‘ಕೈ’ ನಾಯಕರ ವಿರುದ್ಧ ಕಿಡಿಕಾರಿದ ಕೃಷಿ ಸಚಿವ..!

ಆ್ಯಂಕರ್ – ಸಿದ್ದರಾಮಯ್ಯ ಅವರಿಗೆ ಈ ಸರಕಾರ ಬೇಗ ರಾಜೀನಾಮೆ ಕೊಡಬೇಕು.ತಾವು ಸಿಎಂ ಆಗಬೇಕು ಅನ್ನೋ ಆಸೆಯಲ್ಲಿದ್ದಾರೆ.ಇದಕ್ಕಿಂತಲೂ ಹೆಚ್ಚಿನ ಹಂಬಲ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗಿದೆ
ಅಂತಾ ಕೃಷಿ ಸಚಿವ ಬಿ‌.ಸಿ.ಪಾಟೀಲ ಅವರು ಹೇಳಿದರು.‌ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಮಾತನಾಡಿದ ಅವರು,ಪಿಎಸ್ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಸರಕಾರ ಸಚಿವ ಅಶ್ವತ್ಥನಾರಾಯಣ ರಾಜೀನಾಮೆ ನೀಡಬೇಕು ಅಂತಾ ಹೇಳ್ತರೆ.ಎಲ್ಲದಕ್ಕೂ ರಾಜೀನಾಮೆ ಕೊಡಬೇಕು ಅಂತಾ ಹೇಳಿದರೆ ಹೇಗೆ..? ಈ ಹಿಂದೆ ಕೆ.ಜೆ.ಜಾರ್ಜ್ ಪ್ರಕರಣ ಆದಾಗ‌ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟಿದ್ರಾ.? ಸಚಿವ ಅಶ್ವತ್ಥನಾರಾಯಣ ಸಂಬಂಧಿಕರು ಯಾರೋ ಮಾಡಿದರು ಅಂತಾ ಅಶ್ವತ್ಥನಾರಾಯಣ ಹೊಣೆ ಮಾಡುವುದು ಸರಿಯಲ್ಲ ಎಂದು ‘ಕೈ’ ನಾಯಕರಿಗೆ ಟಾಂಗ್ ನೀಡಿದರು. ಇನ್ನು ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಎಂಬುದಿಲ್ಲ. ಅಮೀತ್ ಷಾ ಅವರು ಬಂದಾಗ ಸಿಎಂ ಬದಲಾವಣೆ ಕೂಗಿಲ್ಲ ಅಂತಾ ಹೇಳಿ ಹೋಗಿದ್ದಾರೆ. ಸಿಎಂ ಬದಲಾವಣೆ ಇಲ್ಲ ಅಂತಾ ಈಗಾಗಲೆ ಅರುಣಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.ಅದರ ಬಗ್ಗೆ ನಿಮಗ್ಯಾಕೆ ಅಷ್ಟು ಆಸಕ್ತಿ ಇದೆ.?ಬದಲಾವಣೆ ಇದ್ದರೆ ನಮಗೆ ಕರೆದು ಹೇಳುತ್ತಾರೆ. ದಿನವೂ ಸಿಎಂ ಬದಲಾವಣೆ, ಮಂತ್ರಿಮಂಡಲ ಬದಲಾವಣೆ ಅಂತಾ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಆಡಳಿತ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಬಿಸಿ ಪಾಟೀಲ್ ಕಿಡಿಕಾರಿದರು.

ಇನ್ನು ಶಾಸಕ ಯತ್ನಾಳ ಹೇಳ್ತಾರೆ ಸಿಎಂ ಬದಲಾಣೆ ಅಂತಾ ಅವರೇನು ಪಕ್ಷದ ಹೈಕಮಾಂಡಾ..ಯತ್ನಾಳ ಅವರು ಹಾಗೂ ಅಮೀತ್ ಷಾ ಲೆವೆಲ್ ಇದ್ದಾರಾ…? ಅವೀತ್ ಷಾ ಅವರು,ಅರುಣ ಸಿಂಗ್ ಅವರು ಹೇಳಿದರೆ ಅದಕ್ಕೊಂದು ಬೆಲೆ ಇದೆ.ಯತ್ನಾಳರಿಗೇನಾದ್ರೂ ಫೋನ್ ಮಾಡಿ ಹೇಳಿದ್ದಾರೋ ಗೊತ್ತಿಲ್ಲ ಅಂತಾ ಶಾಸಕ ಯತ್ನಾಳಗೆ ಪರೋಕ್ಷವಾಗಿ ಕೃಷಿ ಸಚಿವ ಬಿಸಿ ಪಾಟೀಲ್ ಟಾಂಗ್ ನೀಡಿದರು.ಇನ್ನು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು,ನಾಲ್ಕೈದು ಸಚಿವ ಸ್ಥಾನಗಳು ಖಾಲಿ ಇವೆ.ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು.ಯಾವಾಗ ವಿಸ್ತರಣೆ ಮಾಡುತ್ತಾರೋ ಅದು ಅವರ ಪರಮಾಧಿಕಾರ ಅಂತಾ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಯಲ್ಲಿ ಭಿನ್ನಮತ

Fri May 6 , 2022
ಆಂಕರ್: ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಕೋಲಾರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವ ಮುನಿರತ್ನ ವಿರುದ್ಧ ಮಾಲೂರು ಬಿಜೆಪಿ ಮುಖಂಡರು ತಿರುಗಿಬಿದ್ದಿದ್ದಾರೆ. ಸಂಸದ ಮುನಿಸ್ವಾಮಿ ಹಾಗೂ ಸಚಿವ ಮುನಿರತ್ನ ಕಾರ್ಯವೈಕರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಂಸದರು, ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ಮುಖಂಡರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಸಾಬೀತಾಗಿದೆ. ಮಾಲೂರು ವಿಧಾನಸಭ ಕ್ಷೇತ್ರದ ಬಿಜೆಪಿ ಮುಖಂಡರು […]

Advertisement

Wordpress Social Share Plugin powered by Ultimatelysocial