ಯಶಸ್ವಿ 75ದಿನ ಪೂರೈಸಿದ ಸಂಭ್ರಮದಲ್ಲಿ “ಕನ್ನೇರಿ” ಚಿತ್ರತಂಡ

 

ಕೊರೊನಾ ಆರ್ಭಟ ಮುಗಿದ್ಮೇಲೆ ಬೆಳ್ಳಿತೆರೆಯಲ್ಲಿ ಸಿನಿಮಾಗಳ ಅಬ್ಬರ ಶುರುವಾಗಿದೆ. ವಾರಕ್ಕೆ ಏನಿಲ್ಲ ಅಂದ್ರೂ ಏಳೆಂಟು ಸಿನಿಮಾಗಳು ಥಿಯೇಟರ್ ಪ್ರವೇಶಿಸುತ್ತವೆ. ಹೀಗಿರುವಾಗ ಇಲ್ಲಿ ಉಳಿಯೋದು ಮಾತ್ರ ಬೆರಳೆಣಿಕೆ ಸಿನಿಮಾಗಳಷ್ಟೇ. ಅದ್ರಲ್ಲೂ ಸ್ಟಾರ್ಸ್ ಸಿನಿಮಾಗಳ ನಡುವೆ ತನ್ನ ಕಂಟೆಂಟು ಮತ್ತು ಕ್ವಾಲಿಟಿ ಮೂಲಕ ಗಟ್ಟಿಯಾಗಿ ನಿಲ್ಲುತ್ತವೆ ಎನ್ನುವುದಕ್ಕೆ ಕನ್ನೇರಿ ಸಿನಿಮಾ ತಾಜಾ ಉದಾಹರಣೆ.

ಮೂಕಹಕ್ಕಿ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ಭತ್ತಳಿಕೆಯಿಂದ ಬಂದ ನೈಜ ಘಟನೆಯಾಧಾರಿತ ಕನ್ನೇರಿ ಸಿನಿಮಾ ಯಶಸ್ವಿಯಾಗಿ 75 ದಿನ ಪೂರೈಸಿ ನೂರು ದಿನದತ್ತ ದಾಪುಗಾಲು ಇಡ್ತಿದೆ. ಈ ಖುಷಿ ಕ್ಷಣಗಳನ್ನು ಹಂಚಿಕೊಳ್ಳಲು ಕನ್ನೇರಿ ಸಿನಿಮಾ ತಂಡ ಮಾಧ್ಯಮದವರ ಮುಂದೆ ಹಾಜರಾಗಿತ್ತು.

ನನ್ನ ಬೆನ್ನಿಗೆ ನಿಂತು ಇಡೀ ಸಿನಿಮಾದ ಯಶಸ್ವಿಗೆ ಕಾರಣರಾದ ಇಡೀ ತಂಡಕ್ಕೆ ಧನ್ಯವಾದ. ಬುಡಕಟ್ಟು ಜನಾಂಗದ‌ ನೋವಿನ ಕಥೆ, ಬದುಕಿನ ತಲ್ಲಣ, ಹೆಣ್ಣುಮಕ್ಕಳ ದೌರ್ಜನ್ಯ, ಹೋರಾಟದ ಕಥೆಯನ್ನು ಈ ಸಿನಿಮಾ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡಿದ್ದೇವೆ ಎಂದು ನೀನಾಸಂ ಮಂಜು ಸಂತಸ ಹಂಚಿಕೊಂಡರು.

ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ ಜೇನು ಆಕಾಶದ ಅರಮನೆ ಕಾದಂಬರಿ ಎಳೆಯನ್ನು ಇಟ್ಟುಕೊಂಡು ಹೆಣೆಯಲಾಗಿದ್ದ ಕಥೆ ಪ್ರೇಕ್ಷಕರ ಪ್ರಶಂಸೆ ಗಿಟ್ಟಿಸಿಕೊಂಡಿದೆ.

ಮಾರ್ಚ್ 4ರಂದು ರಾಜ್ಯಾದ್ಯಂತ ತೆರೆಗೆ ಬಂದ ಕನ್ನೇರಿ ಸಿನಿಮಾದಲ್ಲಿ ಅರ್ಚನಾ ಮಧುಸೂದನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಕರಿಸುಬ್ಬು, ಅರುಣ್ ಸಾಗರ್, ಎಂಕೆ ಮಠ ಸೇರಿದಂತೆ ಅನುಭವಿ ತಾರಾಬಳಗ ಸಿನಿಮಾದಲ್ಲಿದೆ. ಬುಡ್ಡೀಸ್ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಚಿತ್ರ ನಿರ್ಮಾಣ ಮಾಡಿದ್ದು, ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ಕೈಚಳಕವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌ ಸಿನಿಮಾಗೆ ಕಿಕ್ ಸ್ಟಾರ್ಟ್...ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರಕ್ಕೆ ಯುವಧೀರ ನಾಯಕ

Sat May 21 , 2022
ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ, ಗುಡ್ ಗುಡ್ಡರ್ ಗುಡೆಸ್ಟ್ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ನಿನ್ನೆ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಮುಹೂರ್ತ ನೆರವೇರಿದ್ದು, ಜೀ ಕನ್ನಡದ ಡಿಕೆಡಿ ಶೋ ವಿನ್ನರ್ ಚೈತ್ರಾಲಿ ಕ್ಲ್ಯಾಪ್ ಮಾಡಿದ್ರೆ, ಬೂಸೆ ಗೌಡ ಎಂಬ ಭರತನಾಟ್ಯದಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ಅಂಧರೊಬ್ಬರು ಕ್ಯಾಮೆರಾಗೆ ಚಾಲನೆ ನೀಡಿದರು. ಕಳೆದ ಹದಿನೈದು ವರ್ಷಗಳಿಂದ ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮಿಂಚು, ಜಾನಿ ಜಾನಿ […]

Advertisement

Wordpress Social Share Plugin powered by Ultimatelysocial