ವಿದ್ಯುತ್ ಸ್ಪರ್ಶಗೊಂಡು ಜೂನಿಯರ್ ರವಿಚಂದ್ರನ್!

ಕುಣಿಗಲ್ : ಸಂಪ್‌ಗೆ ನೀರು ತುಂಬಿಸಲು ಮೋಟರ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಹೇರೂರು ಗ್ರಾಮದ ಲಕ್ಷ್ಮಿ ನಾರಾಯಣ (35) (ಜೂನಿಯರ್ ರವಿಚಂದ್ರನ್) ಮೃತ ದುರ್ದೈವಿ.

ಜೂನಿಯರ್ ರವಿಚಂದ್ರನ್ ಎಂದೇ ಪ್ರಖ್ಯಾತಗೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿಧ ಲಕ್ಷ್ಮಿ ನಾರಾಯಣ ಮಂಗಳವಾರ ತಮ್ಮ ಮನೆಯ ಸಂಪ್‌ಗೆ ನೀರು ತುಂಬಿಸಲೆಂದು ಮೋಟರ್ ಸ್ವಿಚ್ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಲಕ್ಷ್ಮಿ ನಾರಾಯಣ ರಾಜ್ಯದ ವಿವಿಧ ಜಿಲ್ಲಾ, ತಾಲೂಕು ಸೇರಿದಂತೆ ವಿವಿದೆಡೆ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾಡು ಹೇಳುವುದರ ಜೋತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹೋಲುತ್ತಿದ್ದ ಅವರು ರವಿಚಂದ್ರನ್ ಅವರ ಅಭಿನಯವನ್ನು ಸೊಗಸಾಗಿ ಅಭಿನಯಿಸುವ ಮೂಲಕ ಜನರ ಮನೆ ಮಾತಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ನೆರವಿಗೆ ಅಮೆರಿಕದಿಂದ 40 ಶತಕೋಟಿ ಡಾಲರ್!

Wed May 11 , 2022
  ವಾಷಿಂಗ್ಟನ್ , ಮೇ 11 – ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ವಿನಂತಿಯನ್ನು ಮನ್ನಿಸಿ ಉಭಯಪಕ್ಷೀಯ (ಡೆಮೋಕ್ರಾಟ್ ಮತ್ತು ರಿಪಬ್ಲಿಕನ್) ಸೆನೆಟರ್‍ಗಳು ಒಗ್ಗಟಿನ ಒಪ್ಪಿಗೆಯ ಮೂಲಕ ಸದನವು ಉಕ್ರೇನ್ ನೆರವಿಗೆ 40 ಶತಕೋಟಿ ಡಾಲರ್ ಪ್ಯಾಕೇಜ್ ಅನುಮೋದಿಸಿತು. ಸಂಸತ್ತಿನಲ್ಲಿ ನಡೆದ ಚರ್ಚೆ ನಮತರ ಸಂಸದರ ಮತದಾನದಲ್ಲಿ 368-57 ಅಂತರದಿಂದ ಅನುಮೋದನೆ ಪಡೆಯಿತು,ವಿಶೇಷ ಎಂದರೆ ಕೋರಿಕೆಗಿಂತ 7 ಶತಕೋಟಿ ಹೆಚ್ಚಿನದನ್ನು ನೆರವು ಒದಗಿಸುತ್ತದೆ. ಈ ನೆರವನ್ನು ರಕ್ಷಣಾ ಮತ್ತು […]

Advertisement

Wordpress Social Share Plugin powered by Ultimatelysocial