ಜೆಡಿಎಸ್ ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿ: ಶಾಸಕ ಬಂಡೆಪ್ಪ ಖಾಶೆಂಪುರ್..!

ಬೀದರ್ (ಏ.24): ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿ, ಅವರಿಂದಲೇ ನಮ್ಮ ಪಕ್ಷ ಗಟ್ಟಿಯಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಣದೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಕ್ಷೇತ್ರದ ಆಣದೂರು, ಆಣದೂರುವಾಡಿ, ಸಿಖೇನಪೂರ ಸೇರಿದಂತೆ ವಿವಿಧ ಗ್ರಾಮಗಳ ವಿವಿಧ ಪಕ್ಷಗಳ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಸ್ವಾಭಿಮಾನಿಗಳಾಗಿದ್ದಾರೆ. ಅವರೇ ನಮ್ಮ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ. ಅವರಿಂದಲೇ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಏನು ಇಲ್ಲ, ಈಗ ಅಧಿಕಾರದಲ್ಲಿರುವುದು ಉದ್ರಿ ಸರ್ಕಾರ. ಕಾಂಗ್ರೆಸ್ ನವ್ರು ತಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದ ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟಿಲ್ಲ. ಅಧಿಕಾರದಲ್ಲಿ ಇಲ್ಲದ ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಕೊಡ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದಮೇಲೆ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೇ ನಾವು ನಮ್ಮ ಪಕ್ಷ ಬಂದ್ ಮಾಡಿಕೊಳ್ತೇವೆ ಅಂತ ಯಾವುದೇ ಪಕ್ಷದವ್ರು ಹೇಳಿಲ್ಲ. ನಮ್ಮ ಪಕ್ಷದ ಕುಮಾರಸ್ವಾಮಿರವರು ಆ ಮಾತು ಹೇಳಿದ್ದಾರೆ.
ನಾವು ರೈತರ ಸಾಲಮನ್ನಾ ಮಾಡಿದ್ದೇವೆ. ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಟ್ಟಿದ್ದೇವೆ. ಅಧಿಕಾರಕ್ಕೆ ಬಂದ ಕೂಡಲೇ ರೈತರ ಬೋರ್ವೆಲ್ ಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುತ್ತೇವೆ. ವಿವಿಧ ವೇತನಗಳನ್ನು ಹೆಚ್ಚಿಗೆ ಮಾಡುತ್ತೇವೆ. ಎಲ್ಲರೂ ಸೇರಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಹೊರಗಿನವರು ಬ್ಯಾಟಿಂಗ್ ಮಾಡಲು ಬಿಡಬೇಡಿ, ಇಲ್ಲಿಯವರಿಗೆ ಅಧಿಕಾರ ನೀಡಿ:
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೊರಗಿನಿಂದ ಬಂದವರು ಬ್ಯಾಟಿಂಗ್ ಮಾಡಲು ಬಿಡಬೇಡಿ. ನಮ್ಮ ಕ್ಷೇತ್ರದವ್ರೇ ಬ್ಯಾಟಿಂಗ್ ಮಾಡಬೇಕು. ಹೊರಗಿನವ್ರಿಗೆ ನಮ್ಮ ಬಾಲಿಂಗ್ ಶಕ್ತಿ ಏನು ಎಂಬುದನ್ನು ಎಲ್ಲರೂ ಸೇರಿ ತೋರಿಸಿಕೊಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಣದೂರಿನ ವೀರಂತಯ್ಯಸ್ವಾಮಿಗಳು, ಜೆಡಿಎಸ್ ಪಕ್ಷದ ಪ್ರಮುಖರಾದ ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ಸುನೀಲ್ ಸಾವಳಗಿ, ಚಂದು ಸಾವಳಗಿ, ಅಶೋಕ ಗುಮ್ಪಾತಪೂರ, ವಿನೋದ್ ಶಾಸ್ತ್ರಿ, ಬಸವರಾಜ್ ಒಂಟಿ, ಸಂಜುರೆಡ್ಡಿ ಆಣದೂರು, ಫಾರೂಕ್, ಸಿದ್ದು ಪಾಟೀಲ್, ರಜಿನಕಾಂತ್, ಬಾಬು, ರಾಜು, ಹೈದರ್, ಆಣದೂರವಾಡಿಯ ಲಕ್ಷಣ್, ಅನೀಲ್, ದಾಮೋದರ ಪಾಟೀಲ್, ಸಿಖೇನಪೂರದ ಮಲ್ಲಿಕಾರ್ಜುನ, ವಿಶಾಲ್, ಓಂಕಾರ್ ಎಸ್ ಬಿ ಸೇರಿದಂತೆ ಅನೇಕರಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ರಾಜ್‌ಕುಮಾರ್‌ ಮುಂದಿನ ಯುವಪೀಳಿಗೂ ಆದರ್ಶ ಆದ್ರು..!

Mon Apr 24 , 2023
ಮಾಲೂರು : ಅಭಿಮಾನ ಮತ್ತು ಸರಳತೆಯಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಕನ್ನಡ ಚಿತ್ರರಂಗದ ಅನಭಿಶಕ್ತಿ ದೊರೆ ವರನಟ ಡಾ. ರಾಜಕುಮಾರ್ ಅವರು ಅಭಿಮಾನಿಗಳ ಮನದಾಳದಲ್ಲಿ ಇಂದಿಗೂ ಅಮರ ಎಂದು ಕಾಸಪ್ಪ ತಾಲೂಕು ಅಧ್ಯಕ್ಷ ಎಂ.ವಿ ಹನುಮಂತಯ್ಯ ಹೇಳಿದರು. ಪಟ್ಟಣದ ಪುರಸಭಾ ಆವರಣದಲ್ಲಿರುವ ಕರ್ನಾಟಕ ರತ್ನ, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುತ್ಥಳಿಗೆ 94 ನೇ ಜಯಂತಿ ಅಂಗವಾಗಿ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಡಾ. ರಾಜ್‌ಕುಮಾರ್‌ […]

Advertisement

Wordpress Social Share Plugin powered by Ultimatelysocial