟೇ ಇಷ್ಟು ವರ್ಷಗಳ ಕಾಲ ಪ್ರಾಮಾಣಿಕ ಪಕ್ಷ ಹಾಗು ಅಭ್ಯರ್ಥಿ ಇಲ್ಲದ ಕಾರಣ ಅನಿವಾರ್ಯವಾಗಿ ಇವರಿಗೆ ಮತ ನಿಡುತ್ತಿದ್ದರು ಈಗ ಆ ಅನಿವಾರ್ಯ ಜನರಿಗಿಲ್ಲ ಆಮ್ ಆದ್ಮಿ ಪಕ್ಷದ ಪ್ರಾಮಾಣಿಕತೆ ಅಭಿವೃದ್ಧಿ ವಿಚಾರಗಳನ್ನು ಕ್ಷೇತ್ರದ ಜನಸಾಮಾನ್ಯರು ಸದ್ಬಳಕೆ ಮಾಡಿಕೊಂಡು ಈ ಭ್ರಷ್ಟ JCB ಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಇದೆ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬಸವರಾಜ ಹೊಸಗೇರಿ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಇದರ ವಿರುದ್ಧ ನಮ್ಮ ಈರಣ್ಣಗೌಡ ಪಾಟೀಲ ರವರು ಸಾಕಷ್ಟು ಹೋರಾಟಗಳು ಮಾಡುತ್ತಿದ್ದು ಇವರಿಗೆ ಬೆಂಬಲ ನೀಡುವುದು ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಬಸವನ ಬಾಗೇವಾಡಿ ಪುರಸಭೆ ಚುನಾವಣೆ

Wed Nov 4 , 2020
ಬಸವನ ಬಾಗೇವಾಡಿಯಲ್ಲಿ  ಕಳೆದ ಒಂದು ವರ್ಷದಿಂದ  ಪುರಸಭೆ ಚುನಾವಣೆಯು ಕೆಲವು ಕಾನೂನು ಅಡಚಣೆಗಳಿಂದ ಕೋರ್ಟಿನಲ್ಲಿ ತಕರಾರು ಅರ್ಜಿ ಇರುವುದರಿಂದ ಇಲ್ಲಿಯವರೆಗೆ ಆಡಳಿತಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದರು. ಆದ ಕಾರಣ ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯು ಕಾಂಗ್ರೆಸ್ ಪಕ್ಷದ ಶಾಸಕರಾದ ಶಿವಾನಂದ್ ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಅವಿರೋಧವಾಗಿ ಶ್ರೀಮತಿ ಅನ್ನಪೂರ್ಣ ಸಂಜು ಕಲ್ಯಾಣಿ ಅಧ್ಯಕ್ಷರಾಗಿ ಹಾಗೂ ಶ್ರೀಮತಿ.ಲಕ್ಷ್ಮೀಬಾಯಿ ಶರಣಪ್ಪ ಬೆಲ್ಲದ ಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಸಂದರ್ಭದಲ್ಲಿ ಬಸವನಬಾಗೇವಾಡಿ ಶಾಸಕರಾದ […]

Advertisement

Wordpress Social Share Plugin powered by Ultimatelysocial