ಕಾನ್ಪುರ ವ್ಯಾಪಾರಿ ಪೀಯಾಷ್‌ ಜೈನ್‌, ಕೋಟಿ ಹಣವನ್ನು ನ್ಯಾಯಾಲಯ ವಶಪಡಿಸಿಕೊಂಡಿದೆ.

ಕಾನ್ಪುರದ ವ್ಯಾಪಾರಿ ಪೀಯೂಷ್ ಜೈನ್ ಅವರಿಂದ 177 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ ಪೀಯೂಷ್ ಜೈನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಿತಿಕಾ ಶ್ರೀವಾಸ್ತವ ರವರು ತಿಳಿಸಿದ್ದಾರೆ ಈ ಮೂಲಕ ತೆರಿಗೆ ಪಾವತಿವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ ನ್ಯಾಯಾಲಯವು ಸೋಮವಾರ 50 ವರ್ಷದ ಸುಗಂಧ ದ್ರವ್ಯ ವ್ಯಾಪಾರಿ ಪೀಯೂಷ್ ಜೈನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಸಲಾಗಿದೆಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ಅಧಿಕಾರಿಗಳು ಕಳೆದ ಬುಧವಾರ ಕಾನ್ಪುರ ಮೂಲದ ವ್ಯಾಪಾರಿಗೆ ಸಂಬಂಧಿಸಿರುವ ಆಸ್ತಿಗಳಲ್ಲಿ ಶೋಧ ನಡೆಸಿದ್ದು 177.45 ಕೋಟಿ ರೂ. ಲೆಕ್ಕಕ್ಕೆ ಸಿಗದ ನಗದನ್ನು ವಶಪಡಿಸಿಕೊಂಡಿದ್ದಾರೆ ʼಜಿಎಸ್ಟಿ ಅಧಿಕಾರಿಗಳು ಒದಗಿಸಿದ ದಾಖಲೆಯನ್ನು ಪ್ರಕಾರ ಕಾನ್ಪುರದ ಅವರ ಆವರಣದಲ್ಲಿ 177.45 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆʼ ಎಂದು ಸರ್ಕಾರಿ ವಕೀಲರಾದ ನಿತಿಕಾ ಶ್ರೀವಾಸ್ತವ ಹೇಳಿದ್ದಾರೆ ಜೈನ್‌ನ ಕಾನ್ಪುರದ ಆವರಣದಲ್ಲಿ ಶೋಧ ಕಾರ್ಯ ಮುಕ್ತಾಯಗೊಂಡಿದ್ದು ಕನೌಜ್‌ನಲ್ಲಿ ಇನ್ನೂ ಮುಂದುವರಿದಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ   ಜೈನ್ ಅವರ ಕನ್ನೌಜ್ ನಿವಾಸದಿಂದ ಸುಮಾರು 17 ಕೋಟಿ ರೂಪಾಯಿ ನಗದು ಮತ್ತು 23 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ ಮತ್ತು ಹೆಚ್ಚಿನ ಎಣಿಕೆ ನಡೆಯುತ್ತಿದೆʼ600 ಕೆಜಿಗಿಂತಲೂ ಹೆಚ್ಚು ಶ್ರೀಗಂಧದ ಎಣ್ಣೆ ಸೇರಿದಂತೆ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುವ ಲೆಕ್ಕಕ್ಕೆ ಬಾರದ ಬೃಹತ್ ಕಚ್ಚಾ ಸಾಮಗ್ರಿಗಳು ಭೂಗತ ಶೇಖರಣೆಯಲ್ಲಿ ಬಚ್ಚಿಟ್ಟಿದ್ದು ಮಾರುಕಟ್ಟೆ ಮೌಲ್ಯದ ರೂಪದಲ್ಲಿ ಸುಮಾರು 6 ಕೋಟಿ ರೂಪಾಯಿಗಳುʼ ಮಾರಾಟ ಮಾಡುತ್ತಿದ್ದರು ಸುಳಿವಿನ ಮೇರೆಗೆ ಅಹಮದಾಬಾದ್ ಘಟಕದ ಮೇರೆಗೆ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ ಡಿಜಿಜಿಐ ಅಧಿಕಾರಿಗಳು ಬುಧವಾರ ಕಾನ್ಪುರ ತಲುಪಿ ಶಿಖರ್ ಪಾನ್ ಮಸಾಲಾ ಮತ್ತು ತಂಬಾಕು ಉತ್ಪನ್ನಗಳನ್ನು ತಯಾರಿಸುವ ತ್ರಿಮೂರ್ತಿ ಫ್ರಾಗ್ರೆನ್ಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಖಾನೆ ಮತ್ತು ಕಚೇರಿಯಲ್ಲಿ ಶೋಧ ನಡೆಸಿದ್ದಾರೆ ಗಣಪತಿ ರೋಡ್ ಕ್ಯಾರಿಯರ್ಸ್ ಗೋಡೌನ್‌ಗಳು ಸುಗಂಧ ದ್ರವ್ಯಗಳ ಸಂಯುಕ್ತಗಳನ್ನು ಪೂರೈಸುವ ಕನೌಜ್‌ನಲ್ಲಿರುವ ಓಡೋಕೆಮ್ ಇಂಡಸ್ಟ್ರೀಸ್‌ನ ಪಾಲುದಾರರ ವಸತಿ ಆವರಣವನ್ನು ಸಹ ಶೋಧಿಸಲಾಗಿದೆ  ಎಂದು  ತಿಳಿಸಿದ್ದಾರೆ…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Third Wave Corona: ಮೂರನೇ ಅಲೆ‌ ಭಯದ ನಡುವೆ 3 ಸ್ವದೇಶಿ ಡೋಸ್​​ಗಳಿಗೆ ಸಿಡಿಎಸ್ಸಿಒ ಒಪ್ಪಿಗೆ;

Tue Dec 28 , 2021
ನವದೆಹಲಿ(ಡಿ. 28): ಕೊರೋನಾ ಮೂರನೇ ಅಲೆ ಬರಬಹುದು ಎಂಬ ದಟ್ಟ ವದಂತಿಯ ಹಿನ್ನೆಲೆಯಲ್ಲಿ ಕೋವಿಡ್ 19 ತಡೆಗೆ ಸಹಕಾರಿ ಆಗಲು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯು ಕೋವೊವಾಕ್ಸ್, ಕಾರ್ಬೆವಾಕ್ಸ್, ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ತುರ್ತು ಬಳಕೆಗಾಗಿ ಒಪ್ಪಿಗೆ ‌ಸೂಚಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮುನ್ಸುಖ್ ಮಾಂಡೋವಿಯಾ  ಟ್ವೀಟ್ ಮಾಡಿ ತಿಳಿಸಿದ್ದಾರೆ. ಸದ್ಯ ಕೋವೊವಾಕ್ಸ್, ಕಾರ್ಬೆವಾಕ್ಸ್, ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ಲಸಿಕೆಗಳ ತುರ್ತು ಬಳಕೆಗಾಗಿ […]

Advertisement

Wordpress Social Share Plugin powered by Ultimatelysocial