ಕೆ. ಎಸ್. ನರಸಿಂಹಸ್ವಾಮಿ ಮಹಾನ್ ಜನಾನುರಾಗಿರುವ ಕವಿ

 

‘ಮೈಸೂರು ಮಲ್ಲಿಗೆ’ ಅಂದರೆ ಕೆ. ಎಸ್. ನರಸಿಂಹಸ್ವಾಮಿಗಳು. ಮೈಸೂರು ಮತ್ತು ಮಲ್ಲಿಗೆಯನ್ನೂ ಮೀರಿ ನೆನಪಿಗೆ ಬರುವಷ್ಟು ಅವರು ಕನ್ನಡ ಜನಮಾನಸದಲ್ಲಿ ವಿರಾಜಿತರು. ಕನ್ನಡದ ಕವಿಯೊಬ್ಬರು ಯಾವುದೇ ಪಾಂಡಿತ್ಯವಿಲ್ಲದವನನ್ನೂ ತಮ್ಮ ಕೃತಿಗಳ ಮೂಲಕ ಆತ್ಮೀಯವಾಗಿ ಸೆಳೆದ ಒಂದು ಅಪೂರ್ವತೆ ಇದ್ದರೆ ಅದು ಕೆ. ಎಸ್. ನರಸಿಂಹ ಸ್ವಾಮಿಗಳಿಗೆ ಸೇರುತ್ತದೆ ಎಂಬುದು ನಿರ್ವಿವಾದ. ಇಂದು ಈ ಮಹಾನ್ ಜನಾನುರಾಗಿ ಕವಿಯ ಸಂಸ್ಮರಣೆ ದಿನ.1943ರಲ್ಲಿ ಕೆ. ಎಸ್. ನರಸಿಂಹ ಸ್ವಾಮಿಗಳ ಮೊದಲ ಕವಿತಾ ಸಂಗ್ರಹ ‘ಮೈಸೂರು ಮಲ್ಲಿಗೆ’ ಪ್ರಕಟವಾಯಿತು. ಈಗಲೂ ಅದು ಮರುಮುದ್ರಣಗಳನ್ನು ಕಾಣುತ್ತಲೇ ಇದೆ. ಮುಂದೆಯೂ ಕಾಣುತ್ತಲೇ ಹೋಗುತ್ತದೆ. ಇಷ್ಟೊಂದು ಜನಪ್ರಿಯತೆಯನ್ನು ಮೀರಿಸುವ ಇನ್ನೊಂದು ಕಾವ್ಯ ಕೃತಿ ಪ್ರಾಯಶಃ ಕನ್ನಡದಲ್ಲಿ ಇಲ್ಲ.ಕನ್ನಡದಲ್ಲಿ ಕಾಲಕಾಲಕ್ಕೆ ಆದ ಕಾವ್ಯಕ್ರಾಂತಿಗಳಲ್ಲಿ ‘ಫೀನಿಕ್ಸ್’ನಂತೆ ತಮ್ಮನ್ನು ನವೀಕರಿಸಿಕೊಂಡು ಹೊಸಹುಟ್ಟು ಪಡೆಯುತ್ತಾ ಘನವಾದ ಕಾವ್ಯ ರಚಿಸುತ್ತಾ ಹೋದದ್ದು ಕೆ.ಎಸ್. ನರಸಿಂಹಸ್ವಾಮಿಗಳ ಹೆಗ್ಗಳಿಕೆ. ಮಧುರವಾದ, ಆದರೆ ಅನನ್ಯವಾದ, ತಮ್ಮ ಪ್ರೇಮ-ದಾಂಪತ್ಯದ ಕಾವ್ಯದ ನೆಲೆಯಿಂದ, ಬದುಕಿನ ನಿಷ್ಠುರ ವಿನ್ಯಾಸಗಳನ್ನು ಗುರುತಿಸುವ ‘ತೆರೆದ ಬಾಗಿಲು’ ನಂತಹ ಕವನಗಳವರೆಗೆ ಕೆ.ಎಸ್.ನ ಅವರು ನಡೆದ ಕಾವ್ಯದ ಒಡೆದು ತೋರುವ ಬೆಳವಣಿಗೆ ಬೆರಗು ಹುಟ್ಟಿಸುವಂಥದ್ದು.
ಕೆ. ಎಸ್. ನರಸಿಂಹಸ್ವಾಮಿಗಳು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನವರಿ 26ರಂದು ಜನಿಸಿದರು. ತಂದೆ ಕಿಕ್ಕೇರಿ ಸುಬ್ಬರಾಯರು. ತಾಯಿ ಹೊಸ ಹೊಳಲು ನಾಗಮ್ಮನವರು. ಮೈಸೂರು, ಬೆಂಗಳೂರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜೂನಿಯರ ಬಿ.ಎ ಮುಗಿಸುವಲ್ಲಿ ಅವರ ಓದು ಅಪೂರ್ಣವಾಗಿ ಮುಕ್ತಾಯವಾಯಿತು. 1936ರಲ್ಲಿ ವೆಂಕಮ್ಮನವರೊಂದಿಗೆ ವಿವಾಹವಾಯಿತು. ಈ ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು. 1937ರಲ್ಲಿ ಸರ್ಕಾರಿ ನೌಕರಿ ಸೇರಿ ಮೈಸೂರು, ನಂಜನಗೂಡು, ಬೆಂಗಳೂರಿನಲ್ಲಿ ತಮ್ಮ ಸೇವಾವಧಿ ಮುಗಿಸಿ 1970ರಲ್ಲಿ ನೌಕರಿಯಿಂದ ನಿವೃತ್ತರಾದರು. ಜೀವನದ ಉದ್ದಕ್ಕೂ ಆರ್ಥಿಕ ಕ್ಲೇಶ, ಸಾಂಸಾರಿಕ ತಾಪತ್ರಯಗಳಲ್ಲಿ ಬದುಕನ್ನು ತೇಯುತ್ತಾ ಬಂದರೂ ಅದರ ಚೆಲುವನ್ನು ತೆರೆದು ತೋರುತ್ತಾ, ಜೀವನ ಮುಖಿಯಾದ ಕಾವ್ಯವನ್ನು ತಮ್ಮ ವೈಯಕ್ತಿಕ ಬದುಕಿನ ನೆಲೆಯಿಂದಲೇ ಎತ್ತಿಕೊಡುತ್ತಾ ಹೋದದ್ದು ನರಸಿಂಹಸ್ವಾಮಿಗಳ ವೈಶಿಷ್ಟ್ಯ.
ಸಾಂಸ್ಕೃತಿಕವಾಗಿ ಕೆ. ಎಸ್. ನರಸಿಂಹಸ್ವಾಮಿ ಅವರಿಗೆ ಕನ್ನಡ ಜನತೆ ತೋರುತ್ತಾ ಬಂದಿರುವ ಪ್ರೀತಿ ಗೌರವ ಅಪಾರ. ಮೈಸೂರು ಮಲ್ಲಿಗೆಗೆ ದೇವರಾಜಬಹದ್ದೂರ್ ಬಹುಮಾನ, ಶಿಲಾಲತೆಗೆ ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಶಾಖೆಯ ಬಹುಮಾನ, 1970ರಲ್ಲಿ ‘ಚಂದನ’ ಸಂಭಾವನ ಗ್ರಂಥ, ತೆರೆದ ಬಾಗಿಲು ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ‘ದುಂಡು ಮಲ್ಲಿಗೆ’ ಕವನ ಸಂಗ್ರಹಕ್ಕೆ ಪಂಪ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ, ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ ಇವು ಇವರಿಗೆ ಸಂದ ಅನೇಕ ಪ್ರಶಸ್ತಿಗಳಲ್ಲಿ ಕೆಲವು ಮಾತ್ರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

1 ವರ್ಷದ ಬಳಿಕ ಜೈಲಿನಿಂದ ಹೊರಬಂದ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್‌ಮುಖ್

Wed Dec 28 , 2022
  ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಒಂದು ವರ್ಷದ ಸೆರೆವಾಸದ ಬಳಿಕ ಬುಧವಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಮುಂಬಯಿಯ ಆರ್ಥರ್ ರಸ್ತೆ ಜೈಲಿನಿಂದ ಹೊರಬಂದ ಅವರನ್ನು ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು72 ವರ್ಷದ ಅನಿಲ್ ದೇಶ್‌ಮುಖ್ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಬಂಧಿಸಿತ್ತು. ದೇಶ್‌ಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಡಿ. 12ರಂದು ಜಾಮೀನು ಮಂಜೂರು ಮಾಡಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಸಮಯ ಬೇಕು […]

Advertisement

Wordpress Social Share Plugin powered by Ultimatelysocial