”ಕೆಜಿಎಫ್ 2” ಮತ್ತೊಂದು ರೆಕಾರ್ಡ್: ‘ಬಾಹುಬಲಿ 2’ ದಾಖಲೆ ಉಡೀಸ್!

 

ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಹೊಸ ದಾಖಲೆ ಬರೆದಿದೆ. ಚಿತ್ರ ರಿಲೀಸ್‌ಗೂ ಮೊದಲೇ ಸಾಕಷ್ಟು ದಾಖಲೆಗಳನ್ನ ಮಾಡಿತ್ತು. ಈಗ ಕೆಜಿಎಫ್ 2 ರಿಲೀಸ್ ಆಗಿ 50 ದಿನ ಕಳೆದರು. ಮತ್ತೆ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಅದರಲ್ಲೂ ಬಾಹುಬಲಿ 2ಗೆ ಸೆಡ್ಡು ಹೊಡೆದು ಕೆಜಿಎಫ್ 2 ಅಗ್ರಸ್ಥಾನದಲ್ಲಿದೆ.

ನ್ಯಾಷನಲ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2′ ಗೆಲುವಿನ ನಾಗಲೋಟದಲ್ಲಿದೆ. ಸದ್ಯ ಯಶ್ ಸಿನಿಮಾ ಹೊಸ ದಾಖಲೆ ಬರೆದಿದ್ದು, ಬಾಹುಬಲಿ 2ಗೆ ಸೆಡ್ಡು ಹೊಡೆದು ಮುಂದೆ ಬಂದಿದೆ. ಗಳಿಕೆಯ ವಿಚಾರದಲ್ಲಿ ಬಾಹುಬಲಿ 2 ಚಿತ್ರವನ್ನ ಕೆಜಿಎಫ್ 2 ಇನ್ನು ಮುಟ್ಟಿಲ್ಲ. ಆದರೆ ಟಿಕೆಟ್ ವಿಚಾರದಲ್ಲಿ ಬಾಹುಬಲಿ 2 ಸಿನಿಮಾವನ್ನು ಮೀರಿಸಿದೆ.

`ಕೆಜಿಎಫ್ 2′ ಟಿಕೆಟ್ ಮಾರಾಟ ಆಗಿರುವ ವಿಚಾರದಲ್ಲಿ ಹೊಸ ಸಮೀಕ್ಷೆ ಹೊರ ಬಿದ್ದಿದೆ. ಟಿಕೆಟ್ ಬುಕ್ ಮಾಡುವಂತಹ ಬುಕ್ ಮೈ ಶೋ ಆಪ್‌ನಲ್ಲಿ ಕೆಜಿಎಫ್ 2 ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಇಲ್ಲಿವರೆಗೂ ತೆರೆಕಂಡಂತಹ ಚಿತ್ರಗಳಲ್ಲಿ ಅತೀ ಟಿಕೆಟ್ ಸೇಲ್ ಆಗಿರುವುದು ಕೆಜಿಎಫ್ 2 ಚಿತ್ರವೇ ಆಗಿದೆ. ಒಟ್ಟು 17.1 ಮಿಲಿಯನ್ ಟಿಕೆಟ್ ಬುಕ್ ಮೈ ಶೋ ಮೂಲಕ ಮಾರಾಟವಾಗಿದೆ. `ಕೆಜಿಎಫ್ 2′ 17.1 ಮಿಲಿಯನ್ ಟಿಕೆಟ್ ಸೇಲ್ ಆಗಿದ್ರೆ, `ಬಾಹುಬಲಿ 2′ 16 ಮಿಲಿಯನ್ ಟಿಕೆಟ್ ಸೇಲ್ ಆಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಆರ್‌ಆರ್‌ಆರ್ ಚಿತ್ರವಿದ್ದು 13.4 ಮಿಲಿಯನ್ ಟಿಕೆಟ್ ಮಾರಾಟವಾಗಿದೆ. ಈಗ ಯಶ್ ಸಿನಿಮಾ ಹೊಸ ದಾಖಲೆಗಳ ಸಾಲಿನಲ್ಲಿ ಸೇರುತ್ತಿರೋದನ್ನ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೂನ್‌ನಿಂದ ಭಾರತ-ಬಾಂಗ್ಲಾದೇಶ ರೈಲು ಸೇವೆ ಆರಂಭ ̤̤̤

Sun May 29 , 2022
ನವದೆಹಲಿ ಮೇ 29: ಭಾರತ ಮತ್ತು ಬಾಂಗ್ಲಾದೇಶ ನಡುವಿನ ರೈಲು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೂರನೇ ಪ್ರಯಾಣಿಕ ರೈಲು ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ಮಿಥಾಲಿ ಎಕ್ಸ್ ಪ್ರೆಸ್ ರೈಲು ಸೇವೆಯು ಜೂನ್‌ 1 ರಿಂದ ಆರಂಭವಾಗುತ್ತಿದೆ. ಈ ರೈಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಮತ್ತು ಬಾಂಗ್ಲಾದೇಶದ ಢಾಕಾ ನಡುವೆ ಕಾರ್ಯನಿರ್ವಹಿಸಲಿದೆ. ನೂತನ ಮಿಥಾಲಿ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಜೂನ್‌ 1 ರಂದು ನವದೆಹಲಿಯ ರೈಲು ಭವನದಲ್ಲಿ […]

Advertisement

Wordpress Social Share Plugin powered by Ultimatelysocial