ಉದ್ಯೋಗಾಕಾಂಕ್ಷಿಗಳೇ ನೇಮಗೆ ಸೇಹಿ ಸುದ್ದಿ: ಸೇನಾ ಶಾಲೆಗಳಲ್ಲಿ 8,700 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ..!

ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಸಿಹಿಸುದ್ದಿಯೊಂದು ಸಿಕ್ಕಿದ್ದು, ಬಿ.ಎಡ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಟಿಜಿಟಿ , ಪಿಜಿಟಿ  ಮತ್ತು ಪಿಆರ್ ಟಿ   ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಯನ್ನು ಬಿಡುಗಡೆ ಮಾಡಲಾಗಿದೇ, ದೇಶದ ವಿವಿಧ ಮಿಲಿಟರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಬೇಕಾಗಿ

ಸೇನಾ ಕಲ್ಯಾಣ ಶಿಕ್ಷಣ ಸೊಸೈಟಿಯಿಂದ ಒಟ್ಟು 8,700 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು

ಅರ್ಜಿ ಸಲ್ಲಿಸುವ  ದಿನಾಂಕ – 07 ಜನವರಿ 2022

ಆನ್ಲೈನ್ ಅರ್ಜಿಸಲ್ಲಿಸುವ ಕೊನೆಯ ದಿನಾಂಕ – 28 ಜನವರಿ 2022

ಪ್ರವೇಶ ಕಾರ್ಡ್ ವಿತರಣೆಯ  ದಿನಾಂಕ – 10 ಫೆಬ್ರವರಿ 2022

ಆನ್ ಲೈನ್ ಸ್ಕ್ರೀನಿಂಗ್ ಪರೀಕ್ಷೆ ದಿನಾಂಕ -19, 20 ಫೆಬ್ರವರಿ 2022

ಅರ್ಹತಾ ಪರೀಕ್ಷೆಯ ಘೋಷಣೆಯ ದಿನಾಂಕ – 28 ಫೆಬ್ರವರಿ 2022

ಪಿಜಿಟಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 50% ಅಂಕಗಳೊಂದಿಗೆ ಬಿ.ಎಡ್ ಪದವಿ  ಹೊಂದಿರಬೇಕು. ಹಾಗು  ಅರ್ಜಿದಾರರು ಸ್ನಾತಕೋತ್ತರ ಪದವಿಯನ್ನು ಕೊಡ ಹೊಂದಿರಬೇಕು. ಟಿಜಿಟಿ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ನೋಂದಾಯಿತ ಕಾಲೇಜುಗಳಲ್ಲಿ 50% ಅಂಕಗಳೊಂದಿಗೆ ಬಿ.ಎಡ್ ಪದವಿಯನ್ನು ಹೊಂದಿರಬೇಕು. ಅರ್ಜಿದಾರರು ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು.

ಪಿಆರ್ ಟಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 50% ಅಂಕಗಳೊಂದಿಗೆ ಅಥವಾ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು. ಫ್ರೆಶರ್ ಗಳಿಗೆ ವಯಸ್ಸಿನ ಮಿತಿ 40 ವರ್ಷಕ್ಕಿಂತ ಕಡಿಮೆ ಇರಬೇಕು. ಮತ್ತು ಬೋಧನಾ ಅನುಭವಹೊಂದಿರುವ ಅರ್ಜಿದಾರರಗರಿಷ್ಠ ವಯಸ್ಸಿನ ಮಿತಿಯು 57 ವರ್ಷದೊಳಗೆ ಇರಬೇಕು

ಆಯ್ಕೆ ಪ್ರಕ್ರಿಯೆ

ಆನ್ ಲೈನ್ ಸ್ಕ್ರೀನಿಂಗ್ ಪರೀಕ್ಷೆಯ ನಂತರ ಅರ್ಜಿದಾರರನ್ನು ಸಂದರ್ಶಿಸಲಾಗುವುದು. ಬಳಿಕ  ಬೋಧನಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವರು. ಪ್ರಯಾಗ್ ರಾಜ್, ಕಾನ್ಪುರ, ಆಗ್ರಾ, ವಾರಣಾಸಿ, ಗೋರಖ್ ಪುರ, ಲಕ್ನೋ, ಮೀರತ್, ಬರೇಲಿ, ನೋಯ್ಡಾ, ದೆಹಲಿ, ಝಾನ್ಸಿ, ಡೆಹ್ರಾಡೂನ್, ಜೈಪುರ, ಜಬಲ್ಪುರ್ ಮತ್ತು ಭೋಪಾಲ್ ನಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಭಾರತೀಯ ಪ್ರಜೆಗಳಾಗಿರಬೇಕು.

ಈ ಶಾಲೆಗಳಲ್ಲಿ ಒಟ್ಟು 8,700 ಶಿಕ್ಷಕರು ಉದ್ಯೋಗ ಪಡೆಯುವರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ Apple ಈವೆಂಟ್ ಯಾವಾಗ? AirPods Pro 2, iPhone SE 3 2022 ರಲ್ಲಿ ಬರಬಹುದು;

Mon Jan 10 , 2022
iPhone 13 ಲೈನ್‌ಅಪ್, Apple Watch 7 ಮತ್ತು ಅಪ್‌ಗ್ರೇಡ್ ಮಾಡಿದ MacBook Pro ಲ್ಯಾಪ್‌ಟಾಪ್‌ಗಳು ಆಪಲ್ 2021 ರಲ್ಲಿ ಪ್ರದರ್ಶಿಸಿದ ಹಲವಾರು ಉತ್ಪನ್ನಗಳಾಗಿವೆ. ಆದರೆ ನಾವು ಹೊಸ ವರ್ಷವನ್ನು ಸಮೀಪಿಸುತ್ತಿದ್ದಂತೆ, 2022 ಕ್ಕೆ ಟೆಕ್ ದೈತ್ಯ ಏನು ಸಂಗ್ರಹಿಸಿದೆ ಮತ್ತು ಮುಂದಿನ ಈವೆಂಟ್ ಯಾವಾಗ ನಡೆಯಲಿದೆ ಎಂಬ ವದಂತಿಗಳು ಗುಣಿಸುವುದನ್ನು ಮುಂದುವರಿಸಬೇಕು. Macrumors ವರದಿ ಮಾಡಿದ ತನ್ನ ಇತ್ತೀಚಿನ ಹೂಡಿಕೆದಾರರ ಟಿಪ್ಪಣಿಯಲ್ಲಿ, ವಿಶ್ಲೇಷಕ ಮಿಂಗ್-ಚಿ ಕುವೊ 2022 ರಲ್ಲಿ […]

Advertisement

Wordpress Social Share Plugin powered by Ultimatelysocial