‘‘ಕಾಣೆಯಾದವರ ಬಗ್ಗೆ’’ ಚಂದನ್ ಮತ್ತು ಆಲ್ ಓಕೆ ಪ್ರಕಟಣೆ …!

ಸ್ಯಾಂಡಲ್​ವುಡ್ ಸಂಗೀತ ಲೋಕದಲ್ಲಿ ಱಪ್ ಹಾಡುಗಳ ಬಗ್ಗೆ ಹುಚ್ಚು ಹಚ್ಚಿಸಿದವರಲ್ಲಿ ಪ್ರಮುಖರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್ ಕುಮಾರ್.. ಈ ಇಬ್ಬರು ಒಂದು ಕಾಲದಲ್ಲಿ ಒಟ್ಟಿಗೆ ಕನ್ನಡ ಱಪ್ ಸಾಂಗ್​ಗಳನ್ನ ಸೃಷ್ಟಿಸಲು ಮುಂದವರು.. ಆದ್ರೆ ಕ್ರಮೆಣ ಅವರೊಂದು ದಾರಿ ಇವ್ರೊಂದು ದಾರಿಯಲ್ಲಿ ತಮ್ಮದೆ ಶೈಲಿಯಲ್ಲಿ ಱಪ್ ಸಾಂಗ್ಸ್​​ಗಳನ್ನ ಕನ್ನಡಿಗರಿಗೆ ಕೊಟ್ಟವರು ಕನ್ನಡದ ಜೊತೆಗೆ ಸಖಲ ಸಂಗೀತ ಪ್ರೀಯರಿಗೂ ಇಷ್ಟವಾದವರು..
ಈಗ ಇದೇ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಒಟ್ಟಿಗೆ ಸೇರಿ ಒಂದು ಹೊಸ ಱಪ್ ಸಾಂಗ್ ಅನ್ನ ಬಿಡುಗಡೆ ಮಾಡಲು ಮುಂದಾಗಿದ್ದಾರೆ.. ಹಾಗಾದ್ರೆ ಯಾವುದು ಆ ಱಪ್ ಸಾಂಗ್ ಅನ್ನೊ ಪ್ರಶ್ನೆಗೆ ಉತ್ತರ ಕಾಣೆಯಾದವರ ಬಗ್ಗೆ ಪ್ರಕಟಣೆ..
ಕಾಣೆಯಾದವರ ಬಗ್ಗೆ ಪ್ರಕಟಣೆ.. ವಿಶಿಷ್ಠ ಟೈಟಲ್​ನಿಂದ ಗಮನ ಸೇಳೆದಿರೋ ಸಿನಿಮಾ ಇದು.. ಱಂಬೋ 2 , ಕೃಷ್ಣ ರುಕ್ಕು ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಜೊತೆಗೆ ಫಸ್ಟ್ ಟೈಮ್ ಆ್ಯಕ್ಟಿಂಗ್ ಮಾಡಿರೋ ಸಿನಿಮಾ ಇದು.. ಸ್ಯಾಂಡಲ್​ವುಡ್​​ನ ಬಹು ಬೇಡಿಕೆಯ ಪೋಷಕ ಕಲಾವಿದರಾದ ರಂಗಾಯಣ ರಘು ,ಆರ್ಮುಗಂ ರವಿಶಂಕರ್, ತಬಲ ನಾಣಿ ಹಾಗೂ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಈ ‘‘ಕಾಣೆಯಾದವರ ಬಗ್ಗೆ ಪ್ರಕಟಣೆ’’ ಸಿನಿಮಾದಲ್ಲಿ..
ವೆನಿಲಾ ಐಸ್​ ಕ್ರೀಮ್ ಮೇಲೆ ಕಾಣೋ ಚರಿಯಂತೆ ಈ ಸಿನಿಮಾದಲ್ಲಿ ಚುಟು ಚುಟು ಬೆಡಗಿ , ಪಠಾಕಿ ಪೋರಿ ಆಶಿಕಾ ರಂಗನಾಥ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.. ಕೆಲ ದಿನಗಳ ಹಿಂದೆ ಒಂದು ಇಂಟರಸ್ಟಿಂಗ್ ಟ್ರೈಲರ್ ಬಿಟ್ಟು ಗಮ ಗಮನ ಸೇಳಿದ್ದಿದ್ದ ಕಾಣೆಯಾದವರ ಬಗ್ಗೆ ಪ್ರಕಟಣೆ ಟೀಮ್ ಈ ಬಾರಿ ಇಬ್ಬರು ಸ್ಟಾರ್ ರಾಪ್ ಸ್ಟಾರ್ಸ್​ಗಳನ್ನ ಒಟ್ಟು ಸೇರಿಸಿ ಹಾಡಿಸಿದ್ದಾರೆ..
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಕ್ರಾಂತಿ ಕುಮಾರ್ ಸಾಹಿತ್ಯದ ಸಿರಿಯಲ್ಲಿ ಒಂದು ಪಾರ್ಟಿ ಸಾಂಗ್ ಅನ್ನ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಅವರಿಂದ ಹಾಡಿಸಿದೆ ಚಿತ್ರತಂಡ..
ಈ ಹಾಡಿನಲ್ಲಿ ರಂಗಯಾಣ ರಘು , ತಬಲ ನಾಣಿ , ರವಿಶಂಕರ್ ಹಾಗೂ ಚಿಕ್ಕಣ ರಾಪ್ ಸ್ಟಾರ್​ಗಳಂತೆ ಕುಣಿದಿರೋದು ವಿಶೇಷ.. ಈ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾ ರಿಲೀಸ್ ಸಿದ್ಧವಾಗುತ್ತಿದ್ದು ಮುಂದಿನ ದಿನಗಳಲ್ಲಿ ಒಂದೊಳ್ಳೆ ಡೇಟ್ ನೋಡ್ಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

1XBET официальный сайт вход в личный 1XBET зеркало регистраци

Sun May 15 , 2022
1xbet официальный сайт 1xbet зеркало прямо сейчас Content ✋ Безопасность на сайте 1xbet Онлайн ставки на спорт Bet официальный сайт Bet казино 🤩 Виды спорта для ставок в букмекерской конторе 1xBet Как часто блокируют зеркало 1xbet? Bet зеркало: рабочая ссылка официального сайта Виды бонусов в казино 🔒 Простой способ войти […]

Advertisement

Wordpress Social Share Plugin powered by Ultimatelysocial