ಕರಣ್ ಜೋಹರ್ ಬರ್ತ್ ಡೇ ಪಾರ್ಟಿ: 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು

 

ಮುಂಬಯಿ:ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿ ಕೊರೊನಾ ವೈರಸ್ ಸೂಪರ್ ಸ್ಪ್ರೆಡರ್ ಈವೆಂಟ್ ಆಗಿದೆ ಎನ್ನಲಾಗಿದೆ. ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿಯಿಂದಾಗಿ 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಬಾಲಿವುಡ್‌ ಸ್ಟಾರ್‌ ನಿರ್ದೇಶಕ ಕರಣ್ ಜೋಹರ್ ಇತ್ತೀಚೆಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಜನ್ಮದಿನದ ಪಾರ್ಟಿಗೆ ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ಹಾಗೂ ಕಾಲಿವುಡ್ ತಾರೆಗಳ ದಂಡೇ ನೆರದಿತ್ತು.

ಸಿನಿಮಾರಂಗದ ಬಹುತೇಕ ಸ್ಟಾರ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಒಟ್ಟಾಗಿ ಒಂದೇ ಸೂರಿನಡಿ ಮಿಂಚಿದ್ದರು. ಇದೇ ವೇಳೆ ಹಲವರಿಗೆ ಕೋವಿಡ್‌ ಹರಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕರಣ್‌ ಜೋಹರ್‌ ಅವರು 50ನೇ ವರ್ಷದ ಜನ್ಮದಿನದ ಪಾರ್ಟಿಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದವರ ಪೈಕಿ 55 ಜನರಿಗೆ ಕೋವಿಡ್‌ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ ಈ ಪಾರ್ಟಿಯಲ್ಲಿ ಭಾಗವಹಿಸಿದ್ದವರಲ್ಲಿ ಯಾರು ಯಾರಿಗೆ ಕೋವಿಡ್‌ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಕರಣ್‌ ಜೋಹರ್‌ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ಷಯ್ ಕುಮಾರ್ ಸಿನಿಮಾ 'ಪೃಥ್ವಿರಾಜ್' ಅಲ್ಪ ಚೇತರಿಕೆ: 2ನೇ ದಿನ ಗಳಿಸಿದ್ದೆಷ್ಟು?

Mon Jun 6 , 2022
  ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾ ರಿಲೀಸ್‌ಗೂ ಮುನ್ನ ಬಹಳ ದೊಡ್ಡ ನಿರೀಕ್ಷೆಯನ್ನು ಮೂಡಿಸಿತ್ತು. ಈ ಸಿನಿಮಾ ಬಾಲಿವುಡ್‌ ಚಿತ್ರಗಳ ಸೂಪರ್ ಹಿಟ್ ಲಿಸ್ಟ್ ಸೇರುತ್ತದೆ ಎನ್ನಲಾಗಿತ್ತು. ಆದರೆ ಅದ್ಧೂರಿ ಪ್ರಚಾರದ ನಂತರವೂ, ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತಂತಿದೆ. ಚಿತ್ರದ ಬಾಕ್ಸಾಫೀಸ್ ಗಳಿಕೆಯೆ ಇದಕ್ಕೆ ಸಾಕ್ಷಿ ಆಗಿದೆ. ಜೂನ್ 3ರಂದು ರಿಲೀಸ್ ಆದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಎರಡನೇ […]

Advertisement

Wordpress Social Share Plugin powered by Ultimatelysocial