ರಾಮಾಯಾಣ ಧಾರಾವಾಹಿಯ ರಾಮ ಪಾತ್ರಧಾರಿ ಅರುಣ್ ಬಿಜೆಪಿ ಸೇರ್ಪಡೆ

ನವದೆಹಲಿ: ಪ್ರಸಿದ್ಧ ರಾಮಾಯಾಣ ಧಾರಾವಾಹಿ ಖ್ಯಾತಿಯ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಅರುಣ್ ಗೋವಿಲ್ ಬಿಜೆಪಿ ಸೇರ್ಪಡೆಯಾದರು. ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದಲ್ಲಿ ಅರುಣ್ ಗೋವಿಲ್ ಕಮಲ ಧ್ವಜ ಹಿಡಿದರು.

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅರುಣ್ ಗೋವಿಲ್, ದೇಶಕ್ಕಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ. ದೇಶ ಸೇವೆ ಸಲ್ಲಿಸಲು ಬಿಜೆಪಿ ಉತ್ತಮ ವೇದಿಕೆಯಾಗಿದೆ. ಜೈ ಶ್ರೀರಾಮ ಘೋಷಣೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಅಲರ್ಜಿ ಇರೋದನ್ನ ನಾನು ಗಮನಿಸಿದ್ದೇನೆ. ಜೈಶ್ರೀರಾಮ ಕೇವಲ ಘೋಷಣೆಯಲ್ಲ ಅದೊಂದು ಶಕ್ತಿ ಎಂದು ದೀದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸದ್ಯ ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಅರುಣ್ ಗೋವಿಲ್ ಅವರನ್ನ ಬಿಜೆಪಿ ಪ್ರಚಾರದ ಅಖಾಡಕ್ಕೆ ಇಳಿಸಲಿದೆ ಎಂದು ಹೇಳಲಾಗುತ್ತಿದೆ. ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ದೇಶಾದ್ಯಂತ ಚಿರಪರಿಚಿತರು. ಲಾಕ್‍ಡೌನ್ ವೇಳೆ ಸರ್ಕಾರ ರಾಮಾಯಾಣ ಧಾರಾವಾಹಿಯನ್ನ ಪುನರ್ ಪ್ರಸಾರ ಮಾಡಿತ್ತು.

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್​​

Fri Mar 19 , 2021
ರಾಜ್ಯದ ಮೂರು ಉಪಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್​ ಇದೀಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಬಸವಕಲ್ಯಾಣ, ಮಸ್ಕಿ, ತುರವಿಹಾಳ್​ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹೆಸರನ್ನು ಅಂತಿಮ ಗೊಳಿಸಿದ್ದು, ಬೆಳಗಾವಿ ಲೋಕಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆಯನ್ನು ಮಾತ್ರ ಪ್ರಕಟಗೊಳಿಸಿಲ್ಲ. ಬಸವಕಲ್ಯಾಣದಿಂದ ಮಾಜಿ ಶಾಸಕ ನಾರಾಯಣ ರಾವ್​ ಹೆಂಡತಿ ಮಲ್ಲಮ್ಮ, ಸಿಂದಗಿ ಕ್ಷೇತ್ರದಿಂದ ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಪಕ್ಷ ಸೇರ್ಪಡನೆಗೊಂಡ  ಅಶೋಕ್​ ಮನಗೂಳಿ, ಮಸ್ಕಿಯಿಂದ ಬಸವನಗೌಡ ತುರವಿಹಾಳ್ ಅವರಿಗೆ ಟಿಕಟ್​ ಘೋಷಣೆ […]

Advertisement

Wordpress Social Share Plugin powered by Ultimatelysocial