ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದು!

ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದು, ತಮ್ಮ ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ದುಬೈ ಪ್ರವಾಸದಲ್ಲಿರುವ ಕಾಜಲ್, ಹೋಟೆಲ್‍ವೊಂದರಲ್ಲಿ ಬಾಲ್ಕನಿಯಲ್ಲಿ ಸೂರ್ಯನಿಂದ ಹೊಮ್ಮುವ ಪ್ರಕಾಶಮಾನ ಕಿರಣಗಳನ್ನು ನೋಡುತ್ತಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ.ಈ ಫೋಟೊ ವನ್ನು ಸೂರ್ಯನ ಎಮೋಜಿಯೊಂದಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಸೂರ್ಯನ ಕಿರಣಗಳು ಮೃದುವಾಗಿ ನನ್ನ ಮುಖವನ್ನು ಸ್ಪರ್ಶಿಸುತ್ತಿವೆ ಎಂದು ಬರೆದುಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.ಕಳೆದ ಕೆಲವು ದಿನಗಳ ಹಿಂದೆ ಕಾಜಲ್, ದುಬೈನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಬೇಬಿ ಬಂಪ್ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಕಾಜಲ್, ಪ್ರವಾಸ, ಸಮಾರಂಭದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಂಡೈ:ಕಿಯಾ 5 ಲಕ್ಷ ವಾಹನಗಳನ್ನು ಹಿಂಪಡೆಯುತ್ತದೆ, ಬೆಂಕಿಯ ಅಪಾಯದಿಂದಾಗಿ ಮಾಲೀಕರು ಹೊರಗೆ ನಿಲ್ಲಿಸಲು ಸಲಹೆ;

Wed Feb 9 , 2022
ಫೆಬ್ರವರಿ 8 ರಂದು, ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಹ್ಯುಂಡೈ ಮತ್ತು ಕಿಯಾ 4,84,000 U.S. ವಾಹನಗಳ ಮಾಲೀಕರಿಗೆ ಇತರ ವಾಹನಗಳಿಂದ ಹೊರಗೆ ಮತ್ತು ದೂರ ನಿಲುಗಡೆ ಮಾಡಲು ಸಲಹೆ ನೀಡಿತು. ಸಂಭವನೀಯ ಕಾರಣ ಬೆಂಕಿಯ ಅಪಾಯವಾಗಿರಬಹುದು ಎಂದು ಮೂಲಗಳು ಸೂಚಿಸುತ್ತವೆ. Hyundai Motor Co ಮತ್ತು ಅದರ ಅಂಗಸಂಸ್ಥೆ Kia Corp ಪ್ರತ್ಯೇಕ U.S. ಹಿಂಪಡೆಯುವಿಕೆಯನ್ನು ಘೋಷಿಸಿತು ಏಕೆಂದರೆ ಹೈಡ್ರಾಲಿಕ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ (HECU) ಮಾಡ್ಯೂಲ್ ಅಸಮರ್ಪಕವಾಗಿ […]

Advertisement

Wordpress Social Share Plugin powered by Ultimatelysocial