ಹೀರೋ ಆಗಿರುವುದು ಎಲ್ಲರಿಗೂ ಇಷ್ಟ. ಆದರೆ ಈಗ ಜಾನ್​ ಅಬ್ರಾಹಂ ವಿಲನ್​ ಆಗಿದ್ದಾರೆ.

ಹೀರೋ ಆಗಿರುವುದು ಎಲ್ಲರಿಗೂ ಇಷ್ಟ. ಆದರೆ ಈಗ ಜಾನ್​ ಅಬ್ರಾಹಂ ವಿಲನ್​ ಆಗಿದ್ದಾರೆ. ಯಾಕೆ ಹೀಗಾಯ್ತು ಎಂಬ ಬಗ್ಗೆ ಅವರು ಮಾತನಾಡಿದ್ದಾರೆ.ನಟ ಜಾನ್​ ಅಬ್ರಾಹಂ ಅವರು ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ಸುದ್ದಿ ಆಗಿದ್ದಾರೆ.

ದಕ್ಷಿಣದ ಸಿನಿಮಾಗಳ ಬಗ್ಗೆ, ಒಟಿಟಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅವರು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದ್ದರು. ಈಗ ಜಾನ್​ ಅಬ್ರಾಹಂ ನಟಿಸಿರುವ ಏಕ್​ ವಿಲನ್​ ರಿಟರ್ನ್ಸ್​​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಹಿಂದಿ ಸಿನಿಪ್ರಿಯರ ವಲಯದಲ್ಲಿ ಇದು ಸಖತ್​ ಸದ್ದು ಮಾಡುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಅವರು ವಿಲನ್​ ಪಾತ್ರ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ‘ನಾನು ಬಾಲಿವುಡ್​   ಹೀರೋ, ಪ್ರಾದೇಶಿಕ ಸಿನಿಮಾ ಮಾಡಲ್ಲ’ ಎಂದು ಜಂಭದಿಂದ ಮಾತನಾಡಿದ್ದ ಅವರು ಈಗ ವಿಲನ್​ ಪಾತ್ರಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಹೀರೋ ಪಟ್ಟದಿಂದ ಕೆಳಗಿಳಿದು ವಿಲನ್​ ಆಗಿದ್ದರ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈನಲ್ಲಿ ಅದ್ದೂರಿಯಾಗಿ ‘ಏಕ್​ ವಿಲನ್​ ರಿಟರ್ನ್ಸ್​’ ಸಿನಿಮಾದ ಟ್ರೇಲರ್​ ಲಾಂಚ್​ ಮಾಡಲಾಗಿದೆ. ಯೂಟ್ಯೂಬ್​ನಲ್ಲಿ ಈ ಟ್ರೇಲರ್​ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಅರ್ಜುನ್ ಕಪೂರ್​, ತಾರಾ ಸುತಾರಿಯಾ, ಜಾನ್​ ಅಬ್ರಾಹಂ, ದಿಶಾ ಪಟಾಣಿ ಮುಂತಾದವರು ನಟಿಸಿದ್ದಾರೆ. ಇದರಲ್ಲಿ ಜಾನ್ ಅಬ್ರಾಹಂ ಅವರಿಗೆ ನೆಗೆಟಿವ್​ ಪಾತ್ರ ಇದೆ. ಅದರ ಕುರಿತು ಅವರು ಟ್ರೇಲರ್​ ಲಾಂಚ್​ ವೇಳೆ ಮಾತನಾಡಿದ್ದಾರೆ.

‘ನನ್ನ ವೃತ್ತಿಜೀವನ ಆರಂಭ ಆಗಿದ್ದೇ ‘ಜಿಸ್ಮ್​’ ಸಿನಿಮಾದ ನೆಗೆಟಿವ್​ ರೋಲ್​ನಿಂದ. ಈಗ ಮತ್ತೆ ವಿಲನ್​ ಪಾತ್ರ ಮಾಡಿದ್ದಕ್ಕೆ ಖುಷಿ ಇದೆ. ಯಾವಾಗಲೂ ಹೀರೋ ಪಾತ್ರವನ್ನೇ ಮಾಡುವುದು ಬೋರಿಂಗ್​ ಎನಿಸುತ್ತದೆ. ಖಳನಟನಾಗಿ ಅಭಿನಯಿಸುವುದು ಕೂಡ ಒಳ್ಳೆಯದು’ ಎಂದು ಜಾನ್​ ಅಬ್ರಾಹಂ ಹೇಳಿದ್ದಾರೆ.

ಪ್ರಾದೇಶಿಕ ಚಿತ್ರಗಳ ಬಗ್ಗೆ ತಾತ್ಸಾರದ ಮಾತಾಡಿದ್ದ ಜಾನ್​:

ಬಾಲಿವುಡ್​ನ ಅನೇಕ ಹೀರೋಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಶೇಷ ಪಾತ್ರಗಳನ್ನು ಮಾಡುವುದು ಟ್ರೆಂಡ್​ ಆಗಿದೆ. ಆದರೆ ಈ ವಿಚಾರದಲ್ಲಿ ಜಾನ್​ ಅಬ್ರಾಹಂ ನಿಲುವು ಬೇರೆ. ‘ನಾನು ಬಾಲಿವುಡ್​ ಹೀರೋ. ಪ್ರಾದೇಶಿಕ ಸಿನಿಮಾಗಳನ್ನು ಮಾಡುವುದಿಲ್ಲ’ ಎಂದು ಅವರು ಹೇಳಿದ್ದರು. ಅದೇ ರೀತಿ, ಒಟಿಟಿ ಬಗ್ಗೆಯೂ ಅವರು ಹಗುರವಾಗಿ ಮಾತನಾಡಿದ್ದರು.

‘ನಾನು ಬಿಗ್​ ಸ್ಕ್ರೀನ್​ ಹೀರೋ. ಅಲ್ಲಿಯೇ ನಾನು ಕಾಣಿಸಿಕೊಳ್ಳಲು ಬಯಸುತ್ತೇನೆ. ಈ ಸಂದರ್ಭದಲ್ಲಿ ನಾನು ದೊಡ್ಡ ಪರದೆಗಾಗಿಯೇ ಸಿನಿಮಾಗಳನ್ನು ಮಾಡುತ್ತೇನೆ. ಟ್ಯಾಬ್ಲೆಟ್​ನಲ್ಲಿ ಯಾರಾದರೂ ನನ್ನ ಸಿನಿಮಾ ನೋಡುತ್ತಾ ಅರ್ಧಕ್ಕೆ ನಿಲ್ಲಿಸಿ ವಾಶ್​ರೂಮ್​ಗೆ ಹೋದರೆ ನನಗೆ ಅವಮಾನ ಆದಂತೆ ಅನಿಸುತ್ತದೆ. 299 ಅಥವಾ 499 ರೂಪಾಯಿಗೆ ಒಟಿಟಿಯಲ್ಲಿ ಲಭ್ಯವಾಗಲು ನನಗೆ ಇಷ್ಟವಿಲ್ಲ. ಅದರಲ್ಲಿ ನನಗೆ ಸಮಸ್ಯೆ ಇದೆ’ ಎಂದು ಜಾನ್​ ಅಬ್ರಾಹಂ ಹೇಳಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿವಾಹಕ್ಕೆ ಮುನ್ನವೇ ಆಲಿಯಾ ಭಟ್ ಗರ್ಭಿಣಿ ಆಗಿದ್ದರು

Fri Jul 1 , 2022
ನಟಿ ಆಲಿಯಾ ಭಟ್ ತಾಯಿಯಾಗುತ್ತಿದ್ದಾರೆ. ಎರಡು ತಿಂಗಳ ಹಿಂದಷ್ಟೆ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹವಾಗಿದ್ದರು. ಇದೀಗ ಇಬ್ಬರು ಪೋಷಕರಾಗುತ್ತಿದ್ದಾರೆ. ವಿವಾಹಕ್ಕೆ ಮುನ್ನವೇ ಆಲಿಯಾ ಭಟ್ ಗರ್ಭಿಣಿ ಆಗಿದ್ದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕೆಲವರಿಗಷ್ಟೆ ಗೊತ್ತಿದ್ದು, ಸುದ್ದಿಯನ್ನು ಬಹಳ ಗೌಪ್ಯವಾಗಿಡಲಾಗಿತ್ತು. ಆದರೆ ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರ ಈ ಬಗ್ಗೆ ಆಲಿಯಾ-ರಣ್ಬೀರ್ ವಿವಾಹಕ್ಕೆ ಮುಂಚೆಯೇ ಖಾತೆಯಲ್ಲಿ ಹಂಚಿಕೊಂಡಿದ್ದ. ಅದಕ್ಕೆ ಕಾರಣವನ್ನೂ ಆತ ನೀಡಿದ್ದ. ಫೇಸ್‌ಬುಕ್, ಟ್ವಿಟ್ಟರ್‌, ಇನ್‌ಸ್ಟಾಗ್ರಾಂನಂತೆ […]

Advertisement

Wordpress Social Share Plugin powered by Ultimatelysocial