ಕೊಲೆ ಪ್ರಕರಣದಲ್ಲಿ ಪೊಲೀಸರು ಅಮಾಯಕರ ಬಂಧಿಸಿ 15 ಲಕ್ಷ ವಸೂಲಿ ಆರೋಪ ವಿಚಾರ!

9 ತಿಂಗಳ ಹಿಂದೆ ನಡೆದ ಯುವಕನ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು.ಕೊಲೆ ಆರೋಪ ಹೊತ್ತವರು ನಾವು ಕೊಲೆ ಮಾಡಿಲ್ಲ ಪೊಲೀಸರು ನಮ್ಮನ್ನ ಫಿಟ್ ಮಾಡಿದ್ದಾರೆಂದು ವಾದ

ಇತ್ತ ಕೊಲೆಯಾದವನ ಮನೆಯವರು ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾಗಿ ವಾದ

ಮತ್ತೊಂದೆಡೆ ಕೊಲೆ ಕೇಸ್‌ನಲ್ಲಿ ಎಲ್ಲ ಸಾಕ್ಷಿ ಕಲೆ ಹಾಕಿಯೇ ಆರೋಪಿಗಳ ಬಂಧಿಸಿದ್ದೇವಿ ಅಂತಿರೋ ಪೊಲೀಸ್ ಮೂಲಗಳು. 2021ರ ಜುಲೈ 17 ರಂದು ಗೋಕಾಕನಲ್ಲಿ ನಡೆದಿದ್ದ ಕೊಲೆ ಪ್ರಕರಣ.

ಗೋಕಾಕ ನಗರದ ಮಹಾಂತೇಶ್ ನಗರದಲ್ಲಿ ಮಂಜುನಾಥ ಮುರಕಿಭಾವಿ ಹತ್ಯೆಯಾಗಿತ್ತು.

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ ದುಷ್ಕರ್ಮಿಗಳು ಪ್ರಕರಣ ಸಂಬಂಧ ಮೂವರನ್ನ ಬಂಧಸಿದ್ದ ಗೋಕಾಕ ಪೊಲೀಸರು.

ಗೋಕಾಕ್‌ನ ಸಿದ್ದಪ್ಪ ಬಬಲಿ ಹಾಗೂ ಮಕ್ಕಳಾದ ಕೃಷ್ಣಾ, ಅರ್ಜುನ್ ಬಂಧಿಸಲಾಗಿತ್ತು.ಜಾಮೀನಿನ ಮೇಲೆ ಹೊರ ಬಂದ ಸಿದ್ದಪ್ಪನಿಂದ ಸಿಪಿಐ & ಸಿಬ್ಬಂದಿ ವಿರುದ್ಧ ಗಂಭೀರ ಆರೋಪ

ಕೊಲೆ ಕೇಸ್‌ನಲ್ಲಿ ತಮ್ಮದೇನೂ ತಪ್ಪಿಲ್ಲದಿದ್ದರೂ ಬಂಧಿಸಿದ್ದಾರೆಂದು ಆರೋಪ ಅಲ್ಲದೇ ಹಂತ ಹಂತವಾಗಿ ತಮ್ಮ ಬಳಿ 15 ಲಕ್ಷ ಹಣ ವಸೂಲಿ ಮಾಡಿದ ಆರೋಪ

ಈ ಸಂಬಂಧ ಲೋಕಾಯುಕ್ತ, ರಾಜ್ಯ ಮಹಿಳಾ ಆಯೋಗಕ್ಕೂ ದೂರು ಆರೋಪಿ ಸಿದ್ದಪ್ಪ ಪತ್ನಿ ಕಲ್ಲವ್ವ & ಕುಟುಂಬಸ್ಥರಿಂದ ದೂರು

ಕೊಲೆಯಾದ ಮಂಜುನಾಥ ಸಿದ್ದಪ್ಪನ ಮೊಮ್ಮಗಳನ್ನ‌ ಪ್ರೀತಿಸುತ್ತಿದ್ದನಂತೆ ಆಕೆಯ ಮದುವೆಯಾದ ಬಳಿಕವೂ ಸಂಪರ್ಕದಲ್ಲಿದ್ದರಿಂದ ಕೊಲೆ ಆರೋಪ.

ಸಿದ್ದಪ್ಪ, ಮಕ್ಕಳಾದ ಕೃಷ್ಣ, ಅರ್ಜುನ ಸೇರಿ ಕೊಲೆ ಆರೋಪ.ಆದ್ರೆ ತಾವು ಕೊಲೆ ಮಾಡಿಲ್ಲ ಪೊಲೀಸರು ಹೊಡಿ ಬಡಿ ಮಾಡಿ ನಮ್ಮನ್ನು ಒಪ್ಪಿಸಿದ್ದಾರೆಂದು ಪೊಲೀಸರ ಮೇಲೆ ಆರೋಪ

ನನಗೂ ಹಾಗೂ ಕೊಲೆಯಾದ ಮಂಜುನಾಥನಿಗೂ ಸಂಬಂಧವೇ ಇಲ್ಲ‌ ಎಂದಿದ್ದ ಸಿದ್ದಪ್ಪನ ಮೊಮ್ಮಗಳು.ಇತ್ತ ಸಿದ್ದಪ್ಪನ ಮೊಮ್ಮಗಳ ಹೇಳಿಕೆ ವಿರುದ್ದ ಫೋಟೊ ರಿಲೀಸ್ ಮಾಡಿದ ಮಂಜುನಾಥ ಕುಟುಂಬಸ್ಥರು.ಕೊಲೆಯಾದ ಮಂಜು ಹಾಗೂ ಸಿದ್ದಪ್ಪನ ಮೊಮ್ಮಗಳು ಏಕಾಂತದ ಕ್ಷಣಗಳ ಫೋಟೊ ರಿಲೀಸ್

ಗೋಕಾಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಟ್ಟ ಕೊಲೆಯಾದ ಮಂಜುನಾಥ ಕುಟುಂಬಸ್ಥರು.ಪೊಲೀಸರು ಸರಿಯಾಗಿ ತನಿಖೆ ನಡೆಸಿಯೇ ಆರೋಪಿಗಳ ಬಂಧಿಸಿದ್ದಾರೆ ಎಂದ ಮಂಜುನಾಥ ಕುಟುಂಬಸ್ಥರು.

ಕೊಲೆ‌ ನಡೆದು 9 ತಿಂಗಳ‌ ಬಳಿಕ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಬಬಲಿ ಕುಟುಂಬಸ್ಥರು.ಸಿಎಂ, ಗೃಹಸಚಿವರಿಗೂ ಪತ್ರ ಬರೆದು ಸೂಕ್ತ ತನಿಖೆಗೆ ಮನವಿ ಮಾಡಿರುವ ಬಬಲಿ ಕುಟುಂಬಸ್ಥರು.

ಕುಟುಂಬಸ್ಥರ ಆರೋಪ ಬಗ್ಗೆ ತನಿಖೆಗೆ ಆದೇಶಿಸಿರುವ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿಬೆಳಗಾವಿ ಎಎಸ್‌ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಮುಂದುವರಿದಿರುವ ತನಿಖೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕುರಿಗಾಯಿಗಳ ಮೇಲೆ ಚಿರತೆ ದಾಳಿ!

Tue Apr 26 , 2022
ಚಿರತೆ ದಾಳಿಯಿಂದ ಕುರಿ ಕಾಯುತ್ತಿದ್ದ ಇಬ್ಬರಿಗೆ ಗಂಭೀರ ಗಾಯ. ಕುರಿಗಾಯಿ ಮಹಿಳೆಗೆ ಬಸಮ್ಮ ಹಾಗೂ ದುರ್ಗೇಶ ಎನ್ನುವವರಿಗೆ ಗಂಭೀರ ಗಾಯ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸುಂಕದಕಲ್ಲು ಅರಣ್ಯ ಪ್ರದೇಶದಲ್ಲಿ ಘಟನೆ ಗಾಯಾಳುಗಳು ದಾವಣಗೆರೆಯ ಜಗಳೂರು ಆಸ್ಪತ್ರೆಗೆ ದಾಖಲು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial