ರಾಜ್ಯದ ‘ಯಾವ ಇಲಾಖೆ’ಯಲ್ಲಿ ‘ಎಷ್ಟು ಹುದ್ದೆ ಖಾಲಿ’ ಇವೆ ಗೊತ್ತಾ?

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಎನ್ನುವಂತೆ ಸರ್ಕಾರದಿಂದ 7ನೇ ವೇತನ ಆಯೋಗ ರಚಿಸಲಾಗಿತ್ತು. ಅಲ್ಲದೇ ಆಯೋಗಕ್ಕೆ ಬೇಕಿದ್ದಂತ ಅಧಿಕಾರಿಗಳನ್ನು ನೇಮಕ ಮಾಡಿತ್ತು. ಈ ಬೆನ್ನಲ್ಲೇ ರಾಜ್ಯದ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಮಂಜೂರಾಗಿದ್ದು, ಕಾರ್ಯ ನಿರ್ವಹಿಸುತ್ತಿರುವವರು ಎಷ್ಟು ಹಾಗೂ ಖಾಲಿ ಇರುವಂತ ಹುದ್ದೆಗಳು ಎಷ್ಟು ಎನ್ನುವ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.

ಈ ಬಗ್ಗೆ ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯ ಪತ್ರವನ್ನು ಪ್ರಕಟಿಸಲಾಗಿದ್ದು, ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು, ಹೊಸ ವೇತನ ರಚನೆಯನ್ನು ಶಿಫಾರಸ್ಸು ಮಾಡಲು 7ನೇ ರಾಜ್ಯ ವೇತನ ಆಯೋಗ ರಚಿಸಲಾಗಿದೆ ಎಂದು ತಿಳಿಸಿದೆ.

ಸರ್ಕಾರ ರಚಿಸಿರುವಂತ ವೇತನ ಆಯೋಗವು ನೌಕರರ ನಿವೃತ್ತಿ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಸೌಲಭ್ಯ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆಯೂ ಅವಶ್ಯವಿರುವ ಬದಲಾವಣೆಗಳ ಕುರಿತು ಸಹ ಶಿಫಾರಸ್ಸು ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.

ಇದೇ ವಿಶೇಷ ರಾಜ್ಯಪತ್ರದಲ್ಲಿ 2022-23ರ ಬಜೆಟ್ ಅಂದಾಜುಗಳ ಪ್ರಕಾರ ಈ ಕೆಳಕಂಡಂತೆ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಎಷ್ಟು ಎಂಬುದಾಗಿ ತಿಳಿಸಿದೆ.

ಹೀಗಿವೆ ಇಲಾಖಾವಾರು ಖಾಲಿ ಹುದ್ದೆಗಳ ವಿವರ

  • ಕೃಷಿ ಇಲಾಖೆ – 6,316 ಹುದ್ದೆಗಳು ಖಾಲಿ ಇವೆ
  • ಪಶು ಸಂಗೋಪನೆ ಇಲಾಖೆ – 9,972
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – 8,063
  • ಸಹಕಾರ ಇಲಾಖೆ – 4,738
  • ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ – 5,738 ಹುದ್ದೆ
  • ಇ- ಆಡಳಿತ ಇಲಾಖೆ – 75 ಹುದ್ದೆ
  • ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ – 4 ಹುದ್ದೆ
  • ಇಂಧನ ಇಲಾಖೆ – 245 ಹುದ್ದೆ
  • ಆರ್ಥಿಕ ಇಲಾಖೆ – 8,779 ಹುದ್ದೆ
  • ಮೀನುಗಾರಿಕೆ ಇಲಾಖೆ – 777 ಹುದ್ದೆ
  • ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ – 1,187 ಹುದ್ದೆ
  • ಅರಣ್ಯ ಇಲಾಖೆ – 4,562 ಹುದ್ದೆ
  • ಕೈಮಗ್ಗ ಮತ್ತು ಜವಳಿ ಇಲಾಖೆ – 39 ಹುದ್ದೆ
  • ಉನ್ನತ ಶಿಕ್ಷಣ ಇಲಾಖೆ – 12,674 ಹುದ್ದೆ
  • ಒಳಾಡಳಿತ ಇಲಾಖೆ – 23,557 ಹುದ್ದೆ
  • ತೋಟಗಾರಿಕೆ ಇಲಾಖೆ – 3,092
  • ಮಾಹಿತಿ ಇಲಾಖೆ – 319 ಹುದ್ದೆ
  • ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ – 60 ಹುದ್ದೆ
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ – 423 ಹುದ್ದೆ
  • ಕಾರ್ಮಿಕ ಇಲಾಖೆ – 2,500
  • ಕಾನೂನು ಇಲಾಖೆ-8,370
  • ಪ್ರಮುಖ ಮತ್ತು ಮಧ್ಯಮ ಕೈಗಾರಿಕೆಗಳು – 353 ಹುದ್ದೆ
  • ನೀರಾವರಿ ಇಲಾಖೆ – 500 ಹುದ್ದೆ
  • ಗಣಿಗಾರಿಕೆ ಇಲಾಖೆ – 677
  • ಸಣ್ಣ ನೀರಾವರಿ ಇಲಾಖೆ – 1,095
  • ಅಲ್ಪ ಸಂಖ್ಯಾಂತರ ಕಲ್ಯಾಣ ಇಲಾಖೆ – 3,633 ಹುದ್ದೆ ಖಾಲಿ ಇವೆ
  • ಸಂಸದೀಯ ವ್ಯವಹಾರಗಳ ಇಲಾಖೆ – 435 ಹುದ್ದೆಗಳು ಖಾಲಿ
  • ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ – 1,282 ಹುದ್ದೆ
  • ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ – 66,059 ಹುದ್ದೆ
  • ಲೋಕೋಪಯೋಗಿ ಇಲಾಖೆ – 2,063
  • ಕಂದಾಯ ಇಲಾಖೆ – 10,621 ಹುದ್ದೆ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 10,409 ಹುದ್ದೆ
  • ಸಮಾಜ ಕಲ್ಯಾಣ ಇಲಾಖೆ – 9,592 ಹುದ್ದೆ
  • ಪರಿಶಿಷ್ಟ ಪಂಗಡ ಕಲ್ಯಾಣ – 2,318 ಹುದ್ದೆ
  • ರೇಷ್ಮೆ ಇಲಾಖೆ – 2,802
  • ಕೌಶಲ್ಯಾಭಿವೃದ್ಧಿ ಇಲಾಖೆ – 4,216
  • ಸಣ್ಣ ಪ್ರಮಾಣದ ಕೈಗಾರಿಕೆಗಳು – 356
  • ಪ್ರವಾಸೋದ್ಯಮ ಇಲಾಖೆ – 286
  • ಸಾರಿಗೆ ಇಲಾಖೆ – 1,602
  • ನಗರಾಭಿವೃದ್ಧಿ ಇಲಾಖೆ -839
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ – 3,230
  • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ -207
  • ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ – 34,644 ಹುದ್ದೆಗಳು ಖಾಲಿ ಇವೆ.

ಒಟ್ಟಾರೆಯಾಗಿ ರಾಜ್ಯದ 43 ಇಲಾಖೆಗಳಲ್ಲಿ ಈಗ 7,69,981 ಹುದ್ದೆಗಳು ಮಂಜೂರಾಗಿದ್ದರೇ, ಈಗ ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳ ಒಟ್ಟು ಸಂಖ್ಯೆ 5,11,272 ಆಗಿದೆ. ಆದ್ರೇ 2,58,709 ಹುದ್ದೆಗಳು ಈಗ ಖಾಲಿಯಿದ್ದಾವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಷೇಧಿತ ಮಾದಕವಸ್ತು ಗಳ ಮಾರಾಟ‌ ಮಾಡುತ್ತಿದ್ದ ಆರೋಪಿಗಳ ಬಂಧನ.

Wed Jan 18 , 2023
ವಿದ್ಯಾರಣ್ಯಪುರ ಪೊಲೀಸರ ಕಾರ್ಯಾಚರಣೆ ನಿಷೇಧಿತ ಮಾದಕವಸ್ತು ಗಳ ಮಾರಾಟ‌ ಮಾಡುತ್ತಿದ್ದ ಆರೋಪಿಗಳ ಬಂಧನ ಬಂಧಿತರಿಂದ 9 ಲಕ್ಷ ಮೌಲ್ಯದ ಮಾದಕ ವಸ್ತುಗಳು ಜಪ್ತಿ ಶೇಕ್ ಅಲಿ, ಶೇಕ್ ಸಲ್ಮಾನ್, ಮುಜಾಮಿಲ್ ಪಾಶಾ, ವಿನೋದ್ ಕುಮಾರ್ ಬಂಧಿತ ಆರೋಪಿಗಳು 2 ಕೆ.ಜಿ 308 ಗ್ರಾಂ ಗಾಂಜಾ 56 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್ , 2 ಲಕ್ಷ 39 ಸಾವಿರ ನಗದು 2 ಮೊಬೈಲ್ 2 ದ್ವಿಚಕ್ರ ವಾಹನ ವಶಕ್ಕೆ ಕಡಿಮೆ ಸಮಯದಲ್ಲಿ […]

Advertisement

Wordpress Social Share Plugin powered by Ultimatelysocial