ಜಿಯೋ ಟೆಲಿಕಾಂನ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ಪೂರ್ಣ ಮಾಹಿತಿ ಇಲ್ಲಿದೆ!

ದೇಶದ ಟೆಲಿಕಾಂ ಸಂಸ್ಥೆಗಳು ಪ್ರೀಪೇಯ್ಡ್‌ ಯೋಜನೆಗಳಂತೆ ಸದ್ಯ ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿಯೂ ಆಕರ್ಷಕ ಪ್ರಯೋಜನಗಳನ್ನು ನೀಡುತ್ತ ಮುನ್ನಡೆದಿವೆ. ಈ ನಿಟ್ಟಿನಲ್ಲಿ ರಿಲಾಯನ್ಸ್‌ ಜಿಯೋ ಟೆಲಿಕಾಂ ಭಿನ್ನ ಬೆಲೆಯಲ್ಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ನೀಡಿದೆ.

ಆ ಪೈಕಿ ಅಗ್ಗದ ಜಿಯೋ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಆಕರ್ಷಕ ಪ್ರಯೋಜನಗಳಿಂದ ಗಮನ ಸೆಳೆದಿದೆ.

ಹೌದು, ಜಿಯೋ ಟೆಲಿಕಾಂನ 399ರೂ. ಯೋಜನೆಯು ಆರಂಭಿಕ ಪೋಸ್ಟ್‌ಪೇಯ್ಡ್‌ ಯೋಜನೆ ಆಗಿ ಗುರುತಿಸಿಕೊಂಡಿದೆ. ಇನ್ನು ಈ ಯೋಜನೆಯು ಅನಿಯಮಿತ ಡೇಟಾ ಪ್ರಯೋಜನದ ಜೊತೆಗೆ ಓಟಿಟಿ ಚಂದಾದಾರಿಕೆಯನ್ನು ಒಳಗೊಂಡಿದೆ. ಹಾಗೆಯೇ ಡೇಟಾ ರೋಲ್‌ ಓವರ್‌ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯ ವನ್ನು ಪಡೆದಿದೆ. ಹಾಗಾದರೇ ಜಿಯೋ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನಿನ ಪ್ರಯೋಜನಗಳೆನು ಹಾಗೂ ಇತರೆ ಪೋಸ್ಟ್‌ಪೇಯ್ಡ್‌ ಯೋಜನೆಗಳ ಪ್ರಯೋಜನಗಳ ಬಗ್ಗೆ ಮಾಹಿತಿ ಯನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ಜಿಯೋ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಬಳಕೆದಾರರಿಗೆ 75 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯದ ಸಿಗಲಿದೆ. ಜೊತೆಗೆ SMS ಕಳುಹಿಸುವ ಅವಕಾಶವು ದೊರೆಯಲಿದೆ. ಇದರೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸೇರಿದಂತೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್‌ ಕಾಲರ್‌ ಟ್ಯೂನ್‌ ಸೌಲಭ್ಯ ಗಳು ಲಭ್ಯವಾಗಲಿವೆ.

ಜಿಯೋ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ಜಿಯೋ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಬಳಕೆದಾರರಿಗೆ 100 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯದ ಸಿಗಲಿದೆ. ಜೊತೆಗೆ ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಕಳುಹಿಸುವ ಅವಕಾಶವು ದೊರೆಯಲಿದೆ. ಇದರೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಹಾಗೆಯೇ ಫ್ಯಾಮಿಲಿ ಪ್ಲ್ಯಾನ್ ಹೆಚ್ಚುವರಿ ಒಂದು ಸಿಮ್ ಲಭ್ಯ ಆಗಲಿದೆ. ಉಳಿದಂತೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಓಟಿಟಿ ಸೇರಿದಂತೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್‌ ಕಾಲರ್‌ ಟ್ಯೂನ್‌ ಸೌಲಭ್ಯ ಗಳು ಲಭ್ಯವಾಗಲಿವೆ.

ಜಿಯೋ 799ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು

ಜಿಯೋ 799ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಬಳಕೆದಾರರಿಗೆ 150 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯದ ಸಿಗಲಿದೆ. ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಕಳುಹಿಸುವ ಅವಕಾಶವು ದೊರೆಯಲಿದೆ. ಇದರೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಹಾಗೆಯೇ ಫ್ಯಾಮಿಲಿ ಪ್ಲ್ಯಾನ್ ಹೆಚ್ಚುವರಿ 2 ಸಿಮ್ ಲಭ್ಯ ಆಗಲಿದೆ. ಉಳಿದಂತೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಓಟಿಟಿ ಸೇರಿದಂತೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್‌ ಕಾಲರ್‌ ಟ್ಯೂನ್‌ ಸೌಲಭ್ಯಗಳು ಲಭ್ಯವಾಗಲಿವೆ.

ಪೋಸ್ಟ್‌ಪೇಯ್ಡ್ ಪ್ಲ್ಯಾನ್ – ಓಟಿಟಿ ಚಂದಾದಾರಿಕೆ

ಜಿಯೋ ಟೆಲಿಕಾಂನ ಈ ಫೋಸ್ಟ್‌ಪೇಯ್ಡ್‌ ಯೋಜನೆಗಳು ಒಟಿಟಿ ಚಂದಾದಾರಿಕೆಗಳ ಪ್ರಯೋಜನ ಸಹ ಹೊಂದಿವೆ. ಬಳಕೆದಾರರು ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಓಟಿಟಿ ಸೇರಿದಂತೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಸೌಲಭ್ಯ ಪಡೆಯುತ್ತಾರೆ. ಹಾಗೆಯೇ ಅಮೆಜಾನ್ ಪ್ರೈಮ್ ವಿಡಿಯೋ (Amazon Prime) ಚಂದಾದಾರಿಕೆಯು 1 ವರ್ಷಕ್ಕೆ ಮಾನ್ಯವಾಗಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೇಮ್‌ ಪ್ರಿಯರಿಗೆ ಗುಡ್‌ನ್ಯೂಸ್: ಒನ್‌ಪ್ಲಸ್‌ ಟಿವಿಯಲ್ಲಿ ಜಿಯೋ ಗೇಮ್ಸ್‌ ಆಡಬಹುದು!

Wed Mar 2 , 2022
ಒನ್‌ಪ್ಲಸ್‌ನೊಂದಿಗೆ ಕೈ ಜೋಡಿಸಿರುವ ಜಿಯೋ ತನ್ನ ಬಳಕೆದಾರರಿಗೆ ಮತ್ತೊಮ್ಮೆ ಹೊಸ ಮಾದರಿಯ ಅನುಭವನ್ನು ನೀಡಲು ಮುಂದಾಗಿದೆ. ಈ ಬಾರಿ ಜಿಯೋ ಗೇಮ್ಸ್ ಸಹಯೋಗದಲ್ಲಿ ಒನ್ ಪ್ಲಸ್ ಟಿವಿಗಳಲ್ಲಿ ಕ್ಯುರೇಟೆಡ್ ಗೇಮ್ ನ ಲೈಬ್ರರಿಯನ್ನು ಪರಿಚಯಿಸುತ್ತಿದೆ. ಇದು ಹೊಸ ಮಾದರಿಯ ಗೇಮಿಂಗ್ ಅನುಭವನ್ನು ನೀಡಲಿದ್ದು, ಭಾರತೀಯ ಸ್ಮಾರ್ಟ್ ಟಿವಿ ಉದ್ಯಮದಲ್ಲಿ ಇದು ಮೊಟ್ಟ-ಮೊದಲ ಗೇಮಿಂಗ್-ನೇತೃತ್ವದ ಪಾಲುದಾರಿಕೆ ಇದಾಗಲಿದೆ.ತನ್ನ ಹೊಸ ಮಾದರಿಯ ತಂತ್ರಜ್ಞಾನದ ಮೂಲಕ ಜಾಗತಿಕ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಒನ್ ಪ್ಲಸ್ […]

Advertisement

Wordpress Social Share Plugin powered by Ultimatelysocial