1200 ಕೋಟಿಗೆ ಇನ್ನೆಷ್ಟು ಬೇಕು? ಕೆಜಿಎಫ್ 31ನೇ ದಿನದ ಕಲೆಕ್ಷನ್ ಇಷ್ಟು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಇಷ್ಟು ಥಿಯೇಟರ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿತ್ತು. 31ನೇ ದಿನವೂ ‘ಕೆಜಿಎಫ್ 2’ ದರ್ಬಾರ್ ಮುಂದುವರೆದಿದೆ. ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಚಮತ್ಕಾರ ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತಲೇ ಇದೆ. 5ನೇ ವೀಕೆಂಡ್‌ನಲ್ಲೂ ‘ಕೆಜಿಎಫ್ 2’ ಥಿಯೇಟರ್‌ನಲ್ಲಿ ಸ್ಥಿರ ಪ್ರದರ್ಶನವನ್ನೇ ನೀಡುತ್ತಿದೆ.

‘ಕೆಜಿಎಫ್ 2’ಗೆ ಐದನೇ ವಾರ ದೊಡ್ಡ ದೊಡ್ಡ ಸಿನಿಮಾಗಳು ಟಕ್ಕರ್ ಕೊಟ್ಟಿವೆ. ತೆಲುಗಿನಲ್ಲಿ ‘ಸರ್ಕಾರು ವಾರಿ ಪಾಟ’, ತಮಿಳಿನಲ್ಲಿ ಡಾನ್, ಹಿಂದಿಯಲ್ಲಿ ‘ಜಯೇಶ್ ಭಾಯ್ ಜೋರ್ದಾರ್’, ಹಾಲಿವುಡ್ ಸಿನಿಮಾ ‘ಡಾಕ್ಟರ್ ಸ್ಟ್ರೇಂಜ್’ ಸೇರಿದಂತೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಈ ಎಲ್ಲಾ ಸಿನಿಮಾಗಳ ಪೈಪೋಟಿಯ ನಡುವೆಯೂ ‘ಕೆಜಿಎಫ್ 2’ ಬಾಕ್ಸಾಫೀಸ್‌ನಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ.

‘ಕೆಜಿಎಫ್ 2’ 5ನೇ ವಾರದ ಬಾಕ್ಸಾಫೀಸ್‌ನಲ್ಲಿ ಹೇಗೆ ಪ್ರದರ್ಶನ ಮಾಡುತ್ತೆ? ಅನ್ನೋದರ ಮೇಲೆ ಈ ಸಿನಿಮಾ 1500 ಕೋಟಿ ಕ್ಲಬ್ ಸೇರುತ್ತಾ? ಇಲ್ವಾ? ಅನ್ನೋದು ನಿರ್ಧಾರ ಆಗಲಿದೆ. ಸದ್ಯ 1200 ಕೋಟಿಯ ಆಸು-ಪಾಸಿನಲ್ಲಿದ್ದು, ಬಾಕ್ಸಾಫೀಸ್‌ ಕಲೆಕ್ಷನ್ ಬಗ್ಗೆ ಹೊಸ ಲೆಕ್ಕಾಚಾರಗಳು ಶುರುವಾಗಿವೆ. ಹಾಗಿದ್ದರೆ, 31ನೇ ದಿನ ‘ಕೆಜಿಎಫ್ 2’ ಗಳಿಸಿದ್ದೆಷ್ಟು? ವಿಶ್ವದಾದ್ಯಂತ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ? ಅನ್ನುವ ರಿಪೋರ್ಟ್ ಇಲ್ಲಿದೆ.

‘ಕೆಜಿಎಫ್ 2′ 31ನೇ ದಿನದ ರಿಪೋರ್ಟ್ ಏನು?’ಕೆಜಿಎಫ್ 2’ ಸಿನಿಮಾ ಬಿಡುಗಡೆಯಾದಲ್ಲಿಂದ ಬಾಕ್ಸಾಫೀಸ್‌ನಲ್ಲಿ ದರ್ಬಾರ್ ನಡೆಸುತ್ತಲೇ ಇದೆ. ‘ಕೆಜಿಎಫ್ 2’ ಟಕ್ಕರ್ ಕೊಡುವುದಕ್ಕೆ ದಿಗ್ಗಜರೇ ಬಂದರೂ ಅದೂ ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. ಆದರೆ, 5ನೇ ವಾರದಲ್ಲಿ ‘ಕೆಜಿಎಫ್ 2’ ಬಾಕ್ಸಾಫೀಸ್‌ ಕಲೆಕ್ಷನ್ ಇಳಿಮುಖವಾಗಿದೆ. 31ನೇ ದಿನ ‘ಕೆಜಿಎಫ್ 2’ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ 4.34 ಕೋಟಿ ಗಳಿಕೆ ಕಂಡಿದೆ. 5 ವಾರದ ಬಳಿಕವೂ ಯಾವುದೇ ಸಿನಿಮಾ 4 ಕೋಟಿಗಿಂತಲೂ ಅಧಿಕ ಗಳಿಕೆ ಕಂಡರೆ, ಅದು ಬಾಕ್ಸಾಫೀಸ್‌ನಲ್ಲಿ ಇನ್ನೂ ದರ್ಬಾರ್ ಮುಂದುವರೆಸಿದೆ ಎಂದು ಸಿಗ್ನಲ್ ಕೊಟ್ಟಂತೆ. 31ನೇ ದಿನ ಅದನ್ನೇ ‘ಕೆಜಿಎಫ್ 2’ ಮಾಡಿದೆ.

31 ದಿನಗಳಲ್ಲಿ ‘ಕೆಜಿಎಫ್ 2’ ಗಳಿಸಿದ್ದೆಷ್ಟು?

‘ಕೆಜಿಎಫ್ 2’ ಸಿನಿಮಾ 31 ದಿನಗಳ ಕಲೆಕ್ಷನ್ 1200 ಕೋಟಿ ಸಮೀಸುತ್ತಿದೆ. ಇನ್ನು ಮೂರು ದಿನಗಳಲ್ಲಿ 1200 ಕೋಟಿ ಕ್ಲಬ್ ಸೇರಲಿದೆ. ಭಾನುವಾರ (ಮೇ 15) ಹಾಗೂ ಸೋಮವಾರ (ಮೇ 16) ಮಂಗಳವಾರ (ಮೇ 17)ದ ಹೊತ್ತಿಗೆ ‘ಕೆಜಿಎಫ್ 2’ ಕಲೆಕ್ಷನ್ ವಿಶ್ವದಾದ್ಯಂತ 1200 ಕೋಟಿ ದಾಟಲಿದೆ. ಸದ್ಯ ಈ 31 ದಿನಗಳಲ್ಲಿ ‘ಕೆಜಿಎಫ್ 2’ ಸುಮಾರು 1185.17 ಕೋಟಿ ಗಳಿಸಿದೆ. ಇನ್ನು ಭಾನುವಾರ ವೀಕೆಂಡ್ ಹಾಗೂ ಸೋಮವಾರ ಈ ಎರಡು ದಿನಗಳಲ್ಲಿ ‘ಕೆಜಿಎಫ್ 2’ ಇನ್ನೂ 10 ಕೋಟಿಗೂ ಅಧಿಕ ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ.

ವಿಶ್ವದಾದ್ಯಂತ ‘ಕೆಜಿಎಫ್ 2’ ಬಾಕ್ಸಾಫೀಸ್ ಕಲೆಕ್ಷನ್

ಮೊದಲ ವಾರ ₹ 720.31 ಕೋಟಿ
ಎರಡನೇ ವಾರ ₹ 223.51 ಕೋಟಿ
ಮೂರನೇ ವಾರ ₹ 140.55 ಕೋಟಿ

ನಾಲ್ಕನೇ ವಾರ ₹ 91.26 ಕೋಟಿ

5ನೇ ವಾರ
ಮೊದಲ ದಿನ ₹ 5.20 ಕೋಟಿ
ಎರಡನೇ ದಿನ ₹ 4.34 ಕೋಟಿ

ಒಟ್ಟು ₹ 1185.17 ಕೋಟಿ

‘ಸರ್ಕಾರು ವಾರಿ ಪಾಟ’ ಕಲೆಕ್ಷನ್ ಬಲು ಜೋರು

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ ಹಲವು ದೊಡ್ಡ ದೊಡ್ಡ ಸಿನಿಮಾಗಳನ್ನು ಎದುರಿಸಿ ನಿಂತಿತ್ತು. 5ನೇ ವಾರದಲ್ಲಿ ‘ಕೆಜಿಎಫ್ 2’ಗೆ ಟಕ್ಕರ್ ಕೊಟ್ಟ ಮೊದಲ ಸಿನಿಮಾ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’. ಸಿನಿಮಾ ಬಿಡುಗಡೆಯಾದಲ್ಲಿಂದ ಚಿತ್ರ ಥಿಯೇಟರ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಎರಡೇ ದಿನಗಳಲ್ಲಿ 100 ಕೋಟಿ ಲೂಟಿ ಮಾಡಿ ಮುನ್ನುಗ್ಗುತ್ತಿದೆ.

5ನೇ ವಾರದಲ್ಲಿ ಏನು ಲೆಕ್ಕಾಚಾರ?

‘ಕೆಜಿಎಫ್ 2’ ಸಿನಿಮಾ 5ನೇ ವಾರದಲ್ಲಿ ಎಷ್ಟು ಗಳಿಕೆ ಮಾಡುತ್ತೆ ಅನ್ನುವ ಲೆಕ್ಕಾಚಾರವಂತೂ ಶುರುವಾಗಿದೆ. 5ನೇ ವಾರದ ಹೊತ್ತಿಗೆ, ಥಿಯೇಟರ್‌ಗಳ ಸಂಖ್ಯೆ ಕಡಿಮೆಯಾಗಿದೆ. ಲಿಮಿಟೆಡ್ ಶೋಗಳಿಗೆ ಬಂದು ನಿಂತಿದೆ. ಹೊಸ ಸಿನಿಮಾಗಳಿಗೆ ಪೈಪೋಟಿ ನೀಡುತ್ತಿರುವುದರಿಂದ ‘ಕೆಜಿಎಫ್ 2’ ಎಷ್ಟು ಗಳಿಸಬಹುದು? 1500 ಕೋಟಿ ಕ್ಲಬ್ ಸೇರುತ್ತಾ? ‘ದಂಗಲ್’, ‘ಬಾಹುಬಲಿ 2’ ಸಿನಿಮಾವನ್ನು ಹಿಂದಕ್ಕೆ ಹಾಕುತ್ತಾ? ಅನ್ನೋದು ಲೆಕ್ಕಚಾರ ಈಗಾಗಲೇ ಆರಂಭ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ, ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಗೈರು!

Sun May 15 , 2022
  ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಭೀತಿ ಶುರುವಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಸೋಂಕಿನ ಆರ್ಭಟ ಮುಂದುವರೆದಿದೆ. ಹೀಗಾಗಿ ಆಯಾ ರಾಜ್ಯದ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿವೆ. ಮುಂಬೈನಲ್ಲೂ ಸೋಂಕಿನ ಪ್ರಮಾಣ ಹೆಚ್ಚಿದ್ದು, ಸದ್ಯ ನಟ ಅಕ್ಷಯ್ ಕುಮಾರ್‌ಗೆ ಎರಡನೇ ಬಾರಿ ಕೋವಿಡ್ ದೃಢಪಟ್ಟಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅಕ್ವಯ ಕುಮಾರ್ ಶನಿವಾರ (ಮೇ 14) ಟ್ವೀಟ್ ಮಾಡುವ ಮೂಲಕ […]

Advertisement

Wordpress Social Share Plugin powered by Ultimatelysocial