ಉಕ್ರೇನ್ ನೆರವಿಗೆ ಅಮೆರಿಕದಿಂದ 40 ಶತಕೋಟಿ ಡಾಲರ್!

 

ವಾಷಿಂಗ್ಟನ್ , ಮೇ 11 – ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ವಿನಂತಿಯನ್ನು ಮನ್ನಿಸಿ ಉಭಯಪಕ್ಷೀಯ (ಡೆಮೋಕ್ರಾಟ್ ಮತ್ತು ರಿಪಬ್ಲಿಕನ್) ಸೆನೆಟರ್‍ಗಳು ಒಗ್ಗಟಿನ ಒಪ್ಪಿಗೆಯ ಮೂಲಕ ಸದನವು ಉಕ್ರೇನ್ ನೆರವಿಗೆ 40 ಶತಕೋಟಿ ಡಾಲರ್ ಪ್ಯಾಕೇಜ್ ಅನುಮೋದಿಸಿತು.

ಸಂಸತ್ತಿನಲ್ಲಿ ನಡೆದ ಚರ್ಚೆ ನಮತರ ಸಂಸದರ ಮತದಾನದಲ್ಲಿ 368-57 ಅಂತರದಿಂದ ಅನುಮೋದನೆ ಪಡೆಯಿತು,ವಿಶೇಷ ಎಂದರೆ ಕೋರಿಕೆಗಿಂತ 7 ಶತಕೋಟಿ ಹೆಚ್ಚಿನದನ್ನು ನೆರವು ಒದಗಿಸುತ್ತದೆ.

ಈ ನೆರವನ್ನು ರಕ್ಷಣಾ ಮತ್ತು ಮಾನವೀಯ ಕಾರ್ಯಕ್ರಮಗಳಿಗೆ ಸಮವಾಗಿ ವಿಭಜಿಸಿತು. ಮೊದಲಿಗೆ ಉಕ್ರೇನ್‍ಗೆ ಮಿಲಿಟರಿ ಮತ್ತು ಆರ್ಥಿಕ ಸಹಾಯವನ್ನು ನೀಡುತ್ತದೆ, ನಂತರ ಮಿತ್ರರಾಷ್ಟ್ರಗಳಿಗೆ ಸಹಾಯ ನೀಡಲಾಗುತ್ತದೆ ಎಂದು ವಿಶ್ಲೇಶಿಸಲಾಗಿದೆ.ಯುದ್ದದಿಂದ ಉಂಟಾಗುವ ಜಾಗತಿಕ ಆಹಾರದ ಕೊರತೆಯನ್ನು ಪರಿಹರಿಸಲು 5 ಶತಕೋಟಿ ಡಾಲರ್ ಒದಗಿಸುತ್ತದೆ.

ಚೀನಾ, ಇರಾನ್ ಮತ್ತು ಉತ್ತರ ಕೊರಿಯಾ ನಮ್ಮ ಪ್ರತಿಕ್ರಿಯೆಯನ್ನು ವೀಕ್ಷಿಸುತ್ತಿರುವಂತೆ, ಅಮೆರಿಕವು ತನ್ನ ಮಿತ್ರರಾಷ್ಟ್ರಗಳೊಂದಿಗೆ ದೃಢವಾಗಿ ನಿಂತಿದೆ ಮತ್ತು ವಿದೇಶದಲ್ಲಿ ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವುದನ್ನು ನಾವು ಜಗತ್ತಿಗೆ ತೋರಿಸಬೇಕು ಎಂದು ಹಿರಿಯ ರಿಪಬ್ಲಿಕನ್ ಸೆನೆಟರ್‍ಟೆಕ್ಸಾಸ್‍ನ ರೆಪ್ ಕೇ ಗ್ರ್ಯಾಂಗರ್ ಡೊಡ್ಡ ಮೊತ್ತದ ಪ್ಯಾಕೇಜ್ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಶಾಂತ್ ನೀಲ್ ರನ್ನು ಟೀಸ್ ಮಾಡಿದ ರವೀನಾ!

Wed May 11 , 2022
  ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೋಟಿ ಕೋಟಿ ಬಾಚಿಕೊಂಡಿರುವ ಕೆಜಿಎಫ್-2 ಕಲೆಕ್ಷನ್ ಅಬ್ಬರ ಇನ್ನೂ ಮುಂದುವರೆದಿದೆ. ಭಾರತದ ಘಟಾನುಘಟಿ ಸ್ಟಾರ್‌ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಕೆಜಿಎಫ್-2 ಸದ್ಯ ಹಿಂದಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 2ನೇ ಸ್ಥಾನದಲ್ಲಿದೆ. ಆಮೀರ್ ಖಾನ್ ನಟನೆಯ ದಂಗಲ್, ಆರ್ ಆರ್ ಆರ್ […]

Advertisement

Wordpress Social Share Plugin powered by Ultimatelysocial