ಕಲಾಕಂದ್ ಮಾಡುವ ವಿಧಾನ.

 

*ಪನೀರ್ – ೧ ಕಪ್
*ಹಾಲಿನ ಪುಡಿ – ೧ ಕಪ್
*ಫ್ರೆಷ್ ಕ್ರೀಮ್ – ೧ ಕಪ್
*ಸಕ್ಕರೆ – ೧/೨ ಕಪ್
*ಏಲಕ್ಕಿ ಪುಡಿ – ಸ್ವಲ್ಪ
*ತುಪ್ಪ – ೩ ಚಮಚ
*ಪಿಸ್ತಾ – ೧೦
*ಬಾದಾಮಿ – ೧೦

ಮಾಡುವ ವಿಧಾನ :

ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ತುರಿದ ಪನೀರ್, ಹಾಲಿನ ಪುಡಿ, ಫ್ರೆಷ್ ಕ್ರೀಮ್ ಹಾಕಿ ಗಂಟುಗಳಾಗದಂತೆ ಚೆನ್ನಾಗಿ ಮಿಕ್ಸ್ ಮಾಡಿ ಹತ್ತು ನಿಮಿಷ ಹಾಗೇ ಕಲಸುತ್ತಿರಿ. ಈ ಮಿಶ್ರಣಕ್ಕೆ ಪುಡಿ ಮಾಡಿದ ಸಕ್ಕರೆಯನ್ನು ಪುಡಿ ಮಾಡಿಕೊಂಡು ಹಾಕಿ ಕಲಸಿರಿ. ಚಿಟಿಕೆ ಏಲಕ್ಕಿ ಪುಡಿ ಬೆರೆಸಿ. ೨೦ ರಿಂದ ೨೫ ನಿಮಿಷ ಕಲಸುತ್ತಿರಿ ಗಟ್ಟಿಯಾದ ನಂತರ ಇದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ. ಪಿಸ್ತಾ ಚೂರು, ಬಾದಾಮಿಗಳಿಂದ ಅಲಂಕರಿಸಿ. ನಿಮಗಿಷ್ಟವಾದ ಆಕಾರದಲ್ಲಿ ಕಟ್ ಮಾಡಿ. ಈಗ ಸ್ವಾದಿಷ್ಟವಾದ ಕಲಾಕಂದ್ ಸೇವಿಸಲು ರೆಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಯಡಿಯೂರಪ್ಪ.

Sun Jan 22 , 2023
ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷದ ಪರವಾದ ವಾತಾವರಣ ನಿರ್ಮಾಣವಾಗಿದೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು. ವಿಜಯಪುರಕ್ಕೆ ಶನಿವಾರ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಶಕ್ತಿಗೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಆಗುವುದಿಲ್ಲ. ಅನೇಕರು ತಾವೇ ಮುಖ್ಯಮಂತ್ರಿ […]

Advertisement

Wordpress Social Share Plugin powered by Ultimatelysocial