2008 ರ ನಂತರ ಜನಿಸಿದವರಿಗೆ ಈ ದೇಶದಲ್ಲಿ ಸಿಗೋಲ್ಲ ಸಿಗರೇಟ್.!

2008 ರ ನಂತರ ಜನಿಸಿದವರಿಗೆ ಈ ದೇಶದಲ್ಲಿ ಸಿಗೋಲ್ಲ ಸಿಗರೇಟ್.!

2008ನೇ ಇಸವಿ ನಂತರ ಜನಿಸಿದವರು ಇನ್ಮುಂದೆ ನ್ಯೂಜಿಲೆಂಡ್‌ನಲ್ಲಿ ಸಿಗರೇಟ್ ಖರೀದಿಸಲು ಸಾಧ್ಯವಾಗುವುದಿಲ್ಲ. ಯುವಕರು ಧೂಮಪಾನ ಸೇವನೆ ಮಾಡುವುದು ಉತ್ತಮವಲ್ಲ. ಹೀಗಾಗಿ ಯುವಕರಿಗೆ ಹೊಗೆಯುಗುಳುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಪೂರೈಸುವುದು ಅಪರಾಧವಾಗುತ್ತದೆ ಎಂದು ನ್ಯೂಜಿಲ್ಯಾಂಡ್ ನ ಆರೋಗ್ಯ ಸಹಾಯಕ ಸಚಿವ ಆಯೆಶಾ ವೆರಾಲ್ ತಿಳಿಸಿದ್ದಾರೆ.

ಪ್ರಸ್ತುತ ನ್ಯೂಜಿಲೆಂಡ್‌ ಸರ್ಕಾರದ ಅಂಕಿಅಂಶಗಳ ಪ್ರಕಾರ, 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 11.6 ರಷ್ಟು ಜನರು ಧೂಮಪಾನ ಮಾಡುತ್ತಾರೆ, ಇದು ವಯಸ್ಕರಲ್ಲಿ ಶೇ. 29 ರಷ್ಟು ಏರಿಕೆಯಾಗಿದೆ.

2022 ರ ಜೂನ್‌ನಲ್ಲಿ ಈ ಬಗ್ಗೆ ಸಂಸತ್ತಿನಲ್ಲಿ ಶಾಸನವನ್ನು ಮಂಡಿಸಲಾಗುತ್ತದೆಯಂತೆ. ನಂತರ 2024 ರಿಂದ ಹಂತ-ಹಂತಗಳಲ್ಲಿ ನಿರ್ಬಂಧಗಳನ್ನು ಹೊರತರಲಾಗುವುದು. ನಂತರ 2025 ರಲ್ಲಿ ನಿಕೋಟಿನ್ ಅಂಶವನ್ನು ಕಡಿಮೆ ಪ್ರಮಾಣದಲ್ಲಿ ಸೇರಿಸಬೇಕು ಮತ್ತು 2027 ರಿಂದ ಹೊಗೆ-ಮುಕ್ತ ಪೀಳಿಗೆಯನ್ನು ರಚಿಸಲಾಗುತ್ತದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಮೂಲಕ ನ್ಯೂಜಿಲೆಂಡ್‌ನಲ್ಲಿ ತಂಬಾಕು ಉದ್ಯಮವನ್ನು ವಿಶ್ವದಲ್ಲೇ ಹೆಚ್ಚು ನಿರ್ಬಂಧಿತವಾಗಿಸುವ ದೇಶವಾಗಿ ಹೊರಹೊಮ್ಮಿದೆ. ಭೂತಾನ್‌ನಲ್ಲಿ ಈ ಹಿಂದೆ ಸಿಗರೇಟ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನ್ಯೂಜಿಲೆಂಡ್‌ನ ನೆರೆಯ ದೇಶ ಆಸ್ಟ್ರೇಲಿಯಾವು 2012 ರಲ್ಲಿ ಸಿಗರೇಟ್‌ಗಳ ಸರಳ ಪ್ಯಾಕೇಜಿಂಗ್ ಅನ್ನು ಕಡ್ಡಾಯಗೊಳಿಸಿದ ವಿಶ್ವದ ಮೊದಲ ದೇಶವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುಜರಾತ್‌ ಪಂಚಾಯಿತಿ: ಚುನಾವಣೆಯಲ್ಲಿ ಒಂದೇ ಮತ ಪಡೆದ ಅಭ್ಯರ್ಥಿ

Wed Dec 22 , 2021
ಅಹಮದಾಬಾದ್‌: ಗುಜರಾತ್‌ ರಾಜ್ಯದ ಸ್ಥಳೀಯ ಸಂಸ್ಥೆ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಒಂದೇ ಮತ ಪಡೆದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಸಂತೋಷ್‌ ಹಲಪಟ್ಟಿ ತಮ್ಮ ಒಂದು ಮತವನ್ನು ಮಾತ್ರ ಪಡೆದಿದ್ದಾರೆ. ಅವರು ಛಾರವಾಲ ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಸಂತೋಷ್‌ ಅವರ ಕುಟುಂಬದಲ್ಲಿ ಒಟ್ಟು 12 ಜನರು ಇದ್ದಾರೆ. ಆದರೆ ಯಾರೂ ಸಂತೋಷ್‌ಗೆ ಮತ ನೀಡಿಲ್ಲ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಚುನಾವಣೆಗಳು ಬರುತ್ತವೆ, ಹೋಗುತ್ತವೆ ಇದರಲ್ಲಿ ನಾನು […]

Advertisement

Wordpress Social Share Plugin powered by Ultimatelysocial