ಕಲಬುರಗಿಯಲ್ಲಿ ಇಂದಿನಿಂದ ಜಗದಂದಬಾದೇವಿ ಅಗ್ಗಿ ಜಾತ್ರೆ ಆರಂಭ.

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚೌಡಾಪುರದ ಜಗದಂಬಾದೇವಿ 12ನೇ ಅಗ್ಗಿ ಜಾತ್ರಾ ಮಹೋತ್ಸವ, ಲಕ್ಷ ದೀಪೋತ್ಸವ, ಬಂಜಾರ ಭವನದ ಉದ್ಘಾಟನೆ ಹಾಗೂ ವಿಶ್ವಧರ್ಮ ಪ್ರವಚನ ಕಾರ್ಯಕ್ರಮ ಫೆ. 7 ಹಾಗೂ 8ರಂದು ನಡೆಯಲಿದೆ.

ಕ್ಷೇತ್ರದ ಮುರಾಹರಿ ಮಹಾರಾಜ ಅವರು ಎಲ್ಲ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸುವರು.

ಪೆ. 7ರಂದು ಸಂಜೆ 7.30ಕ್ಕೆ ಬಂಜಾರ ಭವನದ ಉದ್ಘಾಟನೆ ಹಾಗೂ ರಾತ್ರಿ 8ಕ್ಕೆ ಲಕ್ಷ ದೀಪೋತ್ಸವ ನಡೆಯಲಿದೆ. ಚಿಣಮಗೇರಾ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರು, ಲಿಂಗಸೂರಿನ ವಿಜಯಮಹಾಂತೇಶ್ವರ ಶಾಖಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮುಗಳನಾಗಾಂವ ಯಲ್ಲಾಲಿಂಗ ಪುಣ್ಯಾಶ್ರಮದ ಜೇಮಸಿಂಗ ಮಹಾರಾಜರು, ಸುರಪೂರಿನ ವಿಠಲ ಮಹಾರಾಜರು ಸಾನ್ನಿಧ್ಯ ವಹಿಸುವರು. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಉದ್ಘಾಟಿಸುವರು. ಶಾಸಕ ಎಂ.ವೈ. ಪಾಟೀಲ ಅಧ್ಯಕ್ಷತೆ ವಹಿಸುವರು. ವಿವಿಧ ತಾಂಡಾಗಳ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಫೆ. 8ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಧರ್ಮಸಭೆಯನ್ನು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಉದ್ಘಾಟಿಸುವರು. ಸಿದ್ಧರಾಮ ಶಿವಾಚಾರ್ಯರು, ಬೆಡಸೂರಿನ ಪರ್ವತಲಿಂಗ ಪರಮೇಶ್ವರ ಮಹಾರಾಜ, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಸುಗೂರಿನ ಡಾ.ಚನ್ನರುದ್ರಮುನಿ ಶಿವಾಚಾರ್ಯರು, ಕೆಸರಟಗಿಯ ಭಾಗ್ಯವಂತಿ ಕ್ಷೇತ್ರದ ಮಾತಾ ಲತಾದೇವಿ, ಗುರುಮಠಕಲ್‌ನ ನರೇಂದ್ರ ರಾಠೋಡ ಅವರು ಸಾನ್ನಿಧ್ಯ ವಹಿಸುವರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಅಧ್ಯಕ್ಷತೆ ವಹಿಸುವರು. ಸಂಸದ ಡಾ.ಉಮೇಶ ಜಾಧವ ದೀ‍ಪ ಬೆಳಗಿಸುವರು. ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು ಪ್ರತಿ ದಿನ ಪನ್ನೀರ್‌ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?

Mon Feb 7 , 2022
ಆರೋಗ್ಯವಾಗಿರಲು, ನೀವು ಆರೋಗ್ಯಕರ ಆಹಾರವನ್ನು ಸಹ ತೆಗೆದುಕೊಳ್ಳಬೇಕು. ಆರೋಗ್ಯವಂತರಾಗಿರಲು ಆರೋಗ್ಯಕರ ಉಪಹಾರ ಸೇವಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬೆಳಗಿನ ಉಪಾಹಾರದಲ್ಲಿ ಗಟ್ಟಿ ಪದಾರ್ಥ ತಿನ್ನುವ ಬದಲು, ಪನೀರ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಪನೀರ್ ಹೆಚ್ಚಿನ ಪ್ರೋಟೀನ್ ಆಹಾರವಾಗಿದೆ. ಆದ್ದರಿಂದ, ಬೆಳಗಿನ ಉಪಾಹಾರದಲ್ಲಿ ಕಾಟೇಜ್ ಚೀಸ್ ತಿನ್ನುವ ಮೂಲಕ, ನೀವು ದಿನವಿಡೀ ಶಕ್ತಿಯನ್ನು ಅನುಭವಿಸುವಿರಿ. ಮಆಹಾರ ತಜ್ಞೆ ಡಾ.ರಂಜನಾ ಸಿಂಗ್ ಹೇಳುವಂತೆ ಹಲವು ಅಂಶಗಳಿಂದ ಸಮೃದ್ಧವಾಗಿರುವ ಪನೀರ್ ತಿಂದರೆ ಹೆಚ್ಚು […]

Advertisement

Wordpress Social Share Plugin powered by Ultimatelysocial